AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ತನ್ನ ಪ್ರೇಮಿಗಾಗಿ 3.4 ಕೋಟಿ ರೂ ಸಂಬಳದ ಉದ್ಯೋಗವನ್ನು ತೊರೆದ ಮಹಿಳೆ

ಪ್ರೀತಿಯೇ ಹಾಗೆ ತಮ್ಮ ಕೈಯಲ್ಲಿ ಒಳ್ಳೆಯ ಕೆಟ್ಟ ಕೆಲಸವನ್ನು ಮಾಡಿಸಿ ಬಿಡಿಸುತ್ತದೆ. ಕೆಲವರು ತಾವು ಇಷ್ಟಪಟ್ಟ ವ್ಯಕ್ತಿಗಳ ಜೊತೆಗೆ ಸಮಯ ಕಳೆಯಲು ನಾನಾ ರೀತಿಯ ಸರ್ಕಸ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬರು ಮಹಿಳೆ ತನ್ನ ಪ್ರಿಯಕರನ ಜೊತೆಗೆ ಕಳೆಯಲು ಸಮಯ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ 3.4 ಕೋಟಿ ಸಂಬಳದ ಉದ್ಯೋಗವನ್ನೇ ತೊರೆದಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

Viral: ತನ್ನ ಪ್ರೇಮಿಗಾಗಿ 3.4 ಕೋಟಿ ರೂ ಸಂಬಳದ ಉದ್ಯೋಗವನ್ನು ತೊರೆದ ಮಹಿಳೆ
ಗೂಗಲ್‌ ಕಂಪನಿImage Credit source: Social Media
ಸಾಯಿನಂದಾ
|

Updated on: Oct 12, 2025 | 12:08 PM

Share

ಈಗಿನ ಕಾಲದಲ್ಲಿ ಕೈಯಲ್ಲಿ ದುಡ್ಡಿದ್ರೆ ಮಾತ್ರ ರಾಜ ಮರ್ಯಾದೆ. ಹೀಗಾಗಿ ಒಳ್ಳೆಯ ಸಂಬಳದ ಕೆಲಸ ಗಿಟ್ಟಿಸಿಕೊಂಡು ಲೈಫ್ ಸೆಟ್ಲ್ ಆಗಬೇಕೆಂದು ಬಯಸುತ್ತಾರೆ. ಇನ್ನು ಕೆಲವರು ಕಡಿಮೆ ಸಂಬಳ ಇದ್ರೂ ತೊಂದರೆ ಇಲ್ಲ, ರಾತ್ರಿ ಹಗಲು ನಿದ್ದೆ ಬಿಟ್ಟು ಕೆಲ್ಸ ಮಾಡ್ತಾರೆ. ಆದರೆ ಕೆಲವೊಮ್ಮೆ ಆರೋಗ್ಯ ಸಮಸ್ಯೆ ಸೇರಿದಂತೆ ಇನ್ನಿತ್ತರ ಸಮಸ್ಯೆಗಳಿಂದ ಉದ್ಯೋಗ ತೊರೆಯುವುದಿದೆ. ಆದರೆ ಗೂಗಲ್ ಕಂಪನಿಯಲ್ಲಿ (Google company) ಕೆಲಸ ಮಾಡುತ್ತಿರುವ ಫ್ಲಾರೆನ್ಸ್ ಪೊಯ್ರೆಲ್ (Florence Poirel) ಎನ್ನುವ ಮಹಿಳೆ 3.4 ಕೋಟಿ ಸಂಬಳದ ಉದ್ಯೋಗ ತ್ಯಜಿಸಿದ್ದಾರೆ. ಅವರ ಈ ನಿರ್ಧಾರ ಹಿಂದಿನ ಕಾರಣ ತಿಳಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಮಾಹಿತಿ ಇಲ್ಲಿದೆ

ಗೂಗಲ್‌ನ ಜ್ಯೂರಿಚ್ ಕಚೇರಿಯ ಸೀನಿಯರ್‌ ಪ್ರೋಗ್ರಾಮ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿರುವ ಫ್ಲಾರೆನ್ಸ್ ಪೊಯ್ರೆಲ್ ಅವರು ತನ್ನ ಕೆಲಸದಿಂದಾಗಿ ಬಾಯ್ ಫ್ರೆಂಡ್ ಜೊತೆಗೆ ಸಮಯ ಕಳೆಯಲು ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಕೆಲಸ ಹಾಗೂ ವೈಯುಕ್ತಿಕ ಜೀವನವನ್ನು ಸಾಧ್ಯವಾಗಲಿಲ್ಲ. ಇನ್ನು  ಸಮತೋಲಿತ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಲು ಬಯಸಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿರುವುದಾಗಿ ಸಿಎನ್‌ಬಿಸಿ ವರದಿ ಮಾಡಿದೆ.

ಈ ಕಾರ್ಪೊರೇಟ್ ಜೀವನದಲ್ಲಿ ಯಾವುದೇ ಅತೃಪ್ತಿ ಹೊಂದಿಲ್ಲ. ನಾನು ಕೆಲಸ ತೊರೆಯುವಾಗ ಸ್ವಲ್ಪವೂ ದಣಿದಿರಲಿಲ್ಲ. ನಾನು ಕೆಲಸ ಮಾಡುವ ತಂಡವು ಹಾಗೂ ಕೆಲಸ ಅದ್ಭುತವಾಗಿತ್ತು, ಆದರೆ ನನಗೆ ಸ್ಪಷ್ಟತೆಯ ಕೊರತೆಯಿತ್ತು. ಆದರೆ ನಾನು ಪ್ರೀತಿಸುವ ಜನರೊಂದಿಗೆ ಕಳೆಯುವ ಸಮಯವೇ ಅತ್ಯಂತ ಮುಖ್ಯ ಎಂದು ನಾನು ಅರಿತುಕೊಂಡೆ. ಇನ್ನು ನನ್ನ ಸಂಗಾತಿಯೂ ಕೂಡ ಗೂಗಲ್‌ನಲ್ಲಿ ಕೆಲಸ ಮಾಡುತ್ತಾರೆ. ಅವರು ನನಗಿಂತ 17 ವರ್ಷ ಹಿರಿಯರು. ಅವರೊಂದಿಗೆ ಸಮಯ ಕಳೆಯಲು ನಾನು ನಿವೃತ್ತಿಯಾಗುವವರೆಗೂ ಕಾಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ
Image
ತಲೆನೋವು ಅಂದ್ರೂ ರಜೆ ಕೊಡಲ್ಲ ಮ್ಯಾನೇಜರ್; ಈ ಉದ್ಯೋಗಿಯ ಕಷ್ಟ ನೋಡಿ
Image
ಸಹೋದರನ ಮದುವೆಗೆ ರಜೆ ಕೊಡದ ಬಾಸ್, ಜಾಬ್ ರಿಸೈನ್ ಮಾಡಿದ ಉದ್ಯೋಗಿ
Image
ಇಂದು ವಾರ್ಷಿಕ ಸಂಬಳವೇ 24 ಲಕ್ಷ ರೂ; ಯಶಸ್ಸಿನ ಹಾದಿ ಬಿಚ್ಚಿಟ್ಟ ಯುವಕ
Image
ಅಮೆರಿಕದಲ್ಲಿ ಶಿಕ್ಷಣ ಪಡೆದ್ರು ಸಿಗದ ಉದ್ಯೋಗ, ಈ ಯುವಕನ ಪರಿಸ್ಥಿತಿ ನೋಡಿ

ಇದನ್ನೂ ಓದಿ:Viral: ಸಹೋದರನ ಮದುವೆಗೆ ರಜೆ ಕೊಡದ ಬಾಸ್, ಜಾಬ್ ರಿಸೈನ್ ಮಾಡಿದ ಉದ್ಯೋಗಿ

ನಾನು ತುಂಬಾ ಸುಲಭವಾಗಿ ಬೇಸರಗೊಳ್ಳುತ್ತೇನೆ ಎಂದು ಭಾವಿಸಿದೆ. ಆದರೆ ನಾನು ನಿರ್ಧಾರ ತೆಗೆದುಕೊಂಡು ಒಂದೂವರೆ ವರ್ಷಗಳು ಕಳೆದಿವೆ, ನಾನು ಬೇಸರ ಪಡುವ ಸಮಯ ಇನ್ನೂ ಬಂದಿಲ್ಲ. ಜೀವನದಲ್ಲಿ ಕೆಲವು ವಿಷಯ ಗಳಿಂದ ಪಾಠ ಕಲಿತಿದ್ದೇನೆ. ಈ ಜೀವನ ಚಿಕ್ಕದು ಹಾಗೂ ಸುಂದರವಾಗಿದ್ದು, ನಮ್ಮ ಹೆಚ್ಚಿನ ಸಮಯವನ್ನು ಕೆಲಸದಲ್ಲೇ ಕಳೆಯುತ್ತೇವೆ. ಆದರೆ ಈ ಸಮಯವನ್ನು ತಮ್ಮ ಆತ್ಮೀಯರೊಂದಿಗೆ ಅನುಭವದೊಂದಿಗೆ ಕಳೆದರೆ ಜೀವನ ಸೊಗಸಾಗಿರುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ಮನೆಯಲ್ಲಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ
ಮನೆಯಲ್ಲಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ
ಕೃತಿ ಸನೋನ್ ಮನಗೆದ್ದ ನಾಲ್ಕು ಸಾವಿರ ಕೋಟಿ ಒಡೆಯ; ಧೋನಿಗೆ ಅತ್ಯಾಪ್ತ
ಕೃತಿ ಸನೋನ್ ಮನಗೆದ್ದ ನಾಲ್ಕು ಸಾವಿರ ಕೋಟಿ ಒಡೆಯ; ಧೋನಿಗೆ ಅತ್ಯಾಪ್ತ
ಅಡಿಗೆ ಮನೆ ಹೇಗಿರಬೇಕು? ಈ ವಸ್ತುಗಳಿದ್ರೆ ಕಷ್ಟ ತಪ್ಪಿದ್ದಲ್ಲ!
ಅಡಿಗೆ ಮನೆ ಹೇಗಿರಬೇಕು? ಈ ವಸ್ತುಗಳಿದ್ರೆ ಕಷ್ಟ ತಪ್ಪಿದ್ದಲ್ಲ!
ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು
ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು
ವಿಂಡೀಸ್ ದಾಂಡಿಗರ ಆರ್ಭಟ... 6 ರನ್​ಗಳಿಂದ ವಿಶ್ವ ದಾಖಲೆ ಮಿಸ್
ವಿಂಡೀಸ್ ದಾಂಡಿಗರ ಆರ್ಭಟ... 6 ರನ್​ಗಳಿಂದ ವಿಶ್ವ ದಾಖಲೆ ಮಿಸ್