Viral: ಚಹಾ ಪ್ರಿಯರೇ… ಈ ಸ್ಪೆಷಲ್‌ ಎಳನೀರಿನ ಟೀಯನ್ನು ಯಾವತ್ತಾದ್ರೂ ಕುಡಿದಿದ್ದೀರಾ?

ತಿಂಡಿ ತಿನಿಸುಗಳಲ್ಲಿ ಚಿತ್ರ ವಿಚಿತ್ರ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಗುಲಾಬ್‌ ದೋಸೆ, ಓರೊಯೋ ಪಕೋಡಾ, ಚಾಕೊಲೇಟ್‌ ಮ್ಯಾಗಿ, ಚಾಕೊಲೇಟ್‌ ಮೊಮೊಸ್‌ ಹೀಗೆ ಹಲವಾರು ವಿಚಿತ್ರ, ಪ್ರಯೋಗಗಳು ಈ ಮೊದಲು ಸಾಕಷ್ಟು ನಡೆದಿವೆ. ಇದಕ್ಕೆ ಸಂಬಂಧಪಟ್ಟ ಹಲವಾರು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದುಂಟು. ಇದೀಗ ಅಂತಹದ್ದೇ ವಿಡಿಯೋ ವೈರಲ್‌ ಆಗಿದ್ದು, ಮಹಿಳೆಯೊಬ್ಬರು ಎಳನೀರಿನಿಂದ ಬಿಸಿ ಬಿಸಿ ಟೀ ತಯಾರಿಸಿದ್ದಾರೆ. ಈ ದೃಶ್ಯವನ್ನು ಕಂಡು ಇನ್ನೂ ಏನೇನ್‌ ಮಾಡ್ತಾರೋ ಎಂದು ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.

Viral: ಚಹಾ ಪ್ರಿಯರೇ… ಈ ಸ್ಪೆಷಲ್‌ ಎಳನೀರಿನ ಟೀಯನ್ನು ಯಾವತ್ತಾದ್ರೂ ಕುಡಿದಿದ್ದೀರಾ?
ವೈರಲ್‌ ವಿಡಿಯೋ
Image Credit source: Hetal's Art/Instagram

Updated on: Apr 26, 2025 | 6:52 PM

ಚಹಾ (Tea) ಅಂದ್ರೆ ಹೆಚ್ಚಿನವರಿಗೆ ಸಿಕ್ಕಾಪಟ್ಟೆ ಇಷ್ಟ. ಬಹುತೇಕರು ಬೆಳಗ್ಗೆ ಎದ್ದು ಹಲ್ಲುಜ್ಜಿದ ತಕ್ಷಣ ಮೊದಲು ಮಾಡುವ ಕೆಲಸವೆಂದರೆ ಚಹಾ ಕುಡಿಯುವುದು. ಅದರಲ್ಲೂ ಚಹಾ ಪ್ರಿಯರು (tea lovers) ಎಷ್ಟು ಲೋಟ  ಟೀ ಬೇಕಾದ್ರೂ ಗಟಗಟನೇ ಕುಡಿಯುತ್ತಾರೆ. ನೀವು ಕೂಡ ಬ್ಲ್ಯಾಕ್‌ ಟೀ, ಗ್ರೀನ್‌ ಟೀ, ಹರ್ಬ್ಸ್‌ ಟೀ, ಮಸಾಲೆ ಚಹಾ ಅಂತೆಲ್ಲಾ ಬಗೆಬಗೆಯ ಚಹಾಗಳನ್ನು ಸವಿದಿರಬಹುದಲ್ವಾ. ಆದ್ರೆ ನೀವ್ಯಾವತ್ತಾದ್ರೂ ಎಳನೀರಿನ ಚಹಾ (coconut water tea) ಕುಡಿದಿದ್ದೀರಾ? ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಮಹಿಳೆಯೊಬ್ಬರು ಎಳನೀರಿನಿಂದ ಚಹಾವನ್ನು ತಯಾರಿಸಿದ್ದಾರೆ. ಹೌದು ನೀರಿನ ಬದಲು ಎಳನೀರಿನಲ್ಲಿ ಆಕೆ ಟೀ ಮಾಡಿದ್ದು, ಈ ದೃಶ್ಯವನ್ನು ಕಂಡು ಇನ್ನೂ ಏನೇನ್‌ ಮಾಡ್ತಾರೋ ಎಂದು ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.

ಎಳನೀರಿನಿಂದ ಬಿಸಿ ಬಿಸಿ ಚಹಾ ತಯಾರಿಸಿದ ಮಹಿಳೆ:

ಸಾಮಾನ್ಯವಾಗಿ ನೀರು, ಹಾಲನ್ನು ಮಿಶ್ರಣ ಮಾಡಿ ಚಹಾವನ್ನು ತಯಾರು ಮಾಡ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ ನೀರಿನ ಬದಲು ಎಳನೀರು ಹಾಕಿ ಮಹಿಳೆ ಬಿಸಿ ಬಿಸಿ ಚಹಾವನ್ನು ತಯಾರಿಸಿದ್ದಾಳೆ. ಈ ಕುರಿತ ವಿಡಿಯೋವನ್ನು _hetals_art_ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ಇದನ್ನೂ ಓದಿ
ನಮ್ಮ ಮೆಟ್ರೋದಲ್ಲಿ ಕುಳಿತು ವಿಮಲ್‌ ಪಾನ್‌ ಮಸಾಲಾ ಜಗಿದ ಪ್ರಯಾಣಿಕ
ಫೋನ್​ ಕಸಿದುಕೊಂಡ ಶಿಕ್ಷಕಿಯ ಜಡೆಹಿಡಿದು ಚಪ್ಪಲಿಯಲ್ಲಿ ಹೊಡೆದ ವಿದ್ಯಾರ್ಥಿನಿ
ಸ್ನಾನಕ್ಕೂ ಭಾರತದಿಂದ ನೀರು ಕೇಳಬೇಕು; ಟ್ರೋಲ್ ಮಾಡಿಕೊಂಡ ಪಾಕಿಸ್ತಾನೀಯರು!
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ಗ್ಯಾಸ್‌ ಒಲೆ ಮೇಲೆ ಸೀಯಾಳವನ್ನಿಟ್ಟು ಅದಕ್ಕೆ ಎಳನೀರು, ಚಹಾಪುಡಿ, ಸಕ್ಕರೆ, ಹಾಲು ಸೇರಿಸಿ ಬಿಸಿ ಬಿಸಿ ಚಹಾ ತಯಾರಿಸುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಕುಳಿತು ವಿಮಲ್‌ ಪಾನ್‌ ಮಸಾಲಾ ಜಗಿದ ಪ್ರಯಾಣಿಕ; ಭದ್ರತೆ ಬಿಗಿಗೊಳಿಸಿದ ಬಿಎಂಆರ್‌ಸಿಎಲ್

ವೈರಲ್‌ ವಿಡಿಯೋ ಇಲ್ಲಿದೆ ನೋಡಿ:

ಏಪ್ರಿಲ್‌ 2 ರಂದು ಶೇರ್‌ ಮಾಡಲಾದ ಈ ವಿಡಿಯೋ 2.5 ಲಕ್ಷ ವೀಕ್ಷಣಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಜನಗಳು ನಮ್ಮ ಭಾವನೆಗಳ ಜೊತೆ ಯಾಕೆ ಹೀಗೆ ಆಡ್ತಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದೆಂಥಾ ಹುಚ್ಚಾಟʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದೆಂಥಾ ಅವಸ್ಥೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.