Viral Video: ಗೋವಿನ ಮೇಲೆ ಮೂಡಿದ ಪ್ರೇಮಿಗಳ ದಿನಾಚರಣೆಯ ಸಂಕೇತ, ಕಲಾವಿದನ ಕೈಚಳಕ ಹೇಗಿದೆ ನೋಡಿ

|

Updated on: Feb 16, 2024 | 10:59 AM

ವಿಡಿಯೋದಲ್ಲಿ ದನಗಾಹಿಯೊಬ್ಬ ಪ್ರೇಮಿಗಳ ದಿನಕ್ಕೆ ಹಸುವಿನ ಮೇಲೆ ಗುಲಾಬಿ ಬಣ್ಣದ ಡ್ರೆಸ್ ತೊಟ್ಟ ಹುಡುಗಿ ಮತ್ತು ಅವಳ ಹಿಂದೆ ಹೂಗುಚ್ಛ ಹಿಡಿದುಕೊಂಡು ಅವಳನ್ನು ಹಿಂಬಾಲಿಸುತ್ತಿರುವ ಹುಡುಗನನ್ನು ಸುಂದರವಾಗಿ ಚಿತ್ರಿಸಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.

Viral Video: ಗೋವಿನ ಮೇಲೆ ಮೂಡಿದ ಪ್ರೇಮಿಗಳ ದಿನಾಚರಣೆಯ ಸಂಕೇತ, ಕಲಾವಿದನ ಕೈಚಳಕ ಹೇಗಿದೆ ನೋಡಿ
Goshala Valentines Day Celebration
Image Credit source: Twitter
Follow us on

ಮೊನೆಯಷ್ಟೇ (ಫೆ 14) ಯಷ್ಟೇ ಪ್ರೇಮಿಗಳ ದಿನ ಮುಗಿದಿದೆ. ಪ್ರೇಮಿಗಳ ಪಾಲಿಗೆ ವ್ಯಾಲೆಂಟೈನ್ಸ್ ಡೇ ತುಂಬಾನೇ ಸ್ಪೆಷಲ್. ಪರಸ್ಪರ ಹೂವು ನೀಡಿ ಈ ದಿನವನ್ನು ಆಚರಿಸಿದರೆ ,ಗೋವುಗಳಿಗೆ ಮೇವು, ನೀರು, ಆಹಾರ ನೀಡಿ ಜೀವನ ಸಾಗಿಸುತ್ತಿರುವ ದನಗಾಹಿಯೊಬ್ಬರು ವಿಶೇಷವಾಗಿ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ. ಸದ್ಯ ಇವರ ಕ್ರಿಯೇಟಿವ್​​ ವ್ಯಾಲೆಂಟೈನ್ಸ್ ಡೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ವಿಡಿಯೋದಲ್ಲಿ ದನಗಾಹಿಯೊಬ್ಬ ಪ್ರೇಮಿಗಳ ದಿನಕ್ಕೆ ಹಸುವಿನ ಮೇಲೆ ಸುಂದರವಾಗಿ ಒಂದು ಹುಡುಗ ಮತ್ತು ಹುಡುಗಿಯ ಚಿತ್ರವನ್ನು ಬಿಡಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಹಸುವಿನ ಮೇಲೆ ಗುಲಾಬಿ ಬಣ್ಣದ ಡ್ರೆಸ್ ತೊಟ್ಟ ಹುಡುಗಿ ಮತ್ತು ಅವಳ ಹಿಂದೆ ಹೂಗುಚ್ಛ ಹಿಡಿದುಕೊಂಡು ಹೋಗುತ್ತಿರುವ ಹುಡುಗನನ್ನು ಸುಂದರವಾಗಿ ಚಿತ್ರಿಸಲಾಗಿದೆ. ಯುವಕನೊಬ್ಬ ಹಸುವನ್ನು ಹಿಡಿದುಕೊಂಡು ಹೋಗುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಪೊಲೀಸರಿಗೆ ಇಲ್ಲವಾಯ್ತಾ ರಕ್ಷಣೆ; ಠಾಣೆಗೆ ನುಗ್ಗಿ ಆರಕ್ಷಕರ ಮೇಲೆ ಅಮಾನುಷವಾಗಿ ಹಲ್ಲೆ 

ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹಲವರು ಕಾಮೆಂಟ್​​​ ಮೂಲಕ ಪ್ರೇಮಿಗಳ ದಿನದ ಶುಭಾಶಯ ಕೋರಿದ್ದಾರೆ. ‘ಈ ಹಸುವನ್ನು ಅಪ್ಪಿಕೊಂಡು ಪ್ರೇಮಿಗಳ ದಿನ ಆಚರಿಸಿ.ನಿಮ್ಮ ಪ್ರೀತಿ ಸಫಲವಾಗಲಿದೆ’ ಎಂದು ಕೆಲವರು ಭಾವನಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ವಿಡಿಯೋ ವೈರಲ್ ಆಗಿದೆ. ಗೋಶಾಲೆ ವ್ಯಾಲೆಂಟೈನ್ಸ್ ಡೇ ಸ್ಪಾಟ್ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:58 am, Fri, 16 February 24