Viral: ಪತಿಯ ಬದಲಿಗೆ ಬೇರೊಬ್ಬ ವ್ಯಕ್ತಿಯ ವೀರ್ಯದಿಂದ ಮಹಿಳೆಗೆ ಗರ್ಭಧಾರಣೆ; ವೈದ್ಯರ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದ ‌ದಂಪತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 20, 2024 | 5:52 PM

ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಫರ್ಟಿಲಿಟಿ ಸ್ಪೆಷಲಿಸ್ಟ್‌ ಡಾಕ್ಟರ್‌ ಮಹಿಳೆಯೊಬ್ಬರಿಗೆ ಆಕೆಯ ಪತಿಯ ವೀರ್ಯದ ಬದಲಿಗೆ ಬೇರೊಬ್ಬ ವ್ಯಕ್ತಿಯ ವೀರ್ಯದಿಂದ ಗರ್ಭಧಾರಣೆ ಮಾಡಿಸಿ ಸಿಕ್ಕಿಬಿದ್ದಿದ್ದಾರೆ. ವೈದ್ಯರ ಈ ಮೋಸದಾಟವನ್ನು ತಿಳಿದು ಶಾಕ್‌ ಆದ ದಂಪತಿ ಡಾಕ್ಟರ್‌ ವಿರುದ್ಧ ʼಮೆಡಿಕಲ್‌ ರೇಪ್‌ʼ ಮೊಕದ್ದಮೆಯನ್ನು ಹೂಡಿ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಈ ಸುದ್ದಿ ಇದೀಗ ಭಾರೀ ವೈರಲ್‌ ಆಗುತ್ತಿದೆ.

Viral: ಪತಿಯ ಬದಲಿಗೆ ಬೇರೊಬ್ಬ ವ್ಯಕ್ತಿಯ ವೀರ್ಯದಿಂದ ಮಹಿಳೆಗೆ ಗರ್ಭಧಾರಣೆ; ವೈದ್ಯರ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದ ‌ದಂಪತಿ
ಸಾಂದರ್ಭಿಕ ಚಿತ್ರ
Follow us on

ವೈದ್ಯಕೀಯ ಸಾಕಷ್ಟು ಅಭಿವೃದ್ಧಿಗಳಾಗಿದ್ದು, ಇವುಗಳ ಸಹಾಯದಿಂದ ಬಾಡಿಗೆ ತಾಯ್ತನ, ಐವಿಎಫ್‌, ಕೃತಕ ಗರ್ಭಧಾರಣೆ ಮೂಲಕ ಗರ್ಭಧರಿಸಲು ಸಾಧ್ಯವಾಗದ ಅಥವಾ ಬಂಜೆತನದ ಸಮಸ್ಯೆಗಳನ್ನು ಎದುರಿಸುತ್ತಿರುವ ಅದೆಷ್ಟೋ ದಂಪತಿಗಳು ಮಗುವನ್ನು ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ದಂಪತಿ ಕೂಡಾ ಕೃತಕ ಗರ್ಭಧಾರಣೆಯ ಮೊರೆ ಹೋಗಿದ್ದು, ಫರ್ಟಿಲಿಟಿ ಸ್ಪೆಷಲಿಸ್ಟ್‌ ಡಾಕ್ಟರ್‌ ಆ ಮಹಿಳೆಗೆ ಆಕೆಯ ಪತಿಯ ವೀರ್ಯದ ಬದಲಿಗೆ ಬೇರೊಬ್ಬ ವ್ಯಕ್ತಿಯ ವೀರ್ಯದಿಂದ ಗರ್ಭಧಾರಣೆ ಮಾಡಿಸಿ ಸಿಕ್ಕಿಬಿದ್ದಿದ್ದಾರೆ. ವೈದ್ಯರ ಈ ಮೋಸದಾಟವನ್ನು ತಿಳಿದು ಶಾಕ್‌ ಆದ ದಂಪತಿ ಡಾಕ್ಟರ್‌ ವಿರುದ್ಧ ʼಮೆಡಿಕಲ್‌ ರೇಪ್‌ʼ ಮೊಕದ್ದಮೆಯನ್ನು ಹೂಡಿ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಈ ಸುದ್ದಿ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಈ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದು, ಬೇರೊಬ್ಬ ವ್ಯಕ್ತಿಯ ವೀರ್ಯದಿಂದ ಗರ್ಭಧಾರಣೆ ಮಾಡಿಸಿದ ಡಾಕ್ಟರ್‌ ವಿರುದ್ಧ ದಂಪತಿಗಳಿಬ್ಬರು ಮೆಡಿಕಲ್‌ ರೇಪ್‌ ಮೊಕದ್ದಮೆ ಹೂಡಿದ್ದಾರೆ.

ಜೇನ್‌ ಮತ್ತು ಜಾನ್‌ ರೋ ದಂಪತಿಗೆ ಸ್ವಾಭಾವಿಕವಾಗಿ ಗರ್ಭ ಧರಿಸಲು ಸಾಧ್ಯವಾಗದೆ 1983 ರಲ್ಲಿ ಲಾಸ್‌ ಏಂಜಲೀಸ್‌ನ ಫರ್ಟಿಲಿಟಿ ಇನ್ಸ್ಟಿಟ್ಯೂಟ್‌ನ ಡಾ. ಹಾಲ್.‌ ಸಿ. ಡ್ಯಾನ್ಜರ್‌ ಅವರ ಮೊರೆ ಹೋಗುತ್ತಾರೆ. ಅಲ್ಲಿ ಕೃತಕ ಗರ್ಭಧಾರಣೆಯ ಮೂಲಕ 1984 ರ ಏಪ್ರಿಲ್‌ ತಿಂಗಳಲ್ಲಿ ಅವಳಿ ಮಕ್ಕಳಿಗೆ ಜನ್ಮವನ್ನು ನೀಡುತ್ತಾರೆ. ಆದ್ರೆ ಆ ಎರಡೂ ಮಗು ಕೂಡಾ ಬದುಕುಳಿಯಲಿಲ್ಲ. ನಂತರ ಅವರು ಇನ್ನೊಂದು ಬಾರಿ ಕೃತಕ ಗರ್ಭಧಾರಣೆಯ ಮೂಲಕ 1986 ರಲ್ಲಿ ಆರೋಗ್ಯವಂತ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡುತ್ತಾರೆ.

ಇದಾದ ಕೆಲವು ಸಮಯದ ಬಳಿಕ ಅವಳಿ ಮಕ್ಕಳಿಗೆ ಡಿಎನ್‌ಎ ಟೆಸ್ಟ್‌ ಮಾಡಿಸಿದ್ದು, ಈ ಟೆಸ್ಟ್‌ ರಿಪೋರ್ಟ್‌ ನೋಡಿ ದಂಪತಿಗಳು ಶಾಕ್‌ ಆಗಿದ್ದಾರೆ. ಆ ರಿಪೋರ್ಟ್‌ ಅಲ್ಲಿ ಮಕ್ಕಳು ತಾಯಿಯೊಂದಿಗೆ ಜೈವಿಕ ಸಂಬಂಧ ಹೊಂದಿವೆ ಆದರೆ ತಂದೆಯೊಂದಿಗೆ ಜೈವಿಕ ಸಂಬಂಧ ಹೊಂದಿಲ್ಲ. ಈ ಮಕ್ಕಳ ತಂದೆಯ ಡಿಎನ್‌ಎ 50% ನಷ್ಟು ಅಶ್ಕೆನಾಜಿ ಯಹೂದಿ ಡಿಎನ್‌ಎ ಯನ್ನು ಹೋಳುತ್ತದೆಯೇ ವಿನಃ ಗ್ರೀಕ್‌ ಮೂಲದ ಜಾನ್‌ನೊಂದಿಗೆ ಹೊಂದಿಲ್ಲ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ:  ಕ್ಯಾನ್ಸರ್ ಪೀಡಿತ ಗಂಡನನ್ನು ಬದುಕುಳಿಸಲು ಜೀವನವನ್ನೇ ಮುಡಿಪಾಗಿಟ್ಟಿದ್ದ ಪತ್ನಿ; ಫಲಿಸಲಿಲ್ಲ ಪ್ರಾರ್ಥನೆ

ಇದರಿಂದ ಡಾಕ್ಟರ್‌ ನಮಗೆ ಮೋಸ ಮಾಡಿ ಬೇರೊಬ್ಬ ವ್ಯಕ್ತಿಯ ವೀರ್ಯದಿಂದ ಗರ್ಭಧಾರಣೆ ಮಾಡಿಸಿದ್ದಾರೆ ಎಂಬುದು ದಂಪತಿಗೆ ಗೊತ್ತಾಗಿದ್ದು, ನಂತರ ಅವರು ಡಾಕ್ಟರ್‌ ವಿರುದ್ಧ ʼಮೆಡಿಕಲ್‌ ರೇಪ್ʼ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಈ ವಿಚಾರಣೆಯಲ್ಲಿಯೂ ಜಾನ್‌ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೈವಿಕ ಸಂಬಂಧ ಹೊಂದಿಲ್ಲ ಎಂಬುದು ತಿಳಿದು ಬಂದಿದೆ. ಮಕ್ಕಳು ತನ್ನದಲ್ಲ ಎಂಬ ವಿಷಯ ತಿಳಿದು ಇದೀಗ ಜಾನ್‌ ಖಿನ್ನತೆಗೆ ಒಳಗಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ