Viral: ಹೆಣ್ಣಿನ ಆಸೆಗೆ 8 ಲಕ್ಷ ರೂ ಕಳೆದುಕೊಂಡ ಯುವಕ

ಅದೆಷ್ಟೋ ಯುವಕರು ಸ್ಕ್ಯಾಮ್​​​​ನಿಂದ ಕೋಟಿ ಕೋಟಿ ಹಣವನ್ನು ಕಳೆದುಕೊಳ್ಳುತ್ತಾರೆ. ಕೆಲವೊಂದು ಕಡೆ ಪ್ರಾಣ ಕೂಡ ಹೋಗಿರುವ ಉದಾಹರಣೆಗಳು ಕೂಡ ಇದೆ. ಇದೀಗ ಇಲ್ಲೊಂದು ಘಟನೆ ಕೂಡ ಅದೇ ರೀತಿಯಲ್ಲಿ ನಡೆದಿದ್ದು, ಗುಡ್ ನೈಟ್, ಸಿಂಡರೆಲ್ಲಾ ಎಂಬ ಹಗರಣದ ಮೂಲಕ ತನ್ನಲ್ಲಿದ್ದ 8 ಲಕ್ಷ ರೂ ಹಣವನ್ನು ಕಳೆದುಕೊಂಡಿದ್ದಾನೆ. ಮೂರು ಜನ ಮಹಿಳೆಯರಿಂದ ಮೋಸ ಹೋಗಿದ್ದಾನೆ . ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

Viral: ಹೆಣ್ಣಿನ ಆಸೆಗೆ 8 ಲಕ್ಷ ರೂ ಕಳೆದುಕೊಂಡ ಯುವಕ
ವೈರಲ್​​​​​ ವಿಡಿಯೋ

Updated on: Aug 14, 2025 | 4:18 PM

ಯುವಕರನ್ನು ಹ್ಯಾಕ್​​ ಮಾಡಿ ಅವರಿಂದ ಲಕ್ಷ ಲಕ್ಷ ಹಣ ದೋಚುವ ಗ್ಯಾಂಗ್​​​ಗಳು ಹೆಚ್ಚಾಗುತ್ತಿದೆ. ಅನೇಕ ಯುವಕರು ಹುಡುಗಿಯರ ಆಸೆಗೆ ತಮ್ಮಕೈಯಲ್ಲಿರುವ  ಹಣವನ್ನು ಕಳೆದುಕೊಂಡಿರುವ ಘಟನೆಗಳು ಆಗ್ಗಾಗೆ ಬೆಳಕಿಗೆ ಬಂದಿರುವುದನ್ನು ಕಾಣಬಹುದು. ತಮ್ಮ ಮೈಮಾಟದ ಮೂಲಕ ಹುಡುಗರನ್ನು ಪರಿಚಯ ಮಾಡಿಕೊಂಡು, ಸುಳ್ಳು ಆಸೆಗಳನ್ನು ತೋರಿಸಿ, ನಂತರ ಅವರಲ್ಲಿರುವ ಎಲ್ಲವನ್ನು ದೋಚಿಕೊಂಡು ಹೋಗುತ್ತಾರೆ. ಇದೀಗ ಇಲ್ಲೊಬ್ಬ ಯುವಕ ತನ್ನ ದೈಹಿಕ ಆಸೆಗಾಗಿ ಲಕ್ಷ ಲಕ್ಷ ಕಳೆದುಕೊಂಡಿದ್ದಾನೆ. ಗುಡ್ ನೈಟ್, ಸಿಂಡರೆಲ್ಲಾ (Good Night, Cinderella Scam) ಎಂಬ ಹಗರಣದಲ್ಲಿ ಮೂವರು ಮಹಿಳೆಯರಿಂದ ಮೋಸ ಹೋಗಿದ್ದಾನೆ. ಈ ಮೂವರು ಮಹಿಳೆಯರು ಮಾದಕ ದ್ರವ್ಯ ಸೇವಿಸಿ ದರೋಡೆ ಮಾಡಿದ್ದಾರೆ. ಈ ಮಾದಕ ದ್ರವ್ಯವನ್ನು ಸೇವನೆ ಮಾಡಿ ಕಡಲತೀರದಲ್ಲಿ ಬಿದ್ದಿದ್ದಾನೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್​​ ಆಗುತ್ತಿದೆ.

ಡೈಲಿ ಸ್ಟಾರ್ ವರದಿಯ ಪ್ರಕಾರ, ಆಗಸ್ಟ್ 8 ರ ಮುಂಜಾನೆ ರಿಯೊ ಡಿ ಜನೈರೊದ ಜನಪ್ರಿಯ ಇಪನೆಮಾ ಬೀಚ್‌ನಲ್ಲಿ ಈ ಘಟನೆ ನಡೆದಿದೆ . ಈ ಬಗ್ಗೆ ಸಿಸಿಟಿವಿ ವಿಡಿಯೋ ವೈರಲ್​​ ಆಗಿದೆ. ಈ ಮೂವರು ಮಹಿಳೆಯರನ್ನು ಅಮಂಡಾ ಕೌಟೊ ಡೆಲೋಕಾ, (23), ಮಾಯಾರಾ ಕೆಟೆಲಿನ್ ಅಮೆರಿಕೊ ಡ ಸಿಲ್ವಾ, (26), ಮತ್ತು ರೈಯಾನೆ ಕ್ಯಾಂಪೋಸ್ ಡಿ ಒಲಿವೆರಾ, (27) ಎಂದು ಗುರುತಿಸಲಾಗಿದೆ. ಮಹಿಳೆಯರು ಇಂತಹ ಬಳಿ ಇದ್ದ ಹಣ ಹಾಗೂ ಮೊಬೈಲ್​​ ಜತೆಗೆ ಸ್ಥಳದಿಂದ ಪರಾರಿಯಾಗಿದ್ದಾರೆ. ಮೋಸ ಹೋಗಿರುವ ವ್ಯಕ್ತಿಯನ್ನು ಬ್ರಿಟನ್​​​ನ ವ್ಯಕ್ತಿ ಎಂದು ಹೇಳಲಾಗಿದೆ. ಈತ ಬ್ರೆಜಿಲ್‌ನಲ್ಲಿ ರಜೆಯ ಕಾರಣ ಸುತ್ತಾಡಲು ಬಂದಿದ್ದಾನೆ.

ಇದನ್ನೂ ಓದಿ
ಸ್ಯಾಲರಿ ಕ್ರೆಡಿಟ್ ಆದ ಕೆಲವೇ ನಿಮಿಷಕ್ಕೆ ಜಾಬ್ ರಿಸೈನ್ ಮಾಡಿದ ಉದ್ಯೋಗಿ
IIM -B ಸಂಸ್ಥೆಯ ಜಾಕೆಟ್​​ ಹಾಕಿಕೊಂಡು ಆಟೋ ಓಡಿಸಿದ ಚಾಲಕ
ಅವಾಚ್ಯ ಶಬ್ದ ಬಳಸುವುದರಲ್ಲಿ ದೆಹಲಿ ನಂಬರ್​​ ಒನ್
1 ತಿಂಗಳ ಕಸವನ್ನು 15 ಸೆಕೆಂಡುಗಳಲ್ಲಿ ಸ್ವಚ್ಛಗೊಳಿಸಿದ ವಿದೇಶಿಗ

ಇಲ್ಲಿದೆ ನೋಡಿ ವೈರಲ್​​ ಪೋಸ್ಟ್​​​:

ಈತ ಜತೆಗೆ ಮತ್ತೊಬ್ಬ ವ್ಯಕ್ತಿ ಕೂಡ ಇದ್ದ, ಇವರಿಬ್ಬರು ಬಾರ್‌ಗೆ ಹೋಗುವ ಮೊದಲು ಬೀಚ್‌ನಲ್ಲಿ ಡ್ಯಾನ್ಸ್​​ ಮಾಡುತ್ತಿದ್ದ ಮೂರು ಮಹಿಳೆಯರನ್ನು ಪರಿಚಯ ಮಾಡಿಕೊಂಡಿದ್ದಾರೆ. ಈ ವೇಳೆ ಈತನಿಗೆ ಕೈಪಿರಿನ್ಹಾ ಕಾಕ್‌ಟೇಲ್‌ ಎಂಬ ಮಾದಕ ದ್ರವ್ಯವನ್ನು ನೀಡಿದ್ದಾರೆ. ಇದನ್ನು ಕುಡಿದ ತಕ್ಷಣ ಈತನು ಪ್ರಜ್ಞೆ ತಪ್ಪಿದ್ದಾನೆ. ಈ ವೇಳೆ ಆತನ ಬ್ಯಾಂಕ್​​ನಲ್ಲಿದ್ದ £16,000 (18 ಲಕ್ಷ ರೂ) ಕ್ಕಿಂತ ಹೆಚ್ಚು ಹಣವನ್ನು ಮತ್ತು ಐಫೋನ್‌ ಜತೆಗೆ ಈ ಮೂವರು ಪರಾರಿಯಾಗಿದ್ದಾರೆ. ಇನ್ನು ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ. ಇಂತಹ ಘಟನೆಗಳು ಇಲ್ಲಿ ಹೆಚ್ಚಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಪ್ರವಾಸೋದ್ಯಮ ಘಟಕದ ತನಿಖಾಧಿಕಾರಿಗಳು ಈ ಮೂವರು ಮಹಿಳೆಯರನ್ನು ಕರೆದುಕೊಂಡು ಹೋದ ಕ್ಯಾಬ್​​ ಡ್ರೈವರನ್ನು ವಿಚಾರಣೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಚಾಲಕನಿಗೂ ಕೂಡ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಸ್ಯಾಲರಿ ಕ್ರೆಡಿಟ್ ಆದ ಕೆಲವೇ ನಿಮಿಷಕ್ಕೆ ಜಾಬ್ ರಿಸೈನ್ ಮಾಡಿದ ಉದ್ಯೋಗಿ

ಗುಡ್ ನೈಟ್, ಸಿಂಡ್ರೆಲ್ಲಾ ಹಗರಣ ಎಂದರೇನು?

ಗುಡ್ ನೈಟ್, ಸಿಂಡರೆಲ್ಲಾ” ಹಗರಣ – ಬೋವಾ ನೊಯ್ಟೆ ಸಿಂಡರೆಲಾ ಎಂದೂ ಕರೆಯಲ್ಪಡುವ ಅಪಾಯಕಾರಿ ಹಗರಣವಾಗಿದೆ. ಪಾನೀಯದಲ್ಲಿ ನಿಗೂಢವಾದ ಆಹಾರವನ್ನು ಹಾಕಿ ಅವರ ಪ್ರಜ್ಞೆ ತಪ್ಪಿಸುವುದು, ನಂತರ ಅವರಲ್ಲಿದ್ದ ಹಣ, ಬೆಲೆಬಾಳುವ ವಸ್ತುಗಳನ್ನು ದೋಚುವುದು ಈ ಗ್ಯಾಂಗ್​​​ನ ಕಾರ್ಯವಾಗಿದೆ. GHB, ರೋಹಿಪ್ನಾಲ್ ಅಥವಾ ಸ್ಕೋಪೋಲಮೈನ್‌ನಂತಹ ಈ ನಿದ್ರಾಜನಕಗಳು ಅರೆನಿದ್ರಾವಸ್ಥೆ, ಗೊಂದಲ, ಸ್ಮರಣಶಕ್ತಿ ನಷ್ಟಗೊಳಿಸುತ್ತದೆ. ಈ ವೇಳೆ ಇದಕ್ಕೆ ಬಲಿಯಾಗಿರುವ ವ್ಯಕ್ತಿಗೆ ಏನು ತಿಳಿಯುವುದೇ ಇಲ್ಲ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ