Food Adulteration: ಒಣಗಿರುವ ಸೊಪ್ಪು ಕೆಲವೇ ನಿಮಿಷಗಳಲ್ಲಿ ಹೇಗೆ ತಾಜಾ ಸೊಪ್ಪಾಗಿ ಬದಲಾಗುತ್ತದೆ ನೋಡಿ, ಇಲ್ಲಿದೆ ವೈರಲ್​ ವಿಡಿಯೋ

ಇಲ್ಲೊಂದು ಸೊಪ್ಪನ್ನು ರಾಸಾಯನಿಕ ಮಿಶ್ರಿತ ನೀರಿನಲ್ಲಿ ಅದ್ದಿ ತೆಗೆಯುತ್ತಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಈ ಸೊಪ್ಪಿನಲ್ಲಿ ಆಗುವ ಬದಲಾವಣೆ ವಿಚಿತ್ರವಾಗಿದೆ. ಇದನ್ನು ವಿಡಿಯೋ ಮಾಡಲಾಗಿದ್ದು, ಮಾರ್ಚ್​ 17ರಂದು ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದೀಗಾ ಭಾರೀ ವೈರಲ್​ ಆಗಿದೆ.

Food Adulteration: ಒಣಗಿರುವ ಸೊಪ್ಪು ಕೆಲವೇ ನಿಮಿಷಗಳಲ್ಲಿ ಹೇಗೆ ತಾಜಾ ಸೊಪ್ಪಾಗಿ ಬದಲಾಗುತ್ತದೆ ನೋಡಿ, ಇಲ್ಲಿದೆ ವೈರಲ್​ ವಿಡಿಯೋ
ವೈರಲ್​ ವಿಡಿಯೋ
Image Credit source: NDTV

Updated on: Mar 21, 2023 | 7:00 PM

ಸಾಮಾನ್ಯವಾಗಿ ನೀವು ಅಂಗಡಿಗಳಿಂದ ತರಕಾರಿಗಳನ್ನು ಸರಿಯಾಗಿ ನೀರಿನಲ್ಲಿ ತೊಳೆದು ಮತ್ತೆ ಅಡುಗೆಯಲ್ಲಿ ಬಳಸುವುದುಂಟು. ಆದರೆ ಈ ಇಲ್ಲೊಂದು ಸೊಪ್ಪನ್ನು ರಾಸಾಯನಿಕ ಮಿಶ್ರಿತ ನೀರಿನಲ್ಲಿ ಅದ್ದಿ ತೆಗೆಯುತ್ತಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಈ ಸೊಪ್ಪಿನಲ್ಲಿ ಆಗುವ ಬದಲಾವಣೆ ವಿಚಿತ್ರವಾಗಿದೆ. ಇದನ್ನು ವಿಡಿಯೋ ಮಾಡಲಾಗಿದ್ದು, ಮಾರ್ಚ್​ 17ರಂದು ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದೀಗಾ ಭಾರೀ ವೈರಲ್​ ಆಗಿದೆ.

ಟ್ವಿಟ್ಟರ್ ಬಳಕೆದಾರರಾದ ಅಮಿತ್ ಥಧಾನಿ (@amitsurg) ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದ ಮೂಲವು ದೇವರಾಜನ್ ರಾಜಗೋಪಾಲನ್ ಅವರ ಲಿಂಕ್ಡ್‌ಇನ್ ಪೋಸ್ಟ್ ಎಂದು ಅವರು ಉಲ್ಲೇಖಿಸಿದ್ದಾರೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಸೊಪ್ಪಿನ ಗಂಟನ್ನು ರಾಸಯನಿಕದಲ್ಲಿ ಅದ್ದುವುದನ್ನು ಕಾಣಬಹುದು. ನಂತರ ಇದನ್ನು ತೆಗೆದು ಪಕ್ಕದಲ್ಲಿ ಒಣಗಲು ಇಡುವುದನ್ನು ಕಾಣಬಹುದು. ಕೆಲವು ಸೆಕೆಂಡ್‌ಗಳ ನಂತರ, ಮುದುಡಿ ಹೋಗಿದ್ದ ಎಲೆಗಳು ತೆರೆದುಕೊಳ್ಳುವುದನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಯಾವುದೇ ಈಗಷ್ಟೇ ಕಿತ್ತು ತಂದ ಸೊಪ್ಪಿನಂತೆ ಕಾಣುತ್ತದೆ. ಇಲ್ಲಿದೆ ನೋಡಿ ವಿಡಿಯೋ:

ಇದನ್ನೂ ಓದಿ: ಕರಡಿ ಮರಿಯನ್ನು ತಬ್ಬಿಕೊಂಡು ಮುದ್ದಾಡಿದರೆ ಸಾಕು ಕೈ ತುಂಬಾ ಸಂಬಳ, ಇಲ್ಲಿದೆ ನೋಡಿ ಜಾಬ್​​​ ಆಫರ್​​​ ಪೋಸ್ಟ್​​​

ವೀಡಿಯೊ Twitter ನಲ್ಲಿ 4,70ಸಾವಿರ ಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಮತ್ತು ಲಿಂಕ್ಡ್‌ಇನ್‌ನಲ್ಲಿ 2ಸಾವಿರಕ್ಕಿಂತಲೂ ಹೆಚ್ಚಿನ ಪ್ರತಿಕ್ರಿಯೆಗಳನ್ನು ಪಡೆದಿದೆ. ಆಹಾರ ಕಲಬೆರಕೆಯ ವಿಷಯದ ಬಗ್ಗೆ ಬಳಕೆದಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: