Viral Video : ಕೆಲದಿನಗಳ ಹಿಂದೆ ಕ್ವಿಕ್ ಸ್ಟೈಲ್ ಎಂಬ ನಾರ್ವೇಜಿಯನ್ ಡ್ಯಾನ್ಸ್ ಗ್ರೂಪ್ ಕಾಲಾ ಚಶ್ಮಾ ಹಾಡಿಗೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈಗ ಅದೇ ಹಾಡಿಗೆ ಆಫ್ರಿಕನ್ ಮಕ್ಕಳ ಗುಂಪು ನೃತ್ಯ ಮಾಡುತ್ತಿರುವ ಮತ್ತೊಂದು ವೀಡಿಯೊ ನೆಟ್ಟಿಗರಲ್ಲಿ ಸಂಚಲನ ಸೃಷ್ಟಿಸಿದೆ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕತ್ರಿನಾ ಕೈಫ್ ಅಭಿನಯದ ಬಾರ್ ಬಾರ್ ದೇಖೋ ಸಿನೆಮಾದ ಈ ಹಾಡಿಗೆ ಈ ಮಕ್ಕಳು ಉತ್ಸಾಹದಿಂದ ಕುಣಿದಿವೆ. ಸ್ಮ್ಯಾಶ್ ಟ್ಯಾಲೆಂಟ್ ಫೌಂಡೇಶನ್ ಯುಜಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದೆ. 4 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ ಹೊಂದಿದ ಈ ಪುಟದಲ್ಲಿ, ಉಗಾಂಡಾದಲ್ಲಿರುವ ಬಡಮಕ್ಕಳಿಗೆ ಶಿಕ್ಷಣ ಮತ್ತು ಮೂಲಭೂತ ಅಗತ್ಯಗಳನ್ನು ಒದಗಿಸುವ ಸ್ವಯಂ ಸಂಸ್ಥೆಯು ಇದಾಗಿದೆ ಎಂದು ಉಲ್ಲೇಖಿಸಲಾಗಿದೆ.
ಈ ವಿಡಿಯೋ 4 ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ ಇದು 11,000 ಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:26 pm, Fri, 26 August 22