ಈ ವ್ಯಕ್ತಿಗೆ 20 ಹೆಂಡತಿಯರು, 104 ಮಕ್ಕಳು, 144 ಮೊಮ್ಮಕ್ಕಳು ಇವರದ್ದೇ ಒಂದು ಹಳ್ಳಿ

ಒಂದು ಹೆಂಡತಿ, ಒಂದು ಮಗುವನ್ನು ಸಾಕುವುದು ಕಷ್ಟ ಎನ್ನುವ ಕಾಲದಲ್ಲಿ, ತಾಂಜೇನಿಯಾದ ಹಳ್ಳಿಯೊಂದರಲ್ಲಿ ಒಬ್ಬ ವ್ಯಕ್ತಿಗೆ 20 ಹೆಂಡತಿಯರು, 104 ಮಕ್ಕಳು, 144 ಮೊಮ್ಮಕ್ಕಳಿದ್ದಾರೆ. ಇಡೀ ಹಳ್ಳಿಯಲ್ಲಿ ಅವರ ಕುಟುಂಬವೊಂದೇ ವಾಸಿಸುತ್ತಿದೆ. ಇಷ್ಟು ದೊಡ್ಡ ಕುಟುಂಬವನ್ನು ಹೇಗೆ ನಿಭಾಯಿಸುತ್ತಿರಬಹುದು ಎಂದು ಎಲ್ಲರಿಗೂ ಅಚ್ಚರಿಯಾಗುವುದಂತೂ ಸತ್ಯ.

ಈ ವ್ಯಕ್ತಿಗೆ 20 ಹೆಂಡತಿಯರು, 104 ಮಕ್ಕಳು, 144 ಮೊಮ್ಮಕ್ಕಳು ಇವರದ್ದೇ ಒಂದು ಹಳ್ಳಿ
ತಾಂಜೇನಿಯಾ
Image Credit source: Indian Express

Updated on: Mar 04, 2025 | 1:21 PM

ತಾಂಜೇನಿಯಾ, ಮಾರ್ಚ್​ 04:  ಒಂದು ಹೆಂಡತಿ, ಒಂದು ಮಗುವನ್ನು ಸಾಕುವುದು ಕಷ್ಟ ಎನ್ನುವ ಕಾಲದಲ್ಲಿ, ತಾಂಜೇನಿಯಾದ ಹಳ್ಳಿಯೊಂದರಲ್ಲಿ ಒಬ್ಬ ವ್ಯಕ್ತಿಗೆ 20 ಹೆಂಡತಿಯರು, 104 ಮಕ್ಕಳು, 144 ಮೊಮ್ಮಕ್ಕಳಿದ್ದಾರೆ. ಇಡೀ ಹಳ್ಳಿಯಲ್ಲಿ ಅವರ ಕುಟುಂಬವೊಂದೇ ವಾಸಿಸುತ್ತಿದೆ. ಇಷ್ಟು ದೊಡ್ಡ ಕುಟುಂಬವನ್ನು ಹೇಗೆ ನಿಭಾಯಿಸುತ್ತಿರಬಹುದು ಎಂದು ಎಲ್ಲರಿಗೂ ಅಚ್ಚರಿಯಾಗುವುದಂತೂ ಸತ್ಯ.

ಹಾಗೆಯೇ ಆತ 20 ಮದುವೆಯಾಗಿದ್ದು, ಒಂದೇ ಮನೆಯಲ್ಲಿ 16 ಹೆಂಡತಿಯರಿದ್ದಾರಂತೆ. ನಾಲ್ಕು ಪತ್ನಿಯರು ಮೃತಪಟ್ಟಿದ್ದಾರೆ. ಒಂದೇ ಸೂರಿನಡೀ ಎಲ್ಲರೂ ಇದ್ದರೂ ಒಂದೇ ಒಂದು ದಿನ ಜಗಳವಾಡದೆ ಎಲ್ಲರೂ ಶಾಂತಿಯಿಂದ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿರುವುದು ವಿಶೇಷ.

ತಾಂಜೇನಿಯಾದ ಸಣ್ಣ ಹಳ್ಳಿಯ ಎಂಜೀ ಅರ್ನೆಸ್ಟೋ ಮುಯಿನುಚಿ ಕಪಿಂಗ ಎಂಬ ವ್ಯಕ್ತಿ ಒಂದು ವಿಶಿಷ್ಟವಾದ ಮನೆಯನ್ನು ನಿರ್ಮಿಸಿದ್ದರು. ಬಳಿಕ ಪ್ರಸಿದ್ಧಿ ಪಡೆದರು. ಈ ಆಫ್ರಿಕನ್ ವ್ಯಕ್ತಿಗೆ ಪ್ರಸ್ತುತ 16 ಹೆಂಡತಿಯರು, 104 ಮಕ್ಕಳು ಮತ್ತು 144 ಮೊಮ್ಮಕ್ಕಳಿದ್ದಾರೆ.

ಅವರ ಮನೆಯು ಒಂದು ಹಳ್ಳಿಯಂತೆ ಕಾರ್ಯನಿರ್ವಹಿಸುತ್ತದೆ, ಅಲ್ಲಿ ಆಹಾರವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ, ಯಾವುದೋ ಹಬ್ಬದಂತೆ ಅನಿಸುತ್ತದೆ. ಕಪಿಂಗ 1961ರಲ್ಲಿ ಮೊದಲ ಮದುವೆ ಮಾಡಿಕೊಂಡಿದ್ದ. ಅವನಿಗೆ ಒಂದು ಮಗು ಜನಿಸಿತು. ಅವನ ತಂದೆ ಕುಟುಂಬವನ್ನು ವಿಸ್ತರಿಸಲು ಪ್ರೋತ್ಸಾಹಿಸಿದನು ಮತ್ತು ಮುಂದಿನ ಮದುವೆಗಳಿಗೆ ವಧುದಕ್ಷಿಣೆ ಕೊಟ್ಟು ಮದುವೆಯಾಗಿದ್ದಾನೆ.

ಮತ್ತಷ್ಟು ಓದಿ: Viral News: 24 ಸಾಕ್ಸ್​ಗಳು ಸೇರಿ ಅನೇಕ ವಸ್ತುಗಳನ್ನು ನುಂಗಿದ ನಾಯಿ

ಮೊದಲ ಐದು ಮದುವೆಗಳ ಖರ್ಚನ್ನು ಅವರ ತಂದೆಯೇ ನೋಡಿಕೊಂಡಿದ್ದರು. ಉಳಿದ ಮದುವೆಯನ್ನು ತಾನೇ ಮಾಡಿಕೊಂಡಿರು. ಒಟ್ಟು 20 ಮಂದಿಯಲ್ಲಿ 7 ಮಂದಿ ಸಹೋದರಿಯರಾಗಿದ್ದಾರೆ. ಕಪಿಂಗನ ಖ್ಯಾತಿಯಿಂದಾಗಿ ಅವರು ಮದುವೆಯಾಗಿದ್ದಾರೆ.

ಪ್ರತಿಯೊಬ್ಬ ಹೆಂಡತಿಯೂ ತನ್ನದೇ ಆದ ಮನೆಯನ್ನು ಹೊಂದಿದ್ದು, ಅಡುಗೆ ಮಾಡುವುದು ಪ್ರತ್ಯೇಕವಾಗಿರುತ್ತದೆ. ಕೃಷಿ ಮಾಡುತ್ತಾರೆ. ಕೇವಲ ಮನೆಯಲ್ಲ, ಈ ವ್ಯವಸ್ಥೆಯು ಸುಸಂಘಟಿತ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

 

https://tv9kannada.com/trending