Viral Video: ಬೈಕ್ ಸವಾರಿ ಯಾರಿಗ್ ಬೇಕು ಗುರು, ಇದೇ ಒಂತರಾ ಚೆನ್ನಾಗಿದೆ, ಎಮ್ಮೆ ಸವಾರಿ ಹೋಗಿದೆ ನೋಡಿ 

ಆನೆ ಮತ್ತು ಕುದುರೆಗಳ ಮೇಲೆ ಸವಾರಿ ಮಾಡುವವರನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ನೀವೆಂದಾದರೂ ಎಮ್ಮೆಯ ಮೇಲೆ ಸವಾರಿ ಮಾಡಿದವರನ್ನು ನೋಡಿದ್ದೀರಾ?  ಇಲ್ಲೊಬ್ಬ ಆಸಾಮಿ ಈ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾನೆ. ಅಂತೂ ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ. ಹಾಗಿರುವಾಗ ಬೈಕ್ ಮೇಲೆ ಯಾರು ಸವಾರಿ ಮಾಡುತ್ತಾರೆ ಇದೇ ಒಂತರಾ ಚೆನ್ನಾಗಿದೆ ಎನ್ನುತ್ತಾ ಮಾಡ್ರನ್ ಯಮರಾಜನಂತೆ ಎಮ್ಮೆಯ ಮೇಲೆ ಸವಾರಿ ಹೊರಟಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Viral Video: ಬೈಕ್ ಸವಾರಿ ಯಾರಿಗ್ ಬೇಕು ಗುರು, ಇದೇ ಒಂತರಾ ಚೆನ್ನಾಗಿದೆ, ಎಮ್ಮೆ ಸವಾರಿ ಹೋಗಿದೆ ನೋಡಿ 
ವೈರಲ್​​​ ವಿಡಿಯೋ
Edited By:

Updated on: Nov 29, 2023 | 6:14 PM

ಸೋಶಿಯಲ್ ಮೀಡಿಯಾಗಳಲ್ಲಿ ರಾತ್ರೋರಾತ್ರಿ ವೈರಲ್ ಆಗುವ ಸಲುವಾಗಿ ಕೆಲವು ಜನರು ಎಂತಹ ಹುಚ್ಚು ಸಾಹಸಕ್ಕೂ ಬೇಕಾದರೂ ಕೈ ಹಾಕುತ್ತಾರೆ.  ಕೆಲವೊಬ್ಬರು ಕಷ್ಟಪಟ್ಟು ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಮಾಡಿದರೂ ಜನಪ್ರಿಯರಾಗಲು ಸಾಧ್ಯವಾಗುವುದಿಲ್ಲ, ಆದರೆ ಕೆಲವರು ತಮ್ಮ ಹಚ್ಚು ಸಾಹಸಗಳ ಕಾರಣಗಳಿಂದಾಗಿಯೇ ರಾತ್ರೋರಾತ್ರಿ ಫೇಮಸ್ ಆಗುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕನ ವಿಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ  ನಾವೆಲ್ಲರೂ ಕುದುರೆ ಹಾಗೂ ಆನೆಯ ಮೇಲೆ ಸವಾರಿ ಮಾಡುವವರನ್ನು ನೋಡಿರುತ್ತೇವೆ. ಆದರೆ ಈ ಹುಡುಗ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎನ್ನುತ್ತಾ ನಗರವೊಂದರ ರಸ್ತೆಯಲ್ಲಿ ರಾಜಾರೋಷವಾಗಿ ಮಾಡ್ರನ್ ಯಮರಾಜನಂತೆ ಎಮ್ಮೆಯ ಮೇಲೆ ಕುಳಿತು ಸವಾರಿ ಹೊರಟಿದ್ದಾನೆ.  ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ವಿಡಿಯೋವನ್ನು @bull_rider_077 ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾಗಿದ್ದು, ಯಮರಾಜ ತನ್ನ ವಾಹನವಾದ ಎಮ್ಮೆಯ  ಮೇಲೆ ಸವಾರಿ ಮಾಡುವಂತೆ ಈ ಯುವಕ ಕೂಡಾ ಎಮ್ಮೆಯ  ಮೇಲೆ ಸವಾರಿ ಮಾಡುವುದನ್ನು ಈ ವೈರಲ್ ವಿಡಿಯೋದಲ್ಲಿ ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋದಲ್ಲಿ ನಗರದವೊಂದರ ರಸ್ತೆಯೊಂದರಲ್ಲಿ ಯುವಕನೊಬ್ಬ ತಲೆಗೆ ಹೆಲ್ಮೆಟ್ ಧರಿಸಿ ಸ್ಟೈಲ್ ಆಗಿ ಎಮ್ಮೆಯ ಮೇಲೇರಿ ಯಮ ರಾಜನಂತೆ ಸವಾರಿ ಮಾಡುತ್ತಾ ಬರುತ್ತಾರೆ. ಈತನ ಈ ವಿಚಿತ್ರ  ಅವತಾರವನ್ನು ಕಂಡು,  ಅಲ್ಲಿದ್ದ ಜನ ಸಾಮಾನ್ಯರೆಲ್ಲಾ ಒಂದು ಬಾರಿ ಶಾಕ್ ಆಗಿ, ಅರೇ ಎಮ್ಮೆಯ ಮೇಲೂ ಸವಾರಿ ಮಾಡಬಹುದಾ ಎಂದು ಈತನನ್ನು ನೋಡಿ ನಸು ನಕ್ಕಿದ್ದಾರೆ. ಅಷ್ಟೇ ಯಾಕೆ ಇನ್ನೂ ಕೆಲವರು ಈತನ ಹುಚ್ಚು ಸಾಹಸದ ವಿಡಿಯೋ ಕೂಡಾ ಮಾಡುತ್ತಾರೆ.

ಇದನ್ನೂ ಓದಿ; ಇದು ಕಾಣಲು ಒಣ ಕಡ್ಡಿಯಂತೆಯೇ ಇದೆ, ಆದರೆ ಇದು ಕಡ್ಡಿಯಲ್ಲ, ಹಾಗಾದ್ರೆ ಏನಿದು? 

ಒಂದು ವಾರಗಳ ಹಿಂದೆ ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 5.7 ಮಿಲಿಯನ್ ವೀಕ್ಷಣೆಗಳನ್ನು, 321K ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವರು ಕಮೆಂಟ್ಸ್​​​ಗಳನ್ನು ಮಾಡಿದ್ದಾರೆ.  ಒಬ್ಬ ಬಳಕೆದಾರು ʼಯಮರಾಜನ ಹೊಸ ಅವತಾರ ಬರುತ್ತಿದೆʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಯುವಕ ನಿಜವಾದ ಲ್ಯಾಂಬೋರ್ಗಿನಿಯನ್ನು ಖರೀದಿಸಿದ್ದಾನೆʼ ಎಂದು ಕಾಲೆಳೆದಿದ್ದಾರೆ. ಮತ್ತೊಬ್ಬ ಬಳಕೆದಾರರು ʼ5G ಯಮರಾಜʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಯುವಕನ ಹುಚ್ಚು ಸಾಹಸವನ್ನು ಕಂಡು ನಗು ತಡೆಯಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ