
ಸಂಬಂಧಿಕರು, ಹಿತೈಷಿ ಎನಿಸಿಕೊಂಡವರು ಎದುರಿಗೆ ಚೆನ್ನಾಗಿಯೇ ಮಾತನಾಡುತ್ತಾರೆ. ಆದರೆ ಬೆನ್ನ ಹಿಂದೆ ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುವುದಿದೆ. ಇನ್ನು ಕೆಲವರಿಗೆ ತಮ್ಮ ಜೀವನಕ್ಕಿಂತ ಬೇರೆಯವರ ಬದುಕಿನ ಬಗ್ಗೆಯೇ ಚಿಂತೆ. ಹೀಗಾಗಿ ಏನೇ ಮಾಡಿದ್ರು ತಪ್ಪು ಹುಡುಕುವ ಪ್ರಶ್ನೆ ಮಾಡುವ ಸಂಬಂಧಿಕರು ಇರುತ್ತಾರೆ. ಅದರಲ್ಲಿ ಮಾರ್ಕ್ಸ್ (Marks), ಕೆಲಸ ಹಾಗೂ ಮದುವೆ ವಿಚಾರದಲ್ಲಿ ಈ ಸಂಬಂಧಿಕರೆನಿಸಿಕೊಂಡ ಮಹಾನುಭಾವರು ಮೂಗುತುರಿಸುವುದು ಹೆಚ್ಚು. ಇಂತಹದ್ದೇ ಅನುಭವವು ಓದುತ್ತಿದ್ದ ಸಂದರ್ಭದಲ್ಲಿ ಈ ಹುಡುಗನಿಗೆ ಆಗಿತ್ತು. ಸಂಬಂಧಿಕರದ್ದು ಕೊಂಕು ಮಾತುಗಳು, ಅರ್ಥವಿಲ್ಲದ ಪ್ರಶ್ನೆಗಳು. ಕಂಪ್ಯೂಟರ್ ಸೈನ್ಸ್ (computer science) ಓದುತ್ತಿದ್ದ ಸಂದರ್ಭದಲ್ಲಿ ಇದರಿಂದ ಏನು ಲಾಭ ಇದೆ ಎಂದು ಆಡಿಕೊಂಡವರೇ ಹೆಚ್ಚಂತೆ. ಆದರೆ ನನಗೂ ಒಂದು ಟೈಮ್ ಬರುತ್ತೆ ಎಂದು ಕೊಂಡು ಅವರ ಮಾತುಗಳನ್ನೆ ಛಲವಾಗಿ ತೆಗೆದುಕೊಂಡು ಆಡಿಕೊಂಡವರ ಬಾಯಿ ಮುಚ್ಚಿಸಿದ್ದಾನೆ ಈ ಯುವಕ. ಹೌದು ತನ್ನಿಂದ 3 ಲಕ್ಷ ರೂ ಸಂಪಾದಿಸಲು ಸಾಧ್ಯವಿದೆ ಎಂದು ಸರಿಯಾಗಿ ತಿರುಗೇಟು ನೀಡಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Key-landscape6399 ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಪೋಸ್ಟ್ ನಲ್ಲಿ ಮಾರ್ಕ್ ಕಡಿಮೆ ಹಾಗೂ ಕೋರ್ಸ್ ಯಾಕೆ ತೆಗೆದುಕೊಂಡೆ ಎಂದು ಗೇಲಿ ಮಾಡುತ್ತಿದ್ದ ಸಂಬಂಧಿಕರಿಗೆ ಯುವಕನು ಹೇಗೆ ಉತ್ತರ ನೀಡಿದ್ದಾನೆ ಎಂದು ನೀವಿಲ್ಲಿ ನೋಡಬಹುದು. ತನ್ನ ಬ್ಯಾಂಕ್ ಬ್ಯಾಲೆನ್ಸ್ ಫೋಟೋದೊಂದಿಗೆ ತನ್ನ ಸಂಬಂಧಿಕರು ತನಗೆ ಏನೆಲ್ಲಾ ಹೇಳಿದ್ದರು ಎಂದು ಇಲ್ಲಿ ಉಲ್ಲೇಖಿಸಿದ್ದಾನೆ. ಬ್ಯಾಂಕ್ ಬ್ಯಾಲೆನ್ಸ್ ಫೋಟೋದೊಂದಿಗೆ ನನ್ನ ಕಂಪ್ಯೂಟರ್ ಕೋರ್ಸ್ ಆಯ್ಕೆ ಮಾಡಿಕೊಂಡದದ್ದು ಕಂಡು ಅಪಹಾಸ್ಯ ಮಾಡಿ ನಗುತ್ತಿದ್ದರು. ಆದರೆ ಇಂದು ನನ್ನ ಖಾತೆಯಲ್ಲಿ 3.25 ಲಕ್ಷ ರೂ ಇದೆ, ಇದು ನನ್ನ ಹೆತ್ತವರಿಗೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾನೆ. ಈ ಫೋಟೋದಲ್ಲಿ ಯುವಕನ ಬ್ಯಾಂಕ್ ಬ್ಯಾಲೆನ್ಸ್ 3.25 ಲಕ್ಷ ರೂ ಇರುವುದನ್ನು ನೀವು ನೋಡಬಹುದು.
They made fun of my ‘computer course’… today ₹3.25 lakh got credited. This one’s for my parents
byu/Key_Landscape6399 inIndian_flex ಇದನ್ನೂ ಓದಿ
ನಾನು ಹತ್ತನೇ ತರಗತಿಯಲ್ಲಿದ್ದಾಗ ನಾನು 60% ಅಂಕ ಪಡೆದುಕೊಂಡಿದ್ದೆ. ಈ ವೇಳೆಯಲ್ಲಿ ತನ್ನನ್ನು ಗೇಲಿ ಮಾಡಿ ನಕ್ಕಿದ್ದರು. ನನ್ನ ಚಿಕ್ಕಮ್ಮನೇ ನನ್ನನ್ನು ಎಷ್ಟೋ ಸಲ ಅಪಹಾಸ್ಯ ಮಾಡಿದ್ದರು. ನೀನು ಕಂಪ್ಯೂಟರ್ ಸೈನ್ಸ್ ಕೋರ್ಸ್ ಮಾಡ್ತಾ ಇದ್ದಿಯಾ. ತಿಂಗಳಿಗೆ ಒಂದರಿಂದ ಎರಡು ಲಕ್ಷ ರೂ ಸಂಪಾದಿಸಲು ಸಾಧ್ಯನಾ ಎಂದು ಕೇಳಿದ್ದರು. ಅಪ್ಪ ಅಮ್ಮನ ಮುಂದೆಯೇ ಈ ಮಾತುಗಳನ್ನು ಆಡುತ್ತಿದ್ದರು. ಆದರೆ ಅವರು ಇದನ್ನೆಲ್ಲಾ ಕೇಳಿಸಿಕೊಂಡು ಸುಮ್ಮನೆ ಇರುತ್ತಿದ್ದರು. ನನ್ನ ಕಿವಿಗೆ ಇಂತಹ ಮಾತುಗಳು ಬಿದ್ದಿದ್ದರೂ ನಾನು ಮಾತ್ರ ಏನು ಹೇಳುತ್ತಿರಲಿಲ್ಲ, ಒಳಗೊಳಗೆ ಒದ್ದಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ.
ನಾನು ಇಂಜಿನಿಯರ್ ಮಾಡ್ಲಿಲ್ಲ, ಐಐಟಿಗೂ ಹೋಗಿಲ್ಲ. ಸರ್ಕಾರಿ ಪಾಲಿಟೆಕ್ನಿಕ್‌ನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೊಮಾ ಮಾಡಿದ್ದೇನೆ. ಎಲ್ಲರೂ ಇದರಿಂದ ಏನು ಲಾಭ ಎಂದೆ ನನ್ನನ್ನು ಕೇಳುತ್ತಿದ್ದರು. ನಿಮ್ಮ ಹಿನ್ನೆಲೆ ಏನೇ ಇದ್ದರೂ ಕಠಿಣ ಪರಿಶ್ರಮ ಬಹಳ ಮುಖ್ಯ. ಅದು ಖಂಡಿತ ಸಣ್ಣದು ಅಲ್ಲ. ಇಂದು, ನೆಫ್ಟ್ ಮೂಲಕ ನನ್ನ ಖಾತೆಗೆ 3 ಲಕ್ಷ 25 ಸಾವಿರ 99 ರೂಪಾಯಿ ಜಮಾ ಆಗಿದೆ. ಇದು ನನ್ನ ಜೀವನದಲ್ಲಿ ಇದುವರೆಗೆ ಕ್ರೆಡಿಟ್ ಆದ ಅತಿ ದೊಡ್ಡ ಮೊತ್ತ. ಇಲ್ಲಿ ನಾನು ಹಣವನ್ನು ತೋರಿಸುತ್ತಿಲ್ಲ. ಆದರೆ ತಿಂಗಳಿಗೆ 10,000 ರೂ ಸಂಪಾದಿಸುವುದೇ ದೊಡ್ಡ ವಿಷಯವಾಗಿದ್ದ ಪುಟ್ಟ ಹಳ್ಳಿಯಿಂದ ಬಂದ ನಾನು ಇದೀಗ 3 ಲಕ್ಷ ರೂ ಸಂಪಾದಿಸಲು ಸಾಧ್ಯವಿದೆ. ಇದಕ್ಕೆ ನಾನೇ ಉದಾಹರಣೆಯಾಗಿದ್ದು ಇದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಹೇಳಿದ್ದಾನೆ.
ನಿಮ್ಮ ಹಿನ್ನಲೆ ಹೇಗೆ ಇರಲಿ, ನಿಮ್ಮನ್ನು ಅವಮಾನಿಸಿದರೆ ಅವರಿಗೆ ಎದುರುತ್ತರ ನೀಡಬೇಡಿ, ಅವರಿಗೆ ನಿಮ್ಮ ಕಾರ್ಯದಲ್ಲಿ ಉತ್ತರ ನೀಡಿ. ಆದರೆ ನೀವು ಎಂದಿಗೂ ದೊಡ್ಡ ದೊಡ್ಡ ಕನಸುಗಳನ್ನು ಕಾಣುವುದನ್ನು ನಿಲ್ಲಿಸಬೇಡಿ. ನನಗೆ ಅವನ ಕೈಯಲ್ಲಿ ಏನು ಮಾಡಲು ಆಗುವುದಿಲ್ಲ ಎಂದು ಹೇಳಿ ನಗುತ್ತಿದ್ದರು. ಆದರೆ ಇಂದು ನನಗೆ ಎಲ್ಲವೂ ಸಾಧ್ಯವಾಗಿದೆ. ಯಶಸ್ಸಿಗೆ ಪದವಿ ಹಾಗೂ ನಿಮ್ಮ ಹಿನ್ನಲೆ ಮುಖ್ಯವಾಗುವುದಲ್ಲ, ಆಲೋಚನೆ ಮಾತ್ರ ಮುಖ್ಯ. ನಾನು ಛಲದಿಂದ ಮುನ್ನುಗ್ಗಿದೆ. ಈಗ ನನ್ನ ಜೀವನ ಕಂಡು ಕೊಂಡೆ ಎಂದು ನನಗೆ ಅನಿಸುತ್ತದೆ ಎಂದು ಇಲ್ಲಿ ಬರೆದಿರುವುದನ್ನು ಕಾಣಬಹುದು.
ಇದನ್ನೂ ಓದಿ: Viral: 10-12 ಮನೆಗಳಲ್ಲಿ ದಿನಕ್ಕೆ 30 ನಿಮಿಷದ ಕೆಲಸ, ತಿಂಗಳಿಗೆ 2 ಲಕ್ಷ ರೂ ಸಂಬಳ, ಏನ್ ಕೆಲಸ ಗೊತ್ತಾ?
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು ನಾನು ನಿಮ್ಮಂತೆ ಸಾಕಷ್ಟು ಅವಮಾನ ಅನುಭವಿಸಿದ್ದೇನೆ. ಇದೀಗ ನನ್ನ ಪರಿಸ್ಥಿತಿಯೂ ನಿಮ್ಮಂತೆ ಆಗಿದೆ. ಜೀವನದಲ್ಲಿ ಗೆದ್ದಿದ್ದೇನೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ನಿಜಕ್ಕೂ ಎಲ್ಲರಿಗೂ ಮಾದರಿ. ನೀವು ಜೀವನದಲ್ಲಿ ಬಹಳಷ್ಟು ಸಾಧಿಸಿದ್ದೀರಿ. ಇನ್ನೂ ಹೆಚ್ಚಿನದ್ದನ್ನು ಸಾಧಿಸಲಿ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಜೀವನದ ಯಶಸ್ಸು ಹಾಗೂ ಸಂಬಂಧಿಕರಿಗೆ ಸರಿಯಾಗಿ ಉತ್ತರ ನೀಡಿದ್ದೀರಿ. ಒಳ್ಳೆಯದಾಗಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ