ಹೋಳಿ ಹಬ್ಬವೆಂದು ವಾಟರ್ ಬಲೂನ್​ ಎಸೆದ ಯುವಕ; ಪಲ್ಟಿ ಹೊಡೆದ ಆಟೋ ರಿಕ್ಷಾ: ತಮಾಷೆ ಮಾಡಲು ಹೋಗಿ ಸೀರಿಯಸ್ಸಾದ ಘಟನೆ

ಹೋಳಿ ಹಬ್ಬದ ದಿನ ತಮಾಷೆ ಮಾಡಲು ಹೋಗಿ ಪರಿಸ್ಥಿತಿ ಗಂಭೀರವಾಗಿ ತಿರುಗಿದೆ. ಬಲೂನ್ ಎಸೆದವರು ಸ್ಥಳದಿಂದ ಪರಾರಿಯಾಗುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಬಾಗ್ಪತ್ ಪೊಲೀಸ್ ಅಧಿಕಾರಿಗಳು ಘಟನೆಯನ್ನು ಗಮನಿಸಿದ್ದಾರೆ.

ಹೋಳಿ ಹಬ್ಬವೆಂದು ವಾಟರ್ ಬಲೂನ್​ ಎಸೆದ ಯುವಕ; ಪಲ್ಟಿ ಹೊಡೆದ ಆಟೋ ರಿಕ್ಷಾ: ತಮಾಷೆ ಮಾಡಲು ಹೋಗಿ ಸೀರಿಯಸ್ಸಾದ ಘಟನೆ
ಪಲ್ಟಿ ಹೊಡೆದ ಆಟೋ ರಿಕ್ಷಾ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 24, 2022 | 1:26 PM

ಬಾಗ್‌ಪತ್: ಹೋಳಿ ಹಬ್ಬ (Holi Festival) ವನ್ನು ನಾವು ಬಣ್ಣಗಳ ಹಬ್ಬವೆಂದು ಕರೆಯುತ್ತೇವೆ. ಜೊತೆಗೆ ರುಚಿಕರವಾದ ತಿನಿಸು ಮತ್ತು ತಮಾಷೆಯ ಕುಚೇಷ್ಟೆಗಳಿಗೆ ಹೆಸರು ವಾಸಿಯಾಗಿದೆ. ಆದರೆ ಕೆಲವೊಮ್ಮೆ ಈ ಕುಚೇಷ್ಟೆಗಳು ತಪ್ಪು ತಿರುವು ಪಡೆದುಕೊಳ್ಳುತ್ತವೆ ಮತ್ತು ಪರಿಸ್ಥಿತಿ ತಮಾಷೆ ಮಾಡುವ ಬದಲು ಕೆಲವು ಕಠೋರ ಸನ್ನಿವೇಶಗಳಿಗೆ ಕಾರಣವಾಗುತ್ತದೆ. ಅಂತಹದೇ ಒಂದು ವಿಡಿಯೋ ಈಗ ವೈರಲ್ ಆಗಿದೆ. ಹೌದು ಯುಪಿಯ ಬಾಗ್‌ಪತ್‌ನಲ್ಲಿ ಸ್ಥಳೀಯರೋರ್ವರು ಎಸೆದ ನೀರಿನ ಬಲೂನ್‌ ಇಂದ ವೇಗವಾಗಿ ಬಂದ ಆಟೋ-ರಿಕ್ಷಾ ಅಪಘಾತಕ್ಕೀಡಾದಂತಹ ಘಟನೆ ಸಂಭವಿಸಿದೆ. ದೃಶ್ಯಗಳ ಪ್ರಕಾರ, ಆಟೋ-ರಿಕ್ಷಾವು ಅತೀ ವೇಗದಲ್ಲಿ ಚಲಿಸುತ್ತಿದ್ದು, ಮತ್ತು ಹಲವಾರು ಪ್ರಯಾಣಿಕರು ಅದರಲ್ಲಿ ಕುಳಿತುಕೊಂಡಿದ್ದಾರೆ. ವ್ಯಕ್ತಿಯೋರ್ವ ಆಟೋ ರಿಕ್ಷಾ ಮೇಲೆ ಬಲೂನ್ ಎಸೆದಾಗ ಅದು ನಿಯಂತ್ರಣ ತಪ್ಪಿ ತಕ್ಷಣ ಪಲ್ಟಿ ಹೊಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಹೋಳಿ ಹಬ್ಬದ ದಿನ ತಮಾಷೆ ಮಾಡಲು ಹೋಗಿ ಪರಿಸ್ಥಿತಿ ಗಂಭೀರವಾಗಿ ತಿರುಗಿದೆ. ಬಲೂನ್ ಎಸೆದವರು ಸ್ಥಳದಿಂದ ಪರಾರಿಯಾಗುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಬಾಗ್ಪತ್ ಪೊಲೀಸ್ ಅಧಿಕಾರಿಗಳು ಘಟನೆಯನ್ನು ಗಮನಿಸಿದ್ದಾರೆ. ಅಪಘಾತದಲ್ಲಿ ರಿಕ್ಷಾ ಚಾಲಕ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಾಗ್ಪತ್ ವೃತ್ತ ಅಧಿಕಾರಿ ಅನುಜ್ ಮಿಶ್ರಾ ಭಾನುವಾರ ಹೇಳಿದ್ದಾರೆ.

ಇದನ್ನೂ ಓದಿ:

ಉಕ್ರೇನ್​ ಸೈನಿಕನಿಗೆ ಹಣ ಸಹಾಯ ಮಾಡಿದ ರಾಮ್​ ಚರಣ್​; ಆ ವ್ಯಕ್ತಿಯ ಜತೆ ಇದೆ ವಿಶೇಷ ನಂಟು

ಪಾದಯಾತ್ರೆ ನಡೆಸುತ್ತಿದ್ದ ಆಂಧ್ರ ಸಿಎಂ ಸೋದರಿ ವೈ.ಎಸ್.ಶರ್ಮಿಳಾ ಮೇಲೆ ಜೇನುನೊಣ ದಾಳಿ; ಟವೆಲ್​ ಬೀಸುತ್ತ ಓಡಿದ ಕಾರ್ಯಕರ್ತರು

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್