Viral Post: ಇಲ್ಲಿ ಸೇಬುವಿನ ವೇಷ ಧರಿಸಿದ ಅಸಲಿ ಕೇಕ್ ಯಾವುದು?
Apple or Cake : ಇವುಗಳಲ್ಲಿ ನಿಜವಾದ ಸೇಬು ಯಾವುದು? ಕೇಕ್ ಯಾವುದು? ಹೇಗೆ ಗುರುತಿಸುತ್ತೀರಿ? 7 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಅಚ್ಚರಿಯಿಂದ ಈ ವಿಡಿಯೋ ನೋಡಿದ್ದಾರೆ.
Trending : ಇದು ಕೇಕ್?! ಅಚ್ಚರಿಪಡುವಂಥ ವಿನ್ಯಾಸಗಳಲ್ಲಿ ಈವತ್ತು ಕೇಕ್ ತಯಾರಾಗುತ್ತಿರುವೆ. ಇಂಟರ್ನೆಟ್ ಹೊಕ್ಕರೆ ಈ ಜಗತ್ತು ಮುಗಿಯುವುದೇ ಇಲ್ಲ. ಮೊದಲಿನಂತೆ ಬೇಕರಿಯಲ್ಲಿಯೇ ಕೇಕ್ ತರಬೇಕೆಂದೇನಿಲ್ಲ. ಇತ್ತೀಚಿನ ವರ್ಷಗಳಲ್ಲಿ ಗೃಹೋದ್ಯಮದ ಮಾದರಿಯಲ್ಲಿ ಕೇಕ್ ತಯಾರಿಕೆ ಬೆಳೆದಿದೆ. ನೀವಿದ್ದಲ್ಲಿಗೇ ನೀವು ಹೇಳಿದಂಥ ಥೀಮ್, ವಿನ್ಯಾಸ, ಫ್ಲೇವರ್ನ ಕೇಕ್ ನಿಮ್ಮನ್ನು ಬಂದು ತಲುಪುತ್ತದೆ. ಇಲ್ಲಿರುವ ಮೂರು ಸೇಬಿನ ಸವಾಲುಗಳನ್ನು ಗಮನಿಸಿದಾಗ ನಿಮಗೆ ಖಂಡಿತ ಅನ್ನಿಸುತ್ತೆ ಕೇಕ್ ತಯಾರಿಕೆ ಎನ್ನುವುದು ಅಪ್ಪಟ ಕಲೆ! ಎಂದು.
ಇದನ್ನೂ ಓದಿView this post on Instagram
ಶೆಫ್ ನತಾಲಿ ಸೈಡ್‌ಸರ್ಫ್ ಕೇಕ್ ಸ್ಟುಡಿಯೋದ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ನೈಜವಸ್ತುಗಳಂತೆ, ಜೀವಿಗಳಂತೆ ಕಾಣುವ ಅನೇಕ ಥರದ ಕೇಕ್ಗಳನ್ನು ಇವರ ಪುಟದಲ್ಲಿ ಕಾಣಬಹುದು. ಯಾವುದು ಅಸಲಿ ಯಾವುದು ನಕಲಿ ಎಂಬಂಥ ಗೊಂದಲಕ್ಕೆ ಈ ಪೋಸ್ಟ್ಗಳು ಬೀಳಿಸುವುದು ಗ್ಯಾರಂಟಿ!
ಮೇಲಿನ ಸೇಬು ಕೇಕ್ 7.3 ಲಕ್ಷ ವೀಕ್ಷಣೆ, ಸುಮಾರು 43,000 ಲೈಕ್ ಪಡೆದಿದೆ. ಅನೇಕರು ಈ ಮೂರು ಸೇಬುಗಳಲ್ಲಿ ನಿಜವಾದ ಕೇಕ್ ಯಾವುದು ಎಂದು ಊಹಿಸಲು ಪ್ರತಿಕ್ರಿಯಿಸಿ ಕಮೆಂಟ್ ಹಾಕಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:57 pm, Fri, 26 August 22