
ಕೆಲಸದ ಸ್ಥಳದಲ್ಲಿ ಕೆಲ ಉದ್ಯೋಗಿಗಳು (employees) ಅನುಭವಿಸುವ ಒತ್ತಡ ಹೇಳಲಾಗದು. ಆದರೆ ಏನ್ ಮಾಡೋದುಕೆಲಸ ಮಾಡದೇ ಇದ್ದರೆ ವಿಧಿಯಿಲ್ಲ. ಮನೆಗೆ ಬಂದ ಮೇಲೂ ಆಫೀಸ್ ಕೆಲಸ ಎಂದು ಲ್ಯಾಪ್ ಟಾಪ್ ಮುಂದೆ ಕುಳಿತಿರುವುದನ್ನು ನೀವು ನೋಡಬಹುದು. ಇಲ್ಲೊಬ್ಬಳು ಮಹಿಳೆಯದ್ದು ಅದೇ ಪರಿಸ್ಥಿತಿ. ನದಿಯ ದಡದ ವಾಯುವಿಹಾರದಂತೆ ಕಾಣುವ ಪ್ರದೇಶದಲ್ಲಿನ ಬೆಂಚಿನ ಮೇಲೆ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮಹಿಳೆಯನ್ನು ಕಂಡು ಅಮೆರಿಕದ ವ್ಲಾಗರ್‌ಗೆ (American Vlogger) ಶಾಕ್ ಆಗಿದೆ. ಈ ಮಹಿಳೆಯ ಜೊತೆಗೆ ವ್ಲಾಗರ್ ನಡೆಸಿದ ಸಾಂದರ್ಭಿಕ ಸಂಭಾಷಣೆ ಆನ್‌ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
@jaystreazy ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ವ್ಲಾಗರ್, ನದಿಯ ದಡದ ವಾಯುವಿಹಾರದಂತೆ ಕಾಣುವ ಬೆಂಚಿನ ಮೇಲೆ ಲ್ಯಾಪ್‌ಟಾಪ್ ತೆರೆದಿಟ್ಟು ಕುಳಿತಿರುವ ಮಹಿಳೆಯ ಹತ್ತಿರ ಬರುತ್ತಿರುವುದನ್ನು ಕಾಣಬಹುದು. ಕ್ಲಿಪ್‌ನಲ್ಲಿ, ವ್ಲಾಗರ್ ಕ್ಷಮಿಸಿ, ಮೇಡಂ. ನನಗೆ ಕುತೂಹಲವಿದೆ. ನೀವು ಈಗ ಕೆಲಸ ಮಾಡುತ್ತಿದ್ದೀರಾ? ಎಂದು ಕೇಳುವುದನ್ನು ನೋಡಬಹುದು. ಆ ಮಹಿಳೆ ಶಾಂತವಾಗಿ ಹೌದು ಎಂದು ಉತ್ತರಿಸುತ್ತಾಳೆ. ಸಂಭಾಷಣೆ ಮುಂದುವರೆಸುತ್ತಾ ನಾನು ನಿಮಗೆ ಒಂದೆರಡು ಪ್ರಶ್ನೆಗಳನ್ನು ಕೇಳಬಹುದೇ? ನಿಮಗೆ ಅಭ್ಯಂತರವಿಲ್ಲವೇ? ಎಂದು ವ್ಲಾಗರ್ ಹೇಳುತ್ತಿದ್ದಂತೆ ಆಕೆಯು ನೀವು ಕೇಳಬಹುದು ಎಂದು ಉತ್ತರಿಸುತ್ತಾಳೆ.
ಮಹಿಳೆಯ ಬಳಿ ಹೆಸರು ಕೇಳಿದಾಗ ನನ್ನ ಹೆಸರು ಪ್ರಿನ್ಸಿ ಎಂದು ಹೇಳುತ್ತಾಳೆ. ಅದಕ್ಕೆ ನಿಮ್ಮನ್ನು ಭೇಟಿಯಾಗಲು ಸಂತೋಷವಾಯಿತು. ನೀವು ಯಾವ ಕಂಪನಿ ಎಂದು ನನಗೆ ಹೇಳಬೇಕಾಗಿಲ್ಲ, ಆದರೆ ನೀವು ಯಾವ ರೀತಿಯ ಕೆಲಸ ಮಾಡುತ್ತೀರಿ? ಎಂದು ಪ್ರಶ್ನೆ ವ್ಲಾಗರ್ ಕೇಳುತ್ತಿದ್ದಂತೆ ನಾನು ಫಾರ್ಮಸಿ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಪ್ರಿನ್ಸಿ ಉತ್ತರಿಸುತ್ತಾಳೆ.
ಮಹಿಳೆಯ ಬಳಿ ಇಷ್ಟು ತಡವಾಗಿ ಕೆಲಸ ಮಾಡುವುದು ಸಾಮಾನ್ಯವೇ ಎಂದು ಕೇಳುತ್ತಿದ್ದಂತೆ ನನಗೆ ಇದು ಸಾಮಾನ್ಯ ಎಂದು ಹೇಳುವುದನ್ನು ನೀವು ನೋಡಬಹುದು. ವ್ಲಾಗರ್ ಆಶ್ಚರ್ಯ ಪಡುತ್ತಾ, ಇಲ್ಲಿ ಬಹಳಷ್ಟು ಜನರು ತುಂಬಾ ಕಷ್ಟಪಟ್ಟು ಕೆಲಸ ಮಾಡುವುದನ್ನು ನಾನು ನೋಡುತ್ತೇನೆ ಮತ್ತು ಅದು ನನಗೆ ಹೊಸದು ಎಂದು ಹೇಳುತ್ತಾನೆ. ಇದಕ್ಕೆ ಪ್ರಿನ್ಸಿ ಉತ್ತರಿಸುತ್ತಾ, ನೀವೂ ಈಗ ಕೆಲಸ ಮಾಡುತ್ತಿದ್ದೀರಿ ಎನ್ನುವುದನ್ನು ನೋಡಬಹುದು. ಕೊನೆಗೆ ವ್ಲಾಗರ್ ನಗುತ್ತಾ ಇದು ನಿಜವಾಗಿಯೂ ಕೆಲಸವಲ್ಲ. ಇದು ನನ್ನ ಹವ್ಯಾಸ. ಒಂದು ದಿನ ಅದು ಹೊರಹೊಮ್ಮುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳುತ್ತಾನೆ.
ಇದನ್ನೂ ಓದಿ:Viral: ಭಾರತಕ್ಕೆ ಹೋಲಿಸಿದ್ರೆ ಯುರೋಪ್‌ನ ಉದ್ಯೋಗಿಗಳು ಎಷ್ಟು ಸೇಫ್ ನೋಡಿ
ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಕೆಲಸ ಮಾಡೋದು ಅನಿವಾರ್ಯ, ಹೀಗಾಗಿ ಎಷ್ಟೋ ಜನರು ಈ ರೀತಿ ಕೆಲಸ ಮಾಡ್ತಾರೆ ಇದೇನು ವಿಶೇಷವಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಸ್ಕ್ರಿಪ್ಟೆಡ್ ವಿಷಯಗಳಿಂದ ತುಂಬಿರುವ ಜಗತ್ತಿನಲ್ಲಿ ಆ ಕ್ಷಣವು ಹೊಸ ಅನುಭವವನ್ನು ನೀಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಅವಳ ಆತ್ಮವಿಶ್ವಾಸವು ಮಾತಿನಲ್ಲೇ ಎದ್ದು ಕಾಣುತ್ತಿತ್ತು. ಅವಳು ಹೆಚ್ಚು ಪ್ರಭಾವ ಬೀರಲು ಬೇರೆ ಅಲಂಕಾರಿಕ ಪದಗಳು ಬೇಕಾಗಿಲ್ಲ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ