Video : ರೀಲ್ಸ್‌ ತಂದ ಪಜೀತಿ; ಮನೆಯಂಗಳದಲ್ಲಿ ರೀಲ್ಸ್‌ ಮಾಡಲು ಹೋಗಿ ಮುಗ್ಗರಿಸಿ ಬಿದ್ದ ಯುವತಿ

ಈಗಿನ ಯುವಕ ಯುವತಿಯರಿಗೆ ರೀಲ್ಸ್ ಮಾಡುವುದೆಂದರೆ ಅದೇನೋ ಕ್ರೇಜ್. ಹೀಗಾಗಿ ಡೇಂಜರಸ್ ಸ್ಥಳಗಳಲ್ಲಿ ರೀಲ್ಸ್ ಮಾಡಲು ಹೋಗಿ ಪೇಚಿಗೆ ಸಿಲುಕೊಳ್ಳುವುದೇ ಹೆಚ್ಚು. ಸೋಶಿಯಲ್ ಮೀಡಿಯಾದಲ್ಲಿ ಇಂತಹ ವಿಡಿಯೋಗಳು ವೈರಲ್ ಆಗುವುದಿದೆ. ಇಲ್ಲೊಬ್ಬಳು ಯುವತಿಯೂ ಮಳೆ ಬಂದ ಖುಷಿಗೆ ಅಂಗಳದಲ್ಲಿ ರೀಲ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಬಳಕೆದಾರರು ಅತಿಯಾಗಿ ಆಡಿದ್ರೆ ಹೀಗೆ ಆಗೋದು ಎಂದು ಕಾಮೆಂಟ್‌ ಮಾಡಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ರೀಲ್ಸ್ (reels) ಮಾಡೋ ಕ್ರೇಜ್ ಸಿಕ್ಕಾಪಟ್ಟೆ ಇದೆ. ಮಕ್ಕಳಿಂದ ಹಿಡಿದು ದೊಡ್ಡದವರೆಗೂ ಕೈಯಲ್ಲಿ ಮೊಬೈಲ್‌ ಹಿಡಿದುಕೊಂಡು ರೀಲ್ಸ್‌ ಮಾಡುವವರೇ ಹೆಚ್ಚು. ಹೀಗೆ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಂತಹ ಘಟನೆಗಳು ಈ ಹಿಂದೆ ನಡೆದಿದೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಮಳೆ ಬಂದು ಹೋದ ಖುಷಿಯಲ್ಲಿ ಸಖತ್ ಆಗಿ ಡಾನ್ಸ್ ಮಾಡಲು ಹೋಗಿ ದೊಪ್ಪನೆ ಜಾರಿ ಬಿದ್ದು ಪಜೀತಿಗೆ ಸಿಲುಕಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (social media) ಸಿಕ್ಕಾಪಟ್ಟೆ ವೈರಲ್ ಆಗಿದೆ.

ರೀಲ್ಸ್ ತಂದ ಪಜೀತಿ

ಇದನ್ನೂ ಓದಿ
ಗಂಡ, ಮಗಳ ಮುಂದೆಯೇ ಸೋದರಳಿಯನನ್ನು ಮದುವೆಯಾದ ಮಹಿಳೆ!
73ನೇ ವಯಸ್ಸಿನಲ್ಲೂ 51 ಪುಶ್-ಅಪ್ ಮಾಡಿದ ತಮಿಳುನಾಡು ರಾಜ್ಯಪಾಲ
ಆಸ್ತಿ ಮಾರಾಟದ 19 ವರ್ಷದ ಬಳಿಕ ಖರೀದಿದಾರರಿಗೆ ತಲೆನೋವಾದ ಮಹಿಳೆ
ತಾಳಿ ಕಟ್ಟುವ ಶುಭ ವೇಳೆ ವಧುವಿನ ಒಪ್ಪಿಗೆ ಕೇಳಿದ ವರ

papakiparimampi ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಯುವತಿಯೊಬ್ಬಳು ರೀಲ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ. ಹೌದು, ಮಳೆ ಬಂದು ಅಂಗಳ ಒದ್ದೆಯಾಗಿದ್ದು ವೆದರ್ ಚೆನ್ನಾಗಿದೆ ಎಂದುಕೊಂಡು ರೀಲ್ಸ್ ಮಾಡಲು ಹೋಗಿ ಮುಗ್ಗರಿಸಿ ಬಿದ್ದಿದ್ದಾಳೆ. ಈ ವಿಡಿಯೋದಲ್ಲಿ ಕೆಂಪು ಸೀರೆಯುಟ್ಟ ಯುವತಿಯೂ ಅಂಗಳದತ್ತ ಓಡಿಹೋಗಿ ಡಾನ್ಸ್ ಮಾಡುವ ಭರದಲ್ಲಿ ಕಾಲು ಜಾರಿ ಬೀಳುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ :ಗಂಡ, ಮಗಳ ಮುಂದೆಯೇ ಸೋದರಳಿಯನನ್ನು ಮದುವೆಯಾದ ಮಹಿಳೆ!

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಬಳಕೆದಾರರ ಕಾಮೆಂಟ್‌ಗಳು ಹೀಗಿವೆ

ಈ ವಿಡಿಯೋ ಈಗಾಗಲೇ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು ಈ ವಿಡಿಯೋ ನೋಡಿದ ನಂತರ ನಗು ತಡೆಯಲು ಆಗುತ್ತಿಲ್ಲ ಎಂದಿದ್ದಾರೆ. ಮತ್ತೊಬ್ಬರು, ಅದಕ್ಕೆ ಹೇಳೋದು ಅತಿಯಾಗಿ ಆಡಿದ್ರೆ ಹೀಗೆ ಆಗೋದು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಪ್ರೀತಿಯಲ್ಲಿ ಬೀಳೊದು ಅಂದ್ರೆ ಹೀಗೇನೆ ಇರ್ಬೇಕು ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:12 am, Sun, 22 June 25