AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

500 ರೂ ನೋಟುಗಳ ಮೇಲೆ ನಕ್ಷತ್ರ ಚಿಹ್ನೆ ಇದ್ದರೆ ಅದು ಅಸಲಿಯೋ ನಕಲಿಯೋ?

500ರ ನೋಟುಗಳ ಮೇಲೆ ನಕ್ಷತ್ರ ಚಿಹ್ನೆ ಕಂಡು ಬರುವುದರಿಂದ ಸಾಕಷ್ಟು ಜನರು ಈ ನೋಟನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. 500 ರೂ ನೋಟುಗಳ ಮೇಲೆ ನಕ್ಷತ್ರ ಚಿಹ್ನೆ ಇದ್ದರೆ ಅದು ಅಸಲಿಯೋ ನಕಲಿಯೋ ಎಂಬ ಅನುಮಾನಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆಯನ್ನು ನೀಡಿದೆ.

500 ರೂ ನೋಟುಗಳ ಮೇಲೆ ನಕ್ಷತ್ರ ಚಿಹ್ನೆ ಇದ್ದರೆ ಅದು ಅಸಲಿಯೋ ನಕಲಿಯೋ?
ಅಕ್ಷತಾ ವರ್ಕಾಡಿ
|

Updated on: May 03, 2024 | 11:47 AM

Share

500 ರೂಪಾಯಿ ನೋಟಿನ ಬಗ್ಗೆ ಅನೇಕರಿಗೆ ಇನ್ನೂ ಅನುಮಾನಗಳಿವೆ. ಇತ್ತೀಚಿಗೆ 500ರ ನೋಟುಗಳ ಮೇಲೆ ನಕ್ಷತ್ರ ಚಿಹ್ನೆ ಕಂಡು ಬರುವುದರಿಂದ ಸಾಕಷ್ಟು ಜನರು ಈ ನೋಟನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಯಾಕೆಂದರೆ ಈ ನೋಟು ನಕಲಿಯೋ ಅಸಲಿಯೋ ಎಂಬ ಅನುಮಾನ ಸಾಕಷ್ಟು ಜನರಲ್ಲಿದೆ. ಆದ್ದರಿಂದ 500 ರೂ ನೋಟುಗಳ ಮೇಲೆ ನಕ್ಷತ್ರ ಚಿಹ್ನೆ ಇದ್ದರೆ ಅದು ಅಸಲಿಯೋ ನಕಲಿಯೋ ಎಂಬ ಅನುಮಾನ ನಿಮಗೂ ಇದ್ದರೆ ಇಲ್ಲಿ ನಿಮ್ಮ ಅನುಮಾನಕ್ಕೆ ಉತ್ತರವನ್ನು ಪಡೆಯಿರಿ.

ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಸ್ಪಷ್ಟನೆ:

500 ರೂ ನೋಟುಗಳ ಮೇಲೆ ನಕ್ಷತ್ರ ಚಿಹ್ನೆ ಇದ್ದರೆ ಅದು ಅಸಲಿಯೋ ನಕಲಿಯೋ ಎಂಬ ಅನುಮಾನಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆಯನ್ನು ನೀಡಿದೆ. ನಂಬರ್ ಪ್ಯಾನೆಲ್‌ನಲ್ಲಿ ನಕ್ಷತ್ರ ಗುರುತು ಇರುವ ನೋಟುಗಳು ನಕಲಿಯಲ್ಲ, ಅವು ಕೂಡ ಅಸಲಿ ನೋಟುಗಳೇ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ನಕ್ಷತ್ರ (*) ಗುರುತು ಇಲ್ಲದ ಇತರ ಬ್ಯಾಂಕ್ ನೋಟುಗಳಂತೆ ಇವುಗಳು ಅಸಲಿ ಎಂದು ಆರ್‌ಬಿಐ ವಿವರಿಸಿದೆ. 1ರಿಂದ 100ರವರೆಗಿನ ಕ್ರಮಸಂಖ್ಯೆಯ ನೋಟುಗಳಲ್ಲಿ ಮುದ್ರಣ ಸಮಸ್ಯೆ ಕಂಡುಬಂದಲ್ಲಿ ಅವುಗಳ ಜಾಗದಲ್ಲಿ ಈ ನಕ್ಷತ್ರ ಗುರುತು ಇರುವ ನೋಟುಗಳನ್ನು ಮುದ್ರಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಬಿರು ಬೇಸಿಗೆಯಿಂದ ಪಾರಾಗಲು ಆಟೋ ಚಾಲಕನ ಮಸ್ತ್ ಐಡಿಯಾ; ವೈರಲ್ ಆಯ್ತು ವಿಡಿಯೋ

ಇದಲ್ಲದೆ ರೂ. 10ರ ನಾಣ್ಯಗಳನ್ನು ಕೆಲವರು ಮಾನ್ಯವೆಂದು ಪರಿಗಣಿಸುವುದಿಲ್ಲ. ರೂ.10 ನಾಣ್ಯ ಮಾನ್ಯವಾಗಿರುತ್ತದೆ ಎಂದು ಆರ್‌ಬಿಐ ಪದೇ ಪದೇ ಹೇಳುತ್ತಲೇ ಇದೆ. ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಮತ್ತು ಮೆಟ್ರೋ ನಿಲ್ದಾಣಗಳು ಅವುಗಳನ್ನು ಸ್ವೀಕರಿಸಲಾಗುತ್ತದೆ. ಆದರೆ ಕೆಲವು ಅಂಗಡಿಗಳಲ್ಲಿ ಅರಿವಿಲ್ಲದ ಕಾರಣ ಅವುಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ ಎಂದು ಆರ್‌ಬಿಐ ಹೇಳಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ