Viral : ಅಂತೂ ನವೆಂಬರ್ 6ರಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಹೆಣ್ಣುಮಗುವಿನ ಅಪ್ಪ ಅಮ್ಮನಾಗಿದ್ದಾರೆ. ಸಿನಿಪ್ರಿಯರ ಕುತೂಹಲಕ್ಕೀಗ ತೆರೆಬಿದ್ದು ಅಭಿನಂದನೆಗಳ ಮಹಾಪೂರ ಹರಿಯಲು ಆರಂಭಿಸಿದೆ. ಈ ಸಂದರ್ಭದಲ್ಲಿ ಅಮುಲ್ ಕಂಪೆನಿಯು ಡೂಡಲ್ ಮೂಲಕ ಇವರಿಗೆ ಅಭಿನಂದನೆ ಕೋರಿದೆ. ಇದೀಗ ವೈರಲ್ ಆಗಿರುವ ಈ ಡೂಡಲ್ ನೋಡಿ ನೆಟ್ಟಿಗರು ಹೊಸ ಅಪ್ಪ ಅಮ್ಮನಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. .
ಈ ಮುದ್ದಾದ ಕಾರ್ಟೂನ್ ನೋಡಿ ನೆಟ್ಟಿಗರು ಅನೇಕರ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಯಾರೋ ಒಬ್ಬರು ಸಿಂಹದ ಕುಟುಂಬದ ಕಾರ್ಟೂನ್ ಅನ್ನು ಟ್ವೀಟ್ ಮಾಡಿದ್ದಾರೆ. ಎಂಥ ಮುದ್ದಾಗಿದೆ ಈ ಡೂಡಲ್ ಎಂದು ಹೇಳಿದ್ದಾರೆ ಅನೇಕರು. ಸ್ವಾಗತ ಮಗು ನಿನಗೆ ಎಂದು ಹಲವರು ಸ್ವಾಗತಿಸಿದ್ದಾರೆ. ಈ ಪೋಸ್ಟ್ ಅನ್ನು ಈತನಕ 9,000 ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.
ಏಪ್ರಿಲ್ನಲ್ಲಿ ಆಲಿಯಾ, ರಣಬೀರ್ ಮದುವೆಯಾಗಿದ್ದರು. ಇದೀಗ ಅಮುಲ್, ಅಟರ್ಲಿ ಡಾಟರ್ಲಿ ಡೆಲೀಶಿಯಸ್ ಎಂದು ಹಾರೈಸಿದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:08 pm, Mon, 7 November 22