5 ಪದಗಳಲ್ಲಿ ಚಲನಚಿತ್ರ ಕಥಾವಸ್ತುವನ್ನು ಕೇಳಿದ ಅಮೆಜಾನ್​ ಪ್ರೈಮ್: ವೈರಲ್​ ಆಯ್ತು ನೆಟ್ಟಿಗರ ವಿಭಿನ್ನ ಪ್ರತಿಕ್ರಿಯೆಗಳು

| Updated By: Pavitra Bhat Jigalemane

Updated on: Feb 24, 2022 | 4:46 PM

ಅಮೇಜಾನ್ ಪ್ರೈಮ್​ ಬಳಕೆದಾರರ ಬಳಿ 5 ಶಬ್ದಗಳಲ್ಲಿ ಸಿನಿಮಾಕ್ಕೆ ಕಥಾ ವಸ್ತು ನೀಡುವಂತೆ ಕೇಳಿದೆ.  ಇದಕ್ಕೆ ಬಳಕೆದಾರರು ತರಹೇವಾರಿ ಉತ್ತರಗಳನ್ನು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ

5 ಪದಗಳಲ್ಲಿ ಚಲನಚಿತ್ರ ಕಥಾವಸ್ತುವನ್ನು ಕೇಳಿದ ಅಮೆಜಾನ್​ ಪ್ರೈಮ್: ವೈರಲ್​ ಆಯ್ತು ನೆಟ್ಟಿಗರ ವಿಭಿನ್ನ ಪ್ರತಿಕ್ರಿಯೆಗಳು
ಟ್ವೀಟ್​
Follow us on

ಕೊರೊನಾ ಆರಂಭವಾದ ಮೇಲೆ ಆನ್ಲೈನ್​ ಪ್ಲಾಟ್​ಫಾರ್ಮ್(Online Platform)​ ಗಳ ಬಳಕೆ ಹೆಚ್ಚಾಗಿದೆ.  ಸಿನಿಮಾ ನೋಡಲು, ಶಾಪಿಂಗ್​ ಮಾಡಲು, ಹಣ ಹೂಡಿಕೆಗೆ ಹೀಗೆ ಎಲ್ಲ ತರದ ಕೆಲಸಗಳಿಗೂ ಆನ್ಲೈನ್​ ಪ್ರಮುಖ ಸ್ಥಳವಾಗಿದೆ. ಮನರಂಜನೆಗಾಗಿ ಥಿಯೇಟರ್​ಗಳಿಗೆ ಹೋಗುತ್ತಿದ್ದ ಜನ ಓಟಿಟಿ(OTT) ಬೆನ್ನುಬಿದ್ದಿದ್ದಾರೆ. ಅದಕ್ಕೆ ತಕ್ಕಂತೆ ಆನ್ಲೈನ್​ ಮನರಂಜನೆ ಪ್ಲಾಟ್​ಫಾರ್ಮಗಳಾದ ಅಮೇಜಾನ್​ ಪ್ರೈಮ್ (Amezon Prime)​, ನೆಟ್​ಫ್ಲಿಕ್ಸ್​, ಝೀ ಫೈವ್​ಗಳಂತಹವುಗಳು ವೀಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾಗಳನ್ನು, ವೆಬ್​ ಸೀರೀಸ್​ಗಳನ್ನು ನೀಡುತ್ತಲೇ ಬಂದಿವೆ. ಇದೀಗ ಅಮೇಜಾನ್​ ಪ್ರೈಮ್​ ಬಳಕೆದಾರರನ್ನು ಸೆಳೆಯಲು ಹೊಸದೊಂದು ದಾರ ಹಿಡಿದಿದದೆ. ಅದುವೇ ಕಥಾವಸ್ತು ಹುಡುಕುವ ಗೇಮ್​.

ಹೌದು, ಅಮೇಜಾನ್ ಪ್ರೈಮ್​ ಬಳಕೆದಾರರ ಬಳಿ 5 ಶಬ್ದಗಳಲ್ಲಿ ಸಿನಿಮಾಕ್ಕೆ ಕಥಾ ವಸ್ತು ನೀಡುವಂತೆ ಕೇಳಿದೆ.  ಇದಕ್ಕೆ ಬಳಕೆದಾರರು ತರಹೇವಾರಿ ಉತ್ತರಗಳನ್ನು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಅಮೇಜಾನ್ ಪ್ರೈಮ್​ ಸಾಕಷ್ಟು ತನ್ನದೇ ಕಂಟೆಂಟ್​ಗಳನ್ನು ತಯಾರಿಸಿ, ವೆಬ್​ ಸೀರಿಸ್​, ಸಿನಿಮಾಗಳನ್ನು ಬಿಡುಗಡೆ ಮಾಡಿದೆ. ಅದಕ್ಕಾಗಿಯೆ ಈಗ ಬಳಕೆದಾರರ ಅಭಿರುಚಿಯನ್ನು ಪಡೆಯಲು ಆರಂಭಿಸಿದ ಟ್ವೀಟ್​​ ಈಗ ತಮಾಷೆಯ ಟ್ವೀಟ್​ಗಳಿಗೆ ತಾಣವಾಗಿದೆ.

ಅಮೆಜಾನ್​ ಪ್ರೈಮ್​ ಫೆ.22ರಂದು ಟ್ವೀಟ್​ ಮಾಡಿದ್ದು. ಸದ್ಯ ಈ ಟ್ವೀಟ್​ಗೆ 100ಕ್ಕೂ ಹೆಚ್ಚು ರೀಟ್ವೀಟ್​ಗಳು ಬಂದಿದ್ದು, 3ಸಾವಿರಕ್ಕೂ ಹೆಚ್ಚು ಲೈಕ್ಸ್​ ಗಳಿಸಿದೆ.  ಈ ಟ್ವೀಟ್​ಗೆ ಬಳಕೆದಾರರೊಬ್ಬರು ಮೀಸೆಯಿಲ್ಲದೆ ಗಂಡನನ್ನು ಪತ್ತೆಹಚ್ಚಲಾಗದು ಎಂದು ಕಾಮೆಂಟ್​ ಮಾಡಿದರೆ ಇನ್ನೊಬ್ಬರು 25 ದಿನದಲ್ಲಿ ಹಣ ದ್ವಿಗುಣಗೊಳಸುವುದು ಹೇಗೆ ಎಂದು ಕಾಮೆಂಟ್​ ಮಾಡಿದ್ದಾರೆ. ಸದ್ಯ ಈ ಟ್ವೀಟ್​ಗಳು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇದನ್ನೂ ಓದಿ:

ಓ ಅಂಟಾವಾ’ ಹಾಡನ್ನು ಹಾಡಿ ನೆಟ್ಟಿಗರ ಮನ ಗೆದ್ದ ಡಚ್​ ಮಹಿಳೆ: ವಿಡಿಯೋ ವೈರಲ್​

Published On - 12:07 pm, Thu, 24 February 22