Viral Video: ‘ಹುಟ್ಟಿದ್ದು ಒಂಟಿಗಾಲಲ್ಲಿ ಆದರೆ ಬದುಕಿನುದ್ದಕ್ಕೂ ನರ್ತಿಸುತ್ತೇನೆ’ ಫಾತೀಮಾ

|

Updated on: Sep 09, 2023 | 1:44 PM

Inspirational: ತಾವು ಅಂದುಕೊಂಡಂತೆ ಬದುಕುವ ಹಕ್ಕು ಎಲ್ಲರಿಗೂ ಇದೆ. ತಮ್ಮ ಆಸಕ್ತಿ ಅಭಿರುಚಿಗಳೊಳಗೆ ತೊಡಗಿಕೊಂಡು ಆತ್ಮವಿಶ್ವಾಸದಿಂದ ಬದುಕನ್ನು ಬೆಳಗಿಸಿಕೊಳ್ಳಬೇಕು. ಸುತ್ತಮುತ್ತಲಿನ ಜನರು ಇದಕ್ಕೆ ಪ್ರೋತ್ಸಾಹಿಸದಿದ್ದರೆ ಬೇಕಾದಂಥ ಪರಿಸರವನ್ನು ರೂಪಿಸಿಕೊಳ್ಳಲು ಖಂಡಿತ ಅವಕಾಶವಿದೆ. ಧೃತಿಗೆಡದೆ ಧೈರ್ಯದಿಂದ ಮುನ್ನಡೆಯಬೇಕು ಎನ್ನುವುದು ಫಾತೀಮಾ ಅಂಬೋಣ.

Viral Video: ಹುಟ್ಟಿದ್ದು ಒಂಟಿಗಾಲಲ್ಲಿ ಆದರೆ ಬದುಕಿನುದ್ದಕ್ಕೂ ನರ್ತಿಸುತ್ತೇನೆ ಫಾತೀಮಾ
ಫಾತೀಮಾ
Follow us on

Woman: ‘ಹುಟ್ಟಿದಾಗ ನನಗೆ ಒಂದೇ ಕಾಲಿತ್ತು. ನನ್ನ ಬಾಲ್ಯ ಎಲ್ಲರಂತಿರಲಿಲ್ಲ. ಅನೇಕ ವರ್ಷಗಳ ಕಾಲ ನಾನು ಒಂದೇ ಕಾಲಿನಲ್ಲಿ ಓಡಾಡಿದೆ. ಹಾಗಾಗಿ ಪ್ರತೀ ದಿನ ನೋವನ್ನು ಅನುಭವಿಸುತ್ತಿದ್ದೆ. ಶಾಲೆಯಲ್ಲಿ ನನ್ನ ಸಹಪಾಠಿಗಳು ನಿಂದಿಸುತ್ತಿದ್ದರು ಅಪಹಾಸ್ಯ ಮಾಡುತ್ತಿದ್ದರು. 12 ನೇ ತರಗತಿಯಲ್ಲಿ ನನಗೆ ವಿಶೇಷ ಅನುಮತಿ ಇದ್ದರೂ ಎಲ್ಲರೊಂದಿಗೆ ಶಾಲಾಪ್ರವಾಸಕ್ಕೆ (School Trip) ಹೋಗಲು ಸಾಧ್ಯವಾಗಲಿಲ್ಲ. ಅದು ನನ್ನ ಮನಸ್ಸಿನಲ್ಲಿ ಹಾಗೇ ಉಳಿದುಕೊಂಡುಬಿಟ್ಟಿತು. ಆದರೆ ಕಾಲೇಜು ದಿನಗಳು ನನ್ನನ್ನು ಬದಲಾಯಿಸಿದವು. ನಾನು ಸಾಕಷ್ಟು ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಲು ಪ್ರಾರಂಭಿಸಿದೆ.’

ಇದನ್ನೂ ಓದಿ : Viral Optical Illusion: ಎನ್​ಗಳ ಮಧ್ಯೆ ಎಷ್ಟು ಎಮ್​​ಗಳು ಅಡಗಿವೆ, 5 ಸೆಕೆಂಡುಗಳಲ್ಲಿ ಹುಡುಕುವಿರಾ?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಮೊದಲ ಸಲ ರ್ಯಾಂಪ್ ವಾಕ್ ಮಾಡಿದೆ. ಆಗ ಉಂಟಾದ ಖುಷಿ ಹೇಳತೀರದು. ಅಂದಿನಿಂದ ಇಂದಿನತನಕ ನನ್ನ ಪಯಣ ಸಾಗಿಯೇ ಇದೆ. ನನ್ನ ಮಿತಿಗಳ ಬಗ್ಗೆ ನನಗೆ ಗೊತ್ತು ಆದರೆ ಕನಸು ಕಾಣುವುದನ್ನು ನಾನು ನಿಲ್ಲಿಸುವುದಿಲ್ಲ. ನನ್ನನ್ನು ಕೀಳಾಗಿ ಕಂಡವರ ಮತ್ತು ನನ್ನನ್ನು ಹತ್ತಿಕ್ಕಲು ನೋಡಿದವರ ಮುಖಗಳನ್ನು ನೆನಪಿಸಿಕೊಳ್ಳುತ್ತೇನೆ. ಮತ್ತೆ ಮತ್ತೆ ಹೋರಾಡುವ ಆತ್ಮವಿಶ್ವಾಸ ಹೊಂದುತ್ತೇನೆ.’ ಫಾತೀಮಾ

ಬಾದಲ್ ಬರ್ಸಾ ಬಿಜಲೀ ಹಾಡಿಗೆ ಫಾತೀಮಾ ನೃತ್ಯ

ಇತರರ ಟೀಕೆಯಿಂದ ಹೆಜ್ಜೆ ಹಿಂದಿಕ್ಕಿದ ಅನೇಕರಿಗೆ ನೀವು ಮಾದರಿ ಎಂದಿದ್ದಾರೆ ಒಬ್ಬರು. ನೀವು ಧೈರ್ಯವಂತೆ, ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ಧಾರೆ ಅನೇಕರು. ನೀವು ನಿಮ್ಮನ್ನು ಸ್ವೀಕರಿಸಿದಾಗಲೇ ಅಂದುಕೊಂಡಂತೆ ಬದುಕುವುದು ಸಾಧ್ಯ, ಇದಕ್ಕೆ ನೀವೇ ಉದಾಹರಣೆ ಎಂದಿದ್ದಾರೆ ಒಬ್ಬರು. ನೀವು ತುಂಬಾ ಸುಂದರವಾಗಿದ್ದೀರಿ ಮತ್ತು ಪ್ರಯತ್ನಶೀಲೆಯಾಗಿದ್ದೀರಿ, ಒಳ್ಳೆಯದಾಗಲಿ ಎಂದು ಕೆಲವರು ಹೇಳಿದ್ಧಾರೆ.

ಕಾವಾಲಾ ಹಾಡಿಗೆ ಹೆಜ್ಜೆ ಹಾಕಿದ ಫಾತೀಮಾ

ಕೆಲವರು ಹುಟ್ಟಿನಿಂದಲೇ ಆತ್ಮಸ್ಥೈತ್ಯವುಳ್ಳವರಾಗಿರುತ್ತಾರೆ, ಅವರು ಇಡೀ ಜಗತ್ತಿಗೆ ಮಾದರಿ ಎನ್ನಿಸಿಕೊಳ್ಳುತ್ತಾರೆ, ಅಂಥವರ ಸಾಲಿನಲ್ಲಿ ನೀವಿದ್ದೀರಿ ಎಂದಿದ್ದಾರೆ ಮತ್ತೊಬ್ಬರು. ಈಕೆ ಎಲ್ಲರಂತೆ ತನ್ನ ಬದುಕನ್ನೂ ಅನುಭವಿಸುತ್ತಿದ್ದಾಳೆ, ಆಕೆಗೆ ಆ ಹಕ್ಕು ಇದೆ. ನಿಮಗಿಷ್ಟವಿಲ್ಲವಾದರೆ ನೀವು ಪ್ರತಿಕ್ರಿಯಿಸಬೇಡಿ, ಆಕೆ ದೇಹ ವೈಕಲ್ಯದಿಂದ ಕೂಡಿರಬಹುದು, ಆದರೆ ಮನಸ್ಸಲ್ಲ ಎಂದು ಕೆಲವರಿಗೆ ನೇರವಾಗಿ ಹೇಳಿದ್ಧಾರೆ ಒಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:43 pm, Sat, 9 September 23