ಉಸಿರಾಟಕ್ಕೆ ಕಷ್ಟಪಡುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ ಹೋದಾಗ ವೈದ್ಯರಿಗೇ ಶಾಕ್​​; ಬೆಳೆಯಬಾರದ ಜಾಗದಲ್ಲಿ ಹಲ್ಲು ತಲೆಕೆಳಗಾಗಿ ಬೆಳೆದಿತ್ತು !

ನ್ಯೂಯಾರ್ಕ್​ನ ಮೌಂಟ್​ ಸಿನಾಯ್​ ಎಂಬ ಆಸ್ಪತ್ರೆಗೆ ಹೋದ ವ್ಯಕ್ತಿಯನ್ನು ವೈದ್ಯರು ಪರಿಶೀಲಿಸಿದ್ದಾರೆ.  ಇವರ ಮೂಗಿನ ಸೆಪ್ಟಮ್​ ವಿಚಲನಗೊಂಡಿದ್ದು, ಅಂದರೆ ವಕ್ರವಾಗಿರುವುದು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಲ್ಲೇ ಗೊತ್ತಾಗಿದೆ.

ಉಸಿರಾಟಕ್ಕೆ ಕಷ್ಟಪಡುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ ಹೋದಾಗ ವೈದ್ಯರಿಗೇ ಶಾಕ್​​; ಬೆಳೆಯಬಾರದ ಜಾಗದಲ್ಲಿ ಹಲ್ಲು ತಲೆಕೆಳಗಾಗಿ ಬೆಳೆದಿತ್ತು !
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Feb 24, 2022 | 10:40 AM

ಇಲ್ಲೊಬ್ಬ 38ವರ್ಷದ ವ್ಯಕ್ತಿ ಇತ್ತೀಚೆಗೆ ಒಂದೆರಡು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಬಲಭಾಗದ ಮೂಗಿನ ಹೊಳ್ಳೆಯ ಮೂಲಕ ಉಸಿರಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಈಗ ತಡೆಯಲಾಗದೆ ವೈದ್ಯರ ಬಳಿ ಹೋದಾಗ ಸ್ವತಃ ವೈದ್ಯರೇ ಶಾಕ್​ ಆಗಿದ್ದಾರೆ. ಯಾಕೆಂದರೆ ರೋಗಿಗೆ ಇದ್ದುದು ವಿಚಿತ್ರ ಸಮಸ್ಯೆಯಾಗಿತ್ತು. ಅವರ ಬಲ ಮೂಗಿನ ಹೊಳ್ಳೆಯ ಒಳಭಾಗದಲ್ಲಿ ಒಂದು ಹಲ್ಲು ಬೆಳೆಯುತ್ತಿತ್ತು.  ಅಂದಹಾಗೇ, ಘಟನೆ ನಡೆದದ್ದು ನ್ಯೂಯಾರ್ಕ್​​ನಲ್ಲಿ. ಈ ಬಗ್ಗೆ ನ್ಯೂ ಇಂಗ್ಲೆಂಡ್ ಜರ್ನಲ್​ ಆಫ್​ ಮೆಡಿಸಿನ್​ ವೈದ್ಯಕೀಯ ಪುಸ್ತಕವೊಂದು ಅಧ್ಯಯನ ವರದಿ ಪ್ರಕಟಿಸಿದೆ.

ನ್ಯೂಯಾರ್ಕ್​ನ ಮೌಂಟ್​ ಸಿನಾಯ್​ ಎಂಬ ಆಸ್ಪತ್ರೆಗೆ ಹೋದ ವ್ಯಕ್ತಿಯನ್ನು ವೈದ್ಯರು ಪರಿಶೀಲಿಸಿದ್ದಾರೆ.  ಇವರ ಮೂಗಿನ ಸೆಪ್ಟಮ್​ ವಿಚಲನಗೊಂಡಿದ್ದು, ಅಂದರೆ ವಕ್ರವಾಗಿರುವುದು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಲ್ಲೇ ಗೊತ್ತಾಗಿದೆ. ಹೀಗೆಂದರೆ, ಎರಡು ಮೂಗಿನ ಹೊಳ್ಳೆಗಳನ್ನು ಬೇರ್ಪಡಿಸುವ ಮೂಳೆ ಮತ್ತು ಕಾರ್ಟಿಲೆಜ್ ನೇರವಾಗಿ, ಇರಬೇಕಾದ ಜಾಗದಲ್ಲಿ ಇರದೆ, ಚೂರು ಬೇರೆಯಾಗಿ ವಕ್ರವಾಗಿತ್ತು. ಅಷ್ಟೇ ಅಲ್ಲ, ಈ ಸೆಪ್ಟಮ್​​ನ ಹಿಂಭಾಗದಲ್ಲಿ ಕ್ಯಾಲ್ಸಿಫೈಡ್ ತೊಂದರೆ ( ಆ ಭಾಗದಲ್ಲಿನ ಅಂಗಾಂಶಗಳಲ್ಲಿ ಕ್ಯಾಲ್ಸಿಯಂ ಲವಣಗಳ ಶೇಖರಣೆಯಲ್ಲಿ ಅಡಚಣೆಯಾಗುವುದು) ಇರುವುದೂ ಗೊತ್ತಾಯಿತು.

ಇಷ್ಟೆಲ್ಲ ಆದರೂ ಇನ್ನೂ ಏನೋ ಸಮಸ್ಯೆ ಇರುವುದನ್ನು ಅರಿತ ವೈದ್ಯರು, ಮೂಗಿನ ಒಳಭಾಗ ಪರೀಕ್ಷೆ ಮಾಡುವ  ರೈನೋಸ್ಕೋಪ್ ಮೂಲಕ ವ್ಯಕ್ತಿಯ ಪರೀಕ್ಷೆ ಮಾಡಿದ್ದಾರೆ. ಆ ಉಪಕರಣವನ್ನು ಮೂಗಿನೊಳಗೆ ಹಾಕಿದಾಗ ಹೊಳ್ಳೆಯ ಒಳಭಾಗದಲ್ಲಿ ಗಟ್ಟಿಯಾದ ವಸ್ತು ಸಿಕ್ಕಿದೆ. ಅದೇನೆಂದು ಮತ್ತೆ ಸಿಟಿ ಸ್ಕ್ಯಾನ್​ ಮೂಲಕ ಪರೀಕ್ಷೆ ಮಾಡಿದಾಗ ವೈದ್ಯರೂ ದಿಗಿಲಾಗಿದ್ದಾರೆ. ಸಿಕ್ಕಾಪಟೆ ಅಚ್ಚರಿ ಪಡಿಸಿ, ವೈದ್ಯಕೀಯ ಲೋಕದಲ್ಲಿ ಇದೊಂದು ಅಪರೂಪದ ಪ್ರಕರಣ ಎಂದು ಹೇಳಿದ್ದಾರೆ. ಯಾಕೆಂದರೆ ವ್ಯಕ್ತಿಯ ಮೂಗಿನ ಆಳದ ಕುಳಿಯಲ್ಲಿ ಒಂದು ಹಲ್ಲು ತಲೆಕೆಳಗಾಗಿ ಬೆಳೆದಿತ್ತು.

ಬಳಿಕ ವೈದ್ಯರು ಸರ್ಜರಿ ಮೂಲಕ ಆ ಹಲ್ಲನ್ನು ವ್ಯಕ್ತಿಯ ಮೂಗಿನ ಹೊಳ್ಳೆಯಿಂದ ಕಿತ್ತಿದ್ದಾರೆ. ಸರ್ಜರಿ ನಂತರ ಮೂರು ತಿಂಗಳ ಕಾಲ ವ್ಯಕ್ತಿಯ ಆರೋಗ್ಯ ಸ್ಥಿತಿಯ ಮೇಲೆ ಗಮನ ಇಡಲಾಗಿತ್ತು. ಮತ್ತೆ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳಬಹುದಾ? ಹಲ್ಲು ತೆಗೆದ ಜಾಗದಲ್ಲಿ ಏನಾದರೂ ಸಮಸ್ಯೆ ಉಂಟಾಗಬಹುದಾ ಎಂಬಿತ್ಯಾದಿ ಅಂಶಗಳ ಮೇಲೆ ವೈದ್ಯರು ನಿಗಾ ಇಟ್ಟಿದ್ದರು. ಅದೇನೂ ಆಗದೆ ವ್ಯಕ್ತಿ ಆರೋಗ್ಯವಾಗಿದ್ದಾರೆ. ಮತ್ತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ಜರ್ನಲ್​ ವರದಿ ಮಾಡಿದೆ. ಇಂಥ ಪ್ರಕರಣಗಳು ಶೇ.0.1ರಷ್ಟಾಗಿದ್ದು, ವಿರಳದಲ್ಲಿ ಅತಿ ವಿರಳ ಎಂದು ವೈದ್ಯಕೀಯ ಲೋಕವೇ ಹೇಳಿದೆ.

ಇದನ್ನೂ ಓದಿ: Crime News: ಕಾರಿನ ಗಾಜು ಒಡೆದು ಹಣ, ದುಬಾರಿ ವಾಚ್ ಕಳವು; 6 ತಿಂಗಳ ಬಳಿಕ ಚಂದ್ರಾ ಲೇಔಟ್ ಪೊಲೀಸರಿಂದ ಆರೋಪಿ ಅರೆಸ್ಟ್

Published On - 9:58 am, Thu, 24 February 22

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?