
ಪ್ರೀತಿಗೆ (Love) ಕಣ್ಣಿಲ್ಲ, ಯಾವಾಗ, ಯಾರ ಮೇಲಾದ್ರೂ ಲವ್ ಆಗ್ಬಹುದು. ಹೀಗೆ ತಾನು ಇಷ್ಟ ಪಟ್ಟ ಹುಡುಗ ಅಥವಾ ಹುಡುಗಿಯ ಜತೆಗೆ ಸುತ್ತಾಡುವುದು, ಸರ್ಪ್ರೈಸ್ ಉಡುಗೊರೆ ನೀಡಿ ಖುಷಿ ಪಡಿಸುವುದು ಮಾಮುಲಿ. ಆದರೆ ಇಲ್ಲೊಬ್ಬಳು ಯುವತಿ (young woman) ತನ್ನ ಪ್ರಿಯಕರ ಕೆಲಸ ಮಾಡುವ ರೆಸ್ಟೋರೆಂಟ್‌ಗೆ ತೆರಳಿ ತನ್ನ ಪ್ರೇಮಿಗೆ ಸರ್ಪ್ರೈಸ್ ನೀಡಿದ್ದಾಳೆ. ತನ್ನ ಲವರ್‌ನ್ನು ಊಟಕ್ಕೆ ಆಹ್ವಾನಿಸಿ ಆತನ ಮೊಗದಲ್ಲಿ ನಗು ಮೂಡಿಸಿದ್ದಾಳೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.
Kantalafc ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಸರ್ಪ್ರೈಸ್ ನೀಡುವುದನ್ನು ಕಾಣಬಹುದು. ಈ ವಿಡಿಯೋಗೆ ಇಂದಿನ ಕಾಲದಲ್ಲಿ ಇಂತಹ ಹುಡುಗಿಯರು ಸಿಗುವುದು ಅಪರೂಪ. ಎಲ್ಲರೂ ಹಣದ ಹಿಂದೆ ಹೋಗುವವರೇ ಆಗಿರುವಾಗ, ಕಷ್ಟ ಪಡುತ್ತಿರುವವನ ಜೊತೆ ನಿಲ್ಲುವ ಹುಡುಗಿಯರು ಬಹಳ ಕಡಿಮೆ ಎಂದು ಶೀರ್ಷಿಕೆ ನೀಡಲಾಗಿದೆ.
Nowadays, It’s rare to find a girl like this
Now all are golddiggers who want a guy with 50cr lpa
Very few women stay with strugglers
Day made, happy to see pic.twitter.com/qhzn86F7Xb
— Kantala fc (@ifOnlyKantala) January 11, 2026
ಈ ವಿಡಿಯೋದಲ್ಲಿ ಪ್ರಿಯಕರನು ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದು, ಆ ರೆಸ್ಟೋರೆಂಟ್‌ಗೆ ಯುವತಿಯೂ ತೆರಳಿದ್ದಾಳೆ. ರೆಸ್ಟೋರೆಂಟ್‌ನ ಟೇಬಲ್ ಮುಂದೆ ಕುಳಿತು ಪ್ರಿಯಕರನಿಗಾಗಿ ಕಾಯುತ್ತಿದ್ದಾಳೆ. ಅಲ್ಲೇ ಇದ್ದ ಇತರ ಸಿಬ್ಬಂದಿಗಳು ಈ ಯುವತಿಯನ್ನು ನೋಡಿ ಭಾಭಿ ಬಂದಿದ್ದಾರೆ, ಭಾಭಿ ಬಂದಿದ್ದಾರೆ ಎಂದು ಹೇಳುವುದನ್ನು ಕಾಣಬಹುದು. ಯುವಕನು ತಾನು ಮನಸಾರೆ ಇಷ್ಟ ಪಟ್ಟ ಹುಡುಗಿಯನ್ನು ತಾನು ಕೆಲಸ ಮಾಡುವ ಸ್ಥಳದಲ್ಲಿ ನೋಡಿ ಖುಷಿ ಪಟ್ಟಿದ್ದಾನೆ. ತಕ್ಷಣವೇ ಮ್ಯಾನೇಜರ್ ಬಳಿ ಹೋಗಿ ಅನುಮತಿ ಪಡೆದು, ತನ್ನ ಪ್ರಿಯತಮೆಯ ಪಕ್ಕದಲ್ಲಿ ಕುಳಿತು ಡಿನ್ನರ್ ಮಾಡುವುದನ್ನು ನೋಡಬಹುದು.
ಇದನ್ನೂ ಓದಿ: ಇದು ವೃದ್ಧ ದಂಪತಿಯ ಶುದ್ಧ ಪ್ರೀತಿ; ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಿದ ವೃದ್ಧ ವ್ಯಕ್ತಿ
ಜನವರಿ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ಜೋಡಿಯ ಪ್ರೀತಿ ಹೀಗೆಯೇ ಇರಲಿ ಎಂದಿದ್ದಾರೆ. ಇನ್ನೊಬ್ಬರು, ಇದು ನಿಜವಾದ ಪ್ರೀತಿ, ಹಣಕ್ಕಿಂತ ಮನಸ್ಸು ಮುಖ್ಯ ಎನ್ನುವುದನ್ನು ಈ ವಿಡಿಯೋ ಸಾರಿ ಹೇಳುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ರೀತಿಯ ಹುಡುಗಿಯರು ಸಿಗುವುದೇ ವಿರಳ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Wed, 14 January 26