5 ಪದಗಳಲ್ಲಿ ಚಲನಚಿತ್ರ ಕಥಾವಸ್ತುವನ್ನು ಕೇಳಿದ ಅಮೆಜಾನ್ ಪ್ರೈಮ್: ವೈರಲ್ ಆಯ್ತು ನೆಟ್ಟಿಗರ ವಿಭಿನ್ನ ಪ್ರತಿಕ್ರಿಯೆಗಳು
ಅಮೇಜಾನ್ ಪ್ರೈಮ್ ಬಳಕೆದಾರರ ಬಳಿ 5 ಶಬ್ದಗಳಲ್ಲಿ ಸಿನಿಮಾಕ್ಕೆ ಕಥಾ ವಸ್ತು ನೀಡುವಂತೆ ಕೇಳಿದೆ. ಇದಕ್ಕೆ ಬಳಕೆದಾರರು ತರಹೇವಾರಿ ಉತ್ತರಗಳನ್ನು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಕೊರೊನಾ ಆರಂಭವಾದ ಮೇಲೆ ಆನ್ಲೈನ್ ಪ್ಲಾಟ್ಫಾರ್ಮ್(Online Platform) ಗಳ ಬಳಕೆ ಹೆಚ್ಚಾಗಿದೆ. ಸಿನಿಮಾ ನೋಡಲು, ಶಾಪಿಂಗ್ ಮಾಡಲು, ಹಣ ಹೂಡಿಕೆಗೆ ಹೀಗೆ ಎಲ್ಲ ತರದ ಕೆಲಸಗಳಿಗೂ ಆನ್ಲೈನ್ ಪ್ರಮುಖ ಸ್ಥಳವಾಗಿದೆ. ಮನರಂಜನೆಗಾಗಿ ಥಿಯೇಟರ್ಗಳಿಗೆ ಹೋಗುತ್ತಿದ್ದ ಜನ ಓಟಿಟಿ(OTT) ಬೆನ್ನುಬಿದ್ದಿದ್ದಾರೆ. ಅದಕ್ಕೆ ತಕ್ಕಂತೆ ಆನ್ಲೈನ್ ಮನರಂಜನೆ ಪ್ಲಾಟ್ಫಾರ್ಮಗಳಾದ ಅಮೇಜಾನ್ ಪ್ರೈಮ್ (Amezon Prime), ನೆಟ್ಫ್ಲಿಕ್ಸ್, ಝೀ ಫೈವ್ಗಳಂತಹವುಗಳು ವೀಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾಗಳನ್ನು, ವೆಬ್ ಸೀರೀಸ್ಗಳನ್ನು ನೀಡುತ್ತಲೇ ಬಂದಿವೆ. ಇದೀಗ ಅಮೇಜಾನ್ ಪ್ರೈಮ್ ಬಳಕೆದಾರರನ್ನು ಸೆಳೆಯಲು ಹೊಸದೊಂದು ದಾರ ಹಿಡಿದಿದದೆ. ಅದುವೇ ಕಥಾವಸ್ತು ಹುಡುಕುವ ಗೇಮ್.
explain a movie plot in 5 words
— amazon prime video IN (@PrimeVideoIN) February 22, 2022
ಹೌದು, ಅಮೇಜಾನ್ ಪ್ರೈಮ್ ಬಳಕೆದಾರರ ಬಳಿ 5 ಶಬ್ದಗಳಲ್ಲಿ ಸಿನಿಮಾಕ್ಕೆ ಕಥಾ ವಸ್ತು ನೀಡುವಂತೆ ಕೇಳಿದೆ. ಇದಕ್ಕೆ ಬಳಕೆದಾರರು ತರಹೇವಾರಿ ಉತ್ತರಗಳನ್ನು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೇಜಾನ್ ಪ್ರೈಮ್ ಸಾಕಷ್ಟು ತನ್ನದೇ ಕಂಟೆಂಟ್ಗಳನ್ನು ತಯಾರಿಸಿ, ವೆಬ್ ಸೀರಿಸ್, ಸಿನಿಮಾಗಳನ್ನು ಬಿಡುಗಡೆ ಮಾಡಿದೆ. ಅದಕ್ಕಾಗಿಯೆ ಈಗ ಬಳಕೆದಾರರ ಅಭಿರುಚಿಯನ್ನು ಪಡೆಯಲು ಆರಂಭಿಸಿದ ಟ್ವೀಟ್ ಈಗ ತಮಾಷೆಯ ಟ್ವೀಟ್ಗಳಿಗೆ ತಾಣವಾಗಿದೆ.
ಅಮೆಜಾನ್ ಪ್ರೈಮ್ ಫೆ.22ರಂದು ಟ್ವೀಟ್ ಮಾಡಿದ್ದು. ಸದ್ಯ ಈ ಟ್ವೀಟ್ಗೆ 100ಕ್ಕೂ ಹೆಚ್ಚು ರೀಟ್ವೀಟ್ಗಳು ಬಂದಿದ್ದು, 3ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ಈ ಟ್ವೀಟ್ಗೆ ಬಳಕೆದಾರರೊಬ್ಬರು ಮೀಸೆಯಿಲ್ಲದೆ ಗಂಡನನ್ನು ಪತ್ತೆಹಚ್ಚಲಾಗದು ಎಂದು ಕಾಮೆಂಟ್ ಮಾಡಿದರೆ ಇನ್ನೊಬ್ಬರು 25 ದಿನದಲ್ಲಿ ಹಣ ದ್ವಿಗುಣಗೊಳಸುವುದು ಹೇಗೆ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ:
‘ಓ ಅಂಟಾವಾ’ ಹಾಡನ್ನು ಹಾಡಿ ನೆಟ್ಟಿಗರ ಮನ ಗೆದ್ದ ಡಚ್ ಮಹಿಳೆ: ವಿಡಿಯೋ ವೈರಲ್
Published On - 12:07 pm, Thu, 24 February 22