ಕೇರಳ: ಪ್ರವಾಹಕ್ಕೆ ಸಿಲುಕಿದ್ದ ನಾಯಿ ಮರಿಗಳನ್ನು ವೃದ್ಧರೊಬ್ಬರು ರಕ್ಷಿಸಿದ ಘಟನೆ ಕೇರಳದ ಆಲುವಾದ ಶ್ರೀಮಹಾದೇವ ದೇವಸ್ಥಾನದಲ್ಲಿ ನಡೆದಿದೆ. ಮಳೆಗೆ ದೇವಾಲಯ ಸಂಪೂರ್ಣ ಜಲಾವೃತಗೊಂಡಿದ್ದು, ದೇವಾಲಯದಲ್ಲಿದ್ದ ಪುಟ್ಟ ನಾಯಿ ಮರಿಗಳು ನೀರಿನಲ್ಲಿ ಮುಳುಗಿ ಹೋಗಿದೆ. ಇದನ್ನು ಗಮನಿಸಿದ 73 ವರ್ಷದ ವೃದ್ದರೊಬ್ಬರು ಪ್ರವಾಹದ ನಡುವೆ ಪುಟ್ಟ ಮರಿಗಳನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಫೋಟೋ ಜರ್ನಲಿಸ್ಟ್ ಸನೇಶ್ ಎಂಬವರು ತನ್ನ ಕ್ಯಾಮರಾದಲ್ಲಿ ಈ ಹೃದಯಸ್ಪರ್ಶಿ ವೀಡಿಯೊವನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವೃದ್ಧ ವ್ಯಕ್ತಿಯ ಮಾನವೀಯ ಗುಣಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೆಂಪು ಬದಲು, ಮರೂನ್ ಬಣ್ಣದ ಲಿಪ್‌ಸ್ಟಿಕ್ ತಂದ ಪತಿ; ಡಿವೋರ್ಸ್ಗಾಗಿ ಕೋರ್ಟ್ ಮೆಟ್ಟಿಲೇರಿದ ಪತ್ನಿ
Published On - 4:21 pm, Wed, 17 July 24