Viral: ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್ ಪರ ನಿಂತ ನಟ ಸೋನು ಸೂದ್, ಸಿಡಿದೆದ್ದ ನೆಟ್ಟಿಗರು

|

Updated on: Apr 13, 2024 | 2:53 PM

Sonu Sood: ಇತ್ತೀಚೆಗೆ ಪಾರ್ಸೆಲ್​​ ನೀಡಲು ಬಂದು ಮನೆಯ ಹೊರಗಿದ್ದ ಒಂದು ಜತೆ ಶೂವನ್ನು ಕದ್ದ ಸ್ವಿಗ್ಗಿ ಡೆಲಿವರಿ ಬಾಯ್ ವಿಡಿಯೋ ಇದೀಗ ಭಾರೀ ವೈರಲ್​ ಆಗಿತ್ತು. ಇದೀಗ ಈ ವಿಡಿಯೋ ನಟ ಸೋನು ಸೂದ್ ಪ್ರತಿಕ್ರಿಯಿಸಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಡೆಲಿವರಿ ಬಾಯ್ ಕದ್ದಿರುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಗುರುಗ್ರಾಮ್​​​ದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ (Swiggy delivery boy)​​ ಪಾರ್ಸೆಲ್​​ ನೀಡಲು ಬಂದು ಮನೆಯ ಹೊರಗಿದ್ದ ಒಂದು ಜತೆ ಶೂವನ್ನು ಎಗರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿತ್ತು, ಈ ಬಗ್ಗೆ ಅನೇಕರು ಅಕ್ರೋಶ ಕೂಡ ವ್ಯಕ್ತಪಡಿಸಿದರು. ಇದೀಗ ಈ ವಿಚಾರವಾಗಿ ನಟ ಸೋನು ಸೂದ್ (Sonu Sood) ಮಾತನಾಡಿದ್ದಾರೆ. ಕಳ್ಳತನ ಮಾಡಿದ ಡೆಲಿವರಿ ಬಾಯ್ ಪರ ನಿಂತಿದ್ದಾರೆ. ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್​​ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​​ ಇದೀಗ ಭಾರೀ ಚರ್ಚೆಯಾಗುತ್ತಿದೆ. ದಯೆಯಿಂದಿರಿ ಮತ್ತು ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದಾರೆ.

ಡೆಲಿವರಿ ಬಾಯ್​​​ ಮಾಡಿರುವುದನ್ನು ಸಮರ್ಥಿಸಿಕೊಂಡ ಅವರು ಅವನನ್ನು ಶಿಕ್ಷಿಸುವ ಬದಲು ಅವನಿಗೆ ಹೊಸ ಜೋಡಿ ಶೂಗಳನ್ನು ನೀಡಿ ಎಂದು ಹೇಳಿದ್ದಾರೆ. ಇದೀಗ ಈ ಹೇಳಿಕೆ ಅಕ್ರೋಶಕ್ಕೆ ಕಾರಣವಾಗಿದೆ. ಸೋನು ಸೂದ್ ಅವರ ಈ ಹೇಳಿಕೆಯನ್ನು ಅನೇಕರು ವಿರೋಧಿಸಿದ್ದಾರೆ. ಕಳ್ಳತನಕ್ಕೆ ನಟ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೊಂದು ವಿಚಿತ್ರ ಹೇಳಿಕೆ ಎಂದು ಅನೇಕರು ಸೋನು ಸೂದ್ ಅವರ ಪೋಸ್ಟ್​​​ಗೆ ಕಮೆಂಟ್​​ ಮಾಡಿದ್ದಾರೆ.


ರೋಹಿತ್ ಅರೋರಾ ಎಂಬ ವ್ಯಕ್ತಿ ಈ ಹಿಂದೆ ತಮ್ಮ ಎಕ್ಸ್​​​​ ಖಾತೆಯಲ್ಲಿ ಡಿಲಿವರಿ ಬಾಯ್​​​​ ಶೂ ಕದ್ದಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಇದಕ್ಕೆ ಸೋನು ಸೂದ್ ಎಕ್ಸ್​​​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅವನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ . ಅದರ ಬದಲು ಆತನಿಗೆ ಒಂದು ಜೋಡಿ ಶೂವನ್ನು ನೀಡಿ. ಇದನ್ನು ನೀವು ಅಗತ್ಯವಾಗಿ ಮಾಡಬೇಕು. ಆತ ಬಡವನಾಗಿದ್ದ ಕಾರಣ ಆ ಶೂವನ್ನು ಕದ್ದಿರಬಹುದು, ಈ ಕಾರಣಕ್ಕೆ ಆತನಿಗೆ ಈ ಬಡತನ ಕಳ್ಳತನ ಮಾಡಲು ಪರವಾನಿಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾರ್ಸೆಲ್​​ ನೀಡಲು ಬಂದು ಮನೆಯ ಹೊರಗಿದ್ದ ಬೆಲೆ ಬಾಳುವ ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್​​

ಪೋಸ್ಟ್ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಎಕ್ಸ್​​​ನಲ್ಲಿ ಸೋನು ಸೂದ್ ಅವರ ಈ ಹೇಳಿಕೆ ಸುಮಾರು ಜನ ಕಮೆಂಟ್​​ ಕೂಡ ಮಾಡಿದ್ದಾರೆ. ಒಬ್ಬ ಎಕ್ಸ್​​ ಬಳಕೆದಾರ ನನಗೆ ಏನಾದರೂ ಅಗತ್ಯವಿದ್ದರೆ, ಯಾರ ಮನೆಯಿಂದಲೂ ಏನನ್ನಾದರೂ ಕದಿಯಲು ನನಗೆ ಅನುಮತಿ ಇದೆಯೇ ಎಂದು ಕಮೆಂಟ್​​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಅಪರಾಧವನ್ನು ಬೆಂಬಲಿಸುವುದು ಸರಿಯೇ ಎಂದು ಕಮೆಂಟ್​​ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:30 pm, Sat, 13 April 24