Video: ಅಮೆರಿಕದಲ್ಲಿ ಕೆಲಸ ಕಳೆದುಕೊಂಡು ಕಣ್ಣೀರು ಸುರಿಸುತ್ತಾ ಭಾರತಕ್ಕೆ ಮರಳಿದ ಯುವತಿ

ಕೆಲಸ ಸಣ್ಣದಿರಲಿ ದೊಡ್ಡದಿರಲಿ, ಕೈಯಲ್ಲೊಂದು ಕೆಲಸವಿದ್ದರೆ ಒಂದು ಮರ್ಯಾದೆ. ಆದರೆ ಕೆಲವೊಮ್ಮೆ ಕಂಪನಿಗಳು ಉದ್ಯೋಗಿ ಕೆಲಸದಿಂದ ವಜಾಗೊಳಿಸಲಾಗುತ್ತದೆ. ಈ ವೇಳೆ ಕೆಲಸ ಕಳೆದುಕೊಂಡ ನೋವಿನ ನಡುವೆ ಮುಂದೇನು ಎನ್ನುವ ಪ್ರಶ್ನೆಯೊಂದು ಕಾಡುತ್ತದೆ. ಕೆಲಸ ಕಳೆದುಕೊಂಡ ಭಾರತೀಯ ಯುವತಿಯೂ ವಿದೇಶಕ್ಕೆ ಕಣ್ಣೀರ ವಿದಾಯ ಹೇಳಿದ್ದಾಳೆ. ಹೌದು, ಅಮೆರಿಕ ತೊರೆದು ತನ್ನ ತಾಯ್ನಾಡಿಗೆ ಮರಳುವ ನಿರ್ಧಾರ ಕೈಗೊಂಡಿದ್ದಾಳೆ. ಈ ಭಾವನಾತ್ಮಕ ವಿದಾಯದ ವಿಡಿಯೋ ವೈರಲ್ ಆಗುತ್ತಿದೆ.

Video: ಅಮೆರಿಕದಲ್ಲಿ ಕೆಲಸ ಕಳೆದುಕೊಂಡು ಕಣ್ಣೀರು ಸುರಿಸುತ್ತಾ ಭಾರತಕ್ಕೆ ಮರಳಿದ ಯುವತಿ
ವೈರಲ್‌ ವಿಡಿಯೋ
Image Credit source: Instagram

Updated on: Oct 02, 2025 | 1:00 PM

ಹೆಚ್ಚಿನವರಿಗೆ ವಿದೇಶಕ್ಕೆ ತೆರಳಿ ಒಂದೊಳ್ಳೆ ಉದ್ಯೋಗ ಪಡೆದು ಕೈತುಂಬಾ ಸಂಪಾದನೆ ಮಾಡ್ಬೇಕು, ಲೈಫ್ ಸೆಟ್ಲ್ ಆಗ್ಬೇಕು. ಮುಂದೆ ಜೀವನದ ಬಗ್ಗೆ ಯಾವುದೇ ಟೆನ್ಶನ್ ಇರಲ್ಲ ಹೀಗೆ ನಾನಾ ರೀತಿಯ ಆಲೋಚನೆಯಿರುತ್ತದೆ. ನೀವು ವಿದೇಶದಲ್ಲಿ ನೆಲೆಸಿದ್ದು ಕೈಯಲ್ಲಿರುವ ಕೆಲಸವೇ ಹೋದರೆ ಆ ಕ್ಷಣ ಹೇಗಿರುತ್ತದೆ ಎಂದು ಒಮ್ಮೆ ಯೋಚಿಸಿ. ಇದೇ ಪರಿಸ್ಥಿತಿಯೂ ಭಾರತೀಯ ಯುವತಿಯದ್ದಾಗಿದೆ. ಹೌದು ಅಮೆರಿಕದಲ್ಲಿ (America) ಕೆಲಸದಲ್ಲಿದ್ದ ಅನನ್ಯಾ ಜೋಶಿ (Ananya Joshi) ಕೆಲಸ ಕಳೆದುಕೊಂಡಿದ್ದಾಳೆ. ಬೇರೆ ಕೆಲಸ ಹುಡುಕುವ ಮನಸ್ಸು ಮಾಡದೇ ಕಣ್ಣೀರು ಹಾಕುತ್ತಲೇ ಅಮೆರಿಕಕ್ಕೆ ವಿದಾಯ ಹೇಳಿದ್ದಾಳೆ. ಭಾವುಕ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಯುವತಿಗೆ ಧೈರ್ಯ ತುಂಬುವ ಕೆಲಸವನ್ನು ಬಳಕೆದಾರರು ಮಾಡಿದ್ದಾರೆ.

ಅಮೆರಿಕಕ್ಕೆ ವಿದಾಯ ಹೇಳುವಾಗ ಯುವತಿ ಭಾವುಕ

ಅನನ್ಯಾ ಸ್ಟ್ರಗಲ್ಸ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಭಾರತೀಯ ಯುವತಿ ಅನನ್ಯಾ ಜೋಶಿ ಅಮೆರಿಕದಿಂದ ಭಾರತಕ್ಕೆ ಮರಳುವ ವಿಡಿಯೋ ಇದಾಗಿದೆ. ಅನನ್ಯಾ ಜೋಶಿ ಅಮೆರಿಕವನ್ನು ಬಿಡುವುದು ಭಾವನಾತ್ಮಕವಾಗಿ ತುಂಬಾ ನೋವು ಕೊಡುತ್ತಿದೆ. ಇದನ್ನು ಎದುರಿಸಲು ನನಗೆ ಸಾಧ್ಯವಾಗುತ್ತಿಲ್ಲ, ತಾನು ಇದುವರೆಗೆ ಕಠಿಣ ಹಂತವನ್ನು ಎದುರಿಸುತ್ತಿದ್ದೇನೆ ಹಾಗೂ ವಾಸ್ತವವನ್ನು ಒಪ್ಪಿಕೊಳ್ಳುತ್ತಿದ್ದೇನೆ.

ಇದನ್ನೂ ಓದಿ
ತಿಂಗಳಿಗೆ 60 ಸಾವಿರ ರೂ ಸಂಬಳದ ಉದ್ಯೋಗ ತೊರೆದ ಯುವತಿ
ಎಕ್ಸ್‌ನಲ್ಲಿ ಒಂದೇ ಒಂದು ಪೋಸ್ಟ್, ತಿಂಗಳಿಗೆ 30 ಸಾವಿರ ರೂ ಸಂಪಾದನೆ
ಒಂಟಿತನ ಹೋಗಲಾಡಿಸಲು ಹೊಸ ಮಾರ್ಗ ಕಂಡುಕೊಂಡ ಸಾಫ್ಟ್‌ವೇರ್‌ ಇಂಜಿನಿಯರ್
ಮೂವಿ ನೋಡೋಕ್ ಥಿಯೇಟರ್‌ಗೆ ಬಂದ್ರು ವರ್ಕ್‌ ಟೆನ್ಶನ್‌ ಮಾತ್ರ ತಪ್ಪಿಲ್ಲ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಅಮೆರಿಕ ತನ್ನ ಮೊದಲ ಮನೆಯಾಗಿತ್ತು, ಇಷ್ಟು ದಿನ ಅಮೆರಿಕದಲ್ಲಿ ಸಿಕ್ಕ ಅವಕಾಶಗಳಿಗೆ ಧನ್ಯವಾದಗಳು. ಅಲ್ಪ ಅವಧಿಯಲ್ಲೂ ನೀವು ನನಗೆ ನೀಡಿದ ಜೀವನವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ, ಐ ಲವ್ ಯು ಅಮೆರಿಕ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆತ್ಮೀಯ ವ್ಯಕ್ತಿಗಳನ್ನು ಬಿಟ್ಟು ಬರುವಾಗ ಹೃದಯ ಭಾರವಾಗಿದೆ. ಹೀಗಾಗಿ ಅಮೆರಿಕಕ್ಕೆ ಭಾವುಕ ವಿದಾಯ ಹೇಳಿದ್ದು ಯುವತಿಯೂ ಕಣ್ಣೀರು ಸುರಿಸಿದ್ದಾರೆ.

ಇದನ್ನೂ ಓದಿ:Video: ಸಂಬಳಕ್ಕಿಂತ ಆರೋಗ್ಯವೇ ಮುಖ್ಯ; ತಿಂಗಳಿಗೆ 60 ಸಾವಿರ ರೂ ಸಂಬಳದ ಉದ್ಯೋಗ ತೊರೆದ ಯುವತಿ

ಈ ವಿಡಿಯೋ ಹದಿನಾರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಎಂತಹ ವಿದಾಯದ ಕ್ಷಣ ನಿಜಕ್ಕೂ ಭಾವುಕ, ಮುಂದೇನು ಎನ್ನುವ ಪ್ರಶ್ನೆಯೊಂದಿಗೆ ಹುಟ್ಟೂರಿಗೆ ಮರಳುವುದು ಅನಿವಾರ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಒಳ್ಳೆಯ ದಿನಗಳು ಬರುತ್ತವೆ. ಧೈರ್ಯ ಕಳೆದುಕೊಳ್ಳಬೇಡಿ, ಯಾವುದೇ ಕ್ಷಣವನ್ನು ಬಿಟ್ಟು ಕೊಡಬೇಡಿ. ನೀವು ನೀವಾಗಿರಿ ಎಂದು ಹೇಳಿದ್ದಾರೆ. ನೀವು ಮತ್ತೊಬ್ಬರು ಅದ್ಭುತ ಸೃಷ್ಟಿಸುತ್ತೀರಿ. ಎಲ್ಲಾ ಶಕ್ತಿ ನಿಮಗೆ ಸಿಗಲಿ ಒಳ್ಳೆಯದಾಗಲಿ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ