AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಕುಟುಂಬದಲ್ಲಿದ್ದಾರೆ ಐವರು ಏಲಿಯನ್ಸ್​, ಹಿಂದಿನ ಕಥೆ ತಿಳೀರಿ

ಪ್ರಪಂಚದಲ್ಲಿ ನಾನಾ ರೀತಿಯ ಜನರಿದ್ದಾರೆ, ಪ್ರತಿಯೊಬ್ಬರೂ ತಮ್ಮದೇ ಆದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಕೆಲವೊಮ್ಮೆ ಹಲವು ಮಂದಿ ತುಂಬಾ ವಿಚಿತ್ರವಾಗಿ ಕಾಣಿಸಬಹುದು ಆದರೆ ಆ ಪರಿಸ್ಥಿತಿಯಲ್ಲಿ ಅವರನ್ನು ಗೇಲಿ ಮಾಡುವ ಬದಲು ಈ ಪರಿಸ್ಥಿತಿಗೆ ಕಾರಣವೇನೆಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು.? ದೇಹದಲ್ಲಿನ ಯಾವುದೇ ವಿರೂಪತೆಯ ಹಿಂದೆ ಒಂದು ಕಾರಣವಿದೆ ಮತ್ತು ಅದನ್ನು ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು ಅವಶ್ಯಕ.

ಈ ಕುಟುಂಬದಲ್ಲಿದ್ದಾರೆ ಐವರು ಏಲಿಯನ್ಸ್​, ಹಿಂದಿನ ಕಥೆ ತಿಳೀರಿ
ಏಲಿಯನ್ಸ್​
ನಯನಾ ರಾಜೀವ್
|

Updated on: Nov 30, 2023 | 10:29 AM

Share

ಪ್ರಪಂಚದಲ್ಲಿ ನಾನಾ ರೀತಿಯ ಜನರಿದ್ದಾರೆ, ಪ್ರತಿಯೊಬ್ಬರೂ ತಮ್ಮದೇ ಆದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಕೆಲವೊಮ್ಮೆ ಹಲವು ಮಂದಿ ತುಂಬಾ ವಿಚಿತ್ರವಾಗಿ ಕಾಣಿಸಬಹುದು ಆದರೆ ಆ ಪರಿಸ್ಥಿತಿಯಲ್ಲಿ ಅವರನ್ನು ಗೇಲಿ ಮಾಡುವ ಬದಲು ಈ ಪರಿಸ್ಥಿತಿಗೆ ಕಾರಣವೇನೆಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು.? ದೇಹದಲ್ಲಿನ ಯಾವುದೇ ವಿರೂಪತೆಯ ಹಿಂದೆ ಒಂದು ಕಾರಣವಿದೆ ಮತ್ತು ಅದನ್ನು ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು ಅವಶ್ಯಕ.

ಅವರು ಹೇಗೆ ಕಾಣುತ್ತಾರೆ ಎಂಬುದು ಮುಖ್ಯವಲ್ಲ ಅದರ ಹಿಂದಿರುವ ಕಾರಣವನ್ನು ಅರಿಯಬೇಕು. ಹಾಗೆಯೇ ಡೊಮಿನಿಕನ್ ರಿಪಬ್ಲಿಕ್​ನಲ್ಲಿ ಒಂದು ಕುಟುಂಬವಿದೆ 12 ಮಂದಿ ಸಹೋದರ, ಸಹೋದರಿಯರ ಪೈಕಿ 5 ಮಂದಿ ನೋಡಲು ಏಲಿಯನ್ಸ್​ ರೀತಿಯೇ ಇದ್ದಾರೆ.

ಸ್ವಾಭಾವಿಕವಾಗಿ ಅವರು ಹಾಗಿಲ್ಲ ಬದಲಾಗಿ ಅವರನ್ನು ಕಾಡುವ ಆರೋಗ್ಯ ಸಮಸ್ಯೆಯಿಂದ ಈ ರೀತಿ ಆಗಿದ್ದಾರೆ. ಸ್ಟಾರ್ ವರದಿಯ ಪ್ರಕಾರ, ಇದು ಒಟ್ಟು 12 ಸಹೋದರ ಸಹೋದರಿಯರ ಕುಟುಂಬವಾಗಿದ್ದು, ಅದರಲ್ಲಿ 7 ಮಂದಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಮುಖಗಳು ಸಾಮಾನ್ಯ ಜನರಿಗಿಂತ ಸಂಪೂರ್ಣವಾಗಿ ಭಿನ್ನವಾಗಿವೆ.

ಮತ್ತಷ್ಟು ಓದಿ: Viral Video: ಇದು ಕಾಣಲು ಒಣ ಕಡ್ಡಿಯಂತೆಯೇ ಇದೆ, ಆದರೆ ಇದು ಕಡ್ಡಿಯಲ್ಲ, ಹಾಗಾದ್ರೆ ಏನಿದು? 

ಅವರ ಕಣ್ಣುಗಳು ಉಬ್ಬುತ್ತಿರುವಂತೆ ಕಂಡುಬರುತ್ತವೆ, ಅವನ ಕೆನ್ನೆಯ ಮೂಳೆಗಳು ವಿಸ್ತರಿಸಲ್ಪಟ್ಟಿವೆ, ಅವನ ಮೂಗಿನ ಮೇಲೆ ಉಂಡೆಗಳ ರೀತಿ ಚರ್ಮ ಉಬ್ಬಿಕೊಂಡಿದೆ, ಹಲ್ಲುಗಳು ಮತ್ತು ಬಾಯಿಯು ಸಹ ವಿಚಿತ್ರವಾದ ಸ್ಥಿತಿಯಲ್ಲಿವೆ. ಅವನು ಬಾಲ್ಯದಿಂದಲೂ ಹೀಗೆಯೇ ಇದ್ದರು ಮತ್ತು ಜನರು ಅವರನ್ನು ಅನ್ಯಗ್ರಹ ಜೀವಿಗಳು ಎಂದು ಕರೆಯುತ್ತಿದ್ದರು. ಸ್ವಲ್ಪ ಸಮಯದ ನಂತರ, ಅವರು ಸ್ವತಃ ಮನುಷ್ಯರಿಗಿಂತ ಭಿನ್ನರು ಎಂದು ಭಾವಿಸಲು ಪ್ರಾರಂಭಿಸಿದರು.

ಅಷ್ಟಕ್ಕೂ ಇದರ ಹಿಂದಿನ ಕಾರಣವೇನು? ಮುಖದ ವಿಚಿತ್ರ ಆಕಾರದಿಂದಾಗಿ ಅವರು ತಲೆನೋವು, ತಲೆಸುತ್ತು, ದೇಹ ನೋವು ಮತ್ತು ಉಸಿರಾಟದ ತೊಂದರೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಇವರಿಗೆ ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ, ಈ ರೋಗವನ್ನು ಲಿಯೊಂಟಿಯಾಸಿಸ್ ಅಥವಾ ಲಯನ್ ಫೇಸ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.

ಇದರಲ್ಲಿ ಮುಖದ ಮೂಳೆಗಳ ಬೆಳವಣಿಗೆ ಹೆಚ್ಚುತ್ತದೆ ಮತ್ತು ಬಾಯಿ ಸಿಂಹದಂತೆ ಕಾಣಿಸಿಕೊಳ್ಳುತ್ತದೆ. ಇದು ಅಪರೂಪದ ಕಾಯಿಲೆಯಾಗಿದ್ದು, ವಿಶ್ವದಾದ್ಯಂತ ಕೇವಲ 40 ಪ್ರಕರಣಗಳಿವೆ ಎಂದು ನರವಿಜ್ಞಾನಿ ಡಾ.ಫ್ರಾಂಕ್ಲಿ ವಾಜ್ಕ್ವೆಜ್ ಹೇಳಿದ್ದಾರೆ.

ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಮತ್ತು ಅದರ ರೋಗಿಗಳು ದೀರ್ಘಕಾಲ ಬದುಕುತ್ತಾರೆ. ಇಂತಹ ರೋಗವಿದ್ದರೂ ತುಂಬಾ ವರ್ಷಗಳ ಕಾಲ ಬದುಕುತ್ತಾರೆ ಎಂಬುದೇ ಆಶ್ಚರ್ಯಕರ ಸಂಗತಿ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್