ಇಂಟರ್​ವ್ಯೂನಲ್ಲಿ ‘ಸೂ..’ ಎಂದ ಅಭ್ಯರ್ಥಿ; ಕಂಪನಿ ಸಂಸ್ಥಾಪಕಿಗೆ ಶಾಕ್..! ಲಿಂಕ್ಡ್​ ಇನ್​ನಲ್ಲಿ ಪೋಸ್ಟ್ ವೈರಲ್

|

Updated on: Jul 30, 2024 | 5:03 PM

The Grump India owner's hiring horror story: ಅಭ್ಯರ್ಥಿಯೊಬ್ಬರನ್ನು ಕೆಲಸಕ್ಕಾಗಿ ಸಂದರ್ಶನ ಮಾಡುವಾಗ ಆದ ಕೆಟ್ಟ ಅನುಭವವೊಂದನ್ನು ಗ್ರಂಪ್ ಇಂಡಿಯಾ ಸಂಸ್ಥಾಪಕಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸಿಕ್ಯೂಟಿವ್ ಪೋಸ್ಟ್​ಗೆ ವಿಡಿಯೋ ಸಂದರ್ಶನಕ್ಕೆ ಕರೆಯಲಾಗಿತ್ತು. ವಿಡಿಯೋ ಆನ್ ಮಾಡಿಲ್ಲ ಯಾಕೆ ಎಂದು ಕೇಳಲಾಗಿತ್ತು. ಸಂದರ್ಶಿಸುತ್ತಿದ್ದ ಕಂಪನಿ ಮಾಲಕಿಯನ್ನೇ ಬಿಚ್ ಎಂದು ಕರೆಯಲಾಗಿದೆ. ಲಿಂಕ್ಡ್ ಇನ್​ನಲ್ಲಿ ಹಾಕಲಾದ ಈ ಪೋಸ್ಟ್ ವೈರಲ್ ಆಗಿದೆ.

ಇಂಟರ್​ವ್ಯೂನಲ್ಲಿ ‘ಸೂ..’ ಎಂದ ಅಭ್ಯರ್ಥಿ; ಕಂಪನಿ ಸಂಸ್ಥಾಪಕಿಗೆ ಶಾಕ್..! ಲಿಂಕ್ಡ್​ ಇನ್​ನಲ್ಲಿ ಪೋಸ್ಟ್ ವೈರಲ್
ಸೆನೈನ್ ಸಾವಂತ್
Follow us on

ಮುಂಬೈ, ಜುಲೈ 30: ಹಿಂದೆಲ್ಲಾ ಸಂದರ್ಶನ ಎಂದರೆ ಸಾಕಷ್ಟು ಪೂರ್ವತಯಾರಿ ಇರುತ್ತಿತ್ತು. ಸಂದರ್ಶನದಲ್ಲಿ ಸೌಜನ್ಯ, ಮುಜುಗರ ಎಲ್ಲವೂ ಮೇಳೈಸಿರುತ್ತಿತ್ತು. ಈಗಿನ ತಲೆಮಾರಿನವರು ಹೈ ಆ್ಯಟಿಟ್ಯೂಡ್ ಎನಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಇಂಬು ನೀಡುವಂಥ ಒಂದು ಅನುಭವವನ್ನು ಸ್ಟಾರ್ಟಪ್ ಉದ್ಯಮಿಯೊಬ್ಬರು ಹಂಚಿಕೊಂಡಿದ್ದಾರೆ. ದಿ ಗ್ರಂಪ್ ಎಂಬ ಸ್ಟಾರ್ಟಪ್​ನ ಸಂಸ್ಥಾಪಕಿ ಸೆನೈನ್ ಸಾವಂತ್ ಎಂಬಾಕೆ ಲಿಂಕ್ಡ್ ಇನ್​ನಲ್ಲಿ ಒಂದು ಘಟನೆ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸಿಕ್ಯೂಟಿವ್ ಪೋಸ್ಟ್​ಗೆ ಅಭ್ಯರ್ಥಿಯನ್ನು ಸಂದರ್ಶಿಸುವಾಗ ಆದ ಕಹಿ ಅನುಭವ ಅದು. ಇಡೀ ಘಟನೆಯನ್ನು ವಿವರಿಸುತ್ತಾ, ಅಭ್ಯರ್ಥಿ ತನ್ನನ್ನು ಸೂ… (Bi..h) ಎಂದು ಸಂಬೋಧಿಸಿದ್ದನ್ನು ತಿಳಿಸಿದ್ದಾರೆ.

ಗ್ರಂಪ್ ಇಂಡಿಯಾ ಸಂಸ್ಥೆಗೆ ಸೋಷಿಯಲ್ ಮೀಡಿಯಾ ಎಕ್ಸಿಕ್ಯೂಟಿವ್ ಪೋಸ್ಟ್​ಗೆ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ ಆಗಿತ್ತು. ಅವರನ್ನು ಕೂಡಲೇ ನೇಮಕಾತಿ ಮಾಡಿಕೊಳ್ಳಬಹುದು ಎನ್ನುವ ವಿಶ್ವಾಸ ಮೂಡಿಸುವಷ್ಟು ಮಾಹಿತಿ ಅವರ ಸಿವಿಯಲ್ಲಿ ಇರಲಿಲ್ಲ. ಅವರು ಎಕ್ಸಿಕ್ಯೂಟಿವ್ ಹುದ್ದೆಗೆ ಸರಿಹೊಂದುತ್ತಾರಾ, ಅಥವಾ ಇಂಟರ್ನ್ ಆಗಿ ಒಂದೆರಡು ತಿಂಗಳು ತರಬೇತಿ ಕೊಡಬೇಕಾ ಎಂಬುದನ್ನು ತಿಳಿಯಬೇಕಿತ್ತು. ಹಾಗಾಗಿ ವಿಡಿಯೋ ಸಂದರ್ಶನ ನಿಗದಿ ಮಾಡಲಾಯಿತು ಎಂದು ಸಾವಂತ್ ತಮ್ಮ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಕ್ಕಳ ಮುಂದೆಯೇ ಅಮ್ಮನಿಗೆ ಅವಮಾನ, ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದ ಗ್ರಾಮಸ್ಥರು

ವಿಡಿಯೋ ಸಂದರ್ಶನ ಜಾಯಿನ್ ಆದ ಆ ಅಭ್ಯರ್ಥಿಗಳು ಕ್ಯಾಮೆರಾ ಆಫ್ ಮಾಡಿಕೊಂಡಿದ್ದರು. ವಿಡಿಯೋ ಆನ್ ಮಾಡುವಂತೆ ಕೇಳಿದ್ದಕ್ಕೆ ತಮ್ಮ ಬಳಿ ಕಂಪ್ಯೂಟರ್ ಇಲ್ಲ, ಐಒಎಸ್ (ಆ್ಯಪಲ್) ಅಪ್​ಡೇಟ್ ಇರುವುದರಿಂದ ವಿಡಿಯೋ ಕಾಲ್ ಸಾಧ್ಯವಾಗುತ್ತಿಲ್ಲ. ಬೇಕಾದರೆ ಒಂದು ಲ್ಯಾಪ್​ಟಾಪ್ ಪಡೆದು ವಿಡಿಯೋ ಕಾಲ್ ಅಟೆಂಡ್ ಮಾಡುವುದಾಗಿ ಹೇಳಿದರು ಎಂದು ಗ್ರಂಪ್ ಇಂಡಿಯಾ ಮುಖ್ಯಸ್ಥೆ ತಮ್ಮ ನೇಮಕಾತಿ ಅನುಭವದ ವಿವರ ಹಂಚಿಕೊಂಡಿದ್ದಾರೆ. ಮುಂದಿನದು ಅವರನ್ನೇ ಬೆಚ್ಚಿಬೀಳಿಸುವಂತಹ ವರ್ತನೆಯ ಸನ್ನಿವೇಶ ಎದುರಾಗಿತ್ತು.

ಸೆನೈನ್ ಸಾವಂತ್ ಲಿಂಕ್ಡ್​ನಲ್ಲಿ ಹಾಕಿದ ಫೋಟೋಸ್

ಅವರು ಮತ್ತೆ ವಿಡಿಯೋ ಕಾಲ್ ಜಾಯಿನ್ ಆದಾಗ ವಿಡಿಯೂ ಆಫ್​ನಲ್ಲೇ ಇತ್ತು. ಅಲ್ಲಿಂದ ಟೆಕ್ಸ್ಟ್ ಮೆಸೇಜ್​ಗಳು ವಿನಿಮಯ ಆದವು. ವಿಡಿಯೋ ಇಂಟರ್​ವ್ಯೂ ಇರುತ್ತದೆ ಎಂದು ಸ್ಪಷ್ಟಪಡಿಸಲಾಗಿತ್ತು. ಐಒಎಸ್ ಅಪ್​ಡೇಟ್​ನಿಂದ ವಿಡಿಯೋ ಕಾಲ್ ಆಗುವುದಿಲ್ಲ ಎನ್ನುವುದನ್ನು ನಾನು ಕೇಳಿಯೇ ಇಲ್ಲ ಎದು ಸಾವಂತ್ ಹೇಳುತ್ತಾರೆ.

ಇದನ್ನೂ ಓದಿ: ಪ್ರೀತಿಯ ನಾಯಿ ಎಂದು ಸಿಕ್ಕಿದ್ದೆಲ್ಲಾ ತಿನ್ನಿಸಿ ಸಾವಿಗೆ ಕಾರಣವಾದ ಮಹಿಳೆಗೆ ಜೈಲುಶಿಕ್ಷೆ

ಇದು ಅಭ್ಯರ್ಥಿಯನ್ನು ರೊಚ್ಚಿಗೆಬ್ಬಿಸುತ್ತದೆ. ತಾನು ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಹಾಕಿದ್ದೆನೇ ಹೊರತು ಇಂಟರ್ನ್​ಶಿಪ್​ಗೆ ಅಲ್ಲ… ನನಗೆ ಒಂದು ವರ್ಷದ ಅನುಭವ ಇದೆ… ಸೂ… ಥರ ಆಡಬೇಡಿ. ತುಂಬಾ ದರ್ಪತನದಿಂದ ಮಾತನಾಡುತ್ತೀರಿ. ಯಾರೂ ಕೂಡ ನಿಮ್ಮೊಂದಿಗೆ ಮಾತನಾಡಲು ಇಷ್ಟಪಡಲ್ಲ ಎಂದು ಆ ವ್ಯಕ್ತಿ ತನಗೆ ಮೆಸೇಜ್ ಮಾಡಿದ್ದಾಗಿ ಸೆನೈನ್ ಸಾವಂತ್ ಸ್ಕ್ರೀನ್​ಶಾಟ್​ಗಳ ಸಮೇತ ಲಿಂಕ್ಡ್ ಇನ್ ಪೋಸ್ಟ್​ನಲ್ಲಿ ಹಾಕಿದ್ದಾರೆ.

ಅವರ ಪೋಸ್ಟ್​ನ ಲಿಂಕ್ ಇಲ್ಲಿದೆ…

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ