Viral: ಮಳೆಯ ಮಧ್ಯೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯೋಗ ಮಾಡಿದ ವೃದ್ಧ ವ್ಯಕ್ತಿ

ಯೋಗ ಭಾರತೀಯರ ಜೀವನದ ಒಂದು ಭಾಗ, ಯೋಗವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಇದೀಗ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಈ ವಿಡಿಯೋ ಸೋಂಬೇರಿ ಯುವಕರಿಗೆ ನಿಜಕ್ಕೂ ನಾಚಿಕೆ ಆಗುವಂತಿದೆ. ಈ ವಿಡಿಯೋದಲ್ಲಿ ವೃದ್ಧರೊಬ್ಬರು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯೋಗ ಮಾಡುವುದನ್ನು ಸೆರೆಹಿಡಿಯಲಾಗಿದೆ.

Viral: ಮಳೆಯ ಮಧ್ಯೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯೋಗ ಮಾಡಿದ ವೃದ್ಧ ವ್ಯಕ್ತಿ
ವೈರಲ್​​ ವಿಡಿಯೋ

Updated on: Jul 31, 2025 | 2:53 PM

ಭಾರತ ಇಡೀ ಜಗತ್ತಿಗೆ ಯೋಗವನ್ನು (Yoga) ಕೊಡುಗೆಯಾಗಿ ನೀಡಿದೆ. ಆರೋಗ್ಯ, ಒತ್ತಡವನ್ನು ಈ ಯೋಗದಿಂದ ಮಾತ್ರ ಪರಿಹಾರ ಮಾಡಲು ಸಾಧ್ಯ ಎಂಬುದನ್ನು ಜಗತ್ತಿನ ಹಲವು ವಿಜ್ಞಾನಿಗಳು ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಯೋಗವನ್ನು ಎಲ್ಲಿ ಮಾಡಬೇಕು ಅಲ್ಲಿ ಮಾಡಿದ್ರೆ ಒಳ್ಳೆಯದು. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಯೋಗವನ್ನು ಹೆಚ್ಚು ಜನ ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಉದ್ಯಾನವನಗಳು, ಮನೆಗಳು, ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಯೋಗಕ್ಕಾಗಿ ಬಳಸಿಕೊಳ್ಳುತ್ತಾರೆ. ಪರ್ವತ ಶಿಖರಗಳಿಂದ ಹಿಡಿದು ರೈಲು ನಿಲ್ದಾಣಗಳವರೆಗೆ ಅಸಾಮಾನ್ಯ ಸ್ಥಳಗಳಲ್ಲಿ ಯೋಗ ಮಾಡುವುದನ್ನು ತೋರಿಸುವ ಫೋಟೋಗಳು ಮತ್ತು ವೀಡಿಯೊಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಆಗ್ಗಾಗೆ ವೈರಲ್​ ಆಗುತ್ತಲೇ ಇರುತ್ತದೆ. ಇಲ್ಲೊಬ್ಬ ವಯಸ್ಸಾದ ವ್ಯಕ್ತಿ ಮಳೆಯ ನಡುವೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ (Railway Platform) ಯೋಗ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ರೆಡ್ಡಿಟ್‌ನಲ್ಲಿ ಈ ವಿಡಿಯೋವನ್ನು @PeepalGhost ಎಂಬ ರೆಡ್ಡಿಟ್‌​​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಯಾವುದೇ ಯೋಗ ಮ್ಯಾಟ್​​​​ಗಳನ್ನು ಬಳಸದೇ, ಖಾಲಿ ಮೈಯಲ್ಲಿ ಮಳೆಯಲ್ಲೇ ಶೀರ್ಷಾಸನ ಮಾಡಿದ್ದಾರೆ. ಈ ವಿಡಿಯೋಗೆ ಒಂದು ಶೀರ್ಷಿಕೆಯನ್ನು ಕೂಡ ನೀಡಲಾಗಿದೆ. “ರೈಲಿಗಾಗಿ ಕಾಯುತ್ತಾ ಕುಳಿತಿದ್ದಾಗ, ಮಳೆ ಮಧ್ಯೆ ಪ್ಲಾಟ್‌ಫಾರ್ಮ್‌ನಲ್ಲಿ ವೃದ್ಧರೊಬ್ಬರು ಯೋಗ ಮಾಡುತ್ತಿರುವುದನ್ನು ನೋಡಿದೆ. ಮಳೆಯಲ್ಲಿ ಯೋಗ ಮಾಡುತ್ತಿದ್ದ ವ್ಯಕ್ತಿ ಬೇರೆ ಬೇರೆ ರೀತಿಯ ಯೋಗಾಸಗಳನ್ನು ಮಾಡುತ್ತಿದ್ದ ಎಂದು ಹೇಳಿದ್ದಾರೆ. ಈ ಒಂದು ಕ್ಲಿಪ್​​​​ನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಇದನ್ನೂ ಓದಿ
ವಾಕಿಂಗ್‌ ಹೊರಟಿದ್ದ ಮಹಿಳೆಯ ಮೇಲೆ ಏಕಾಏಕಿ ದಾಳಿ ಮಾಡಿದ ಸಾಕು ನಾಯಿ
16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಉಪಯೋಗಿಸುವಂತಿಲ್ಲ
ಭಿಕ್ಷೆ ಬೇಡಿ ಈ ವ್ಯಕ್ತಿ ಸಂಪಾದಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತಾ?
ನಡು ರಸ್ತೆಯಲ್ಲಿಯೇ ಬಾಲಕಿಗೆ ಮುತ್ತಿಟ್ಟು ಎಸ್ಕೇಪ್‌ ಆದ ವ್ಯಕ್ತಿ

ಇದನ್ನೂ ಓದಿ: ಪುಷ್ಪಾ 2 ಸಿನಿಮಾದ ಹಾಡಿಗೆ ಸಖತ್ ಆಗಿ ಸ್ಟೆಪ್‌ ಹಾಕಿದ ಬೆಂಗ್ಳೂರಿನ ಕಾಲೇಜ್ ಸ್ಟೂಡೆಂಟ್ಸ್‌

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನಸೆಳೆದಿದೆ. ರೆಡ್ಡಿಟ್ ಬಳಕೆದಾರರು ಇದನ್ನು ಭಾರತದ ದೈನಂದಿನ ಜೀವನ ಅಭ್ಯಾಸ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರ ಭಾರತದಲ್ಲಿ ರೈಲು ಹತ್ತುವ ಮೊದಲು ಈ ವಿಧಾನವನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ನನಗೆ ಕಾಣುತ್ತಿರುವುದು ತನ್ನ ಛತ್ರಿಯನ್ನು ಮರೆತು ಮಳೆಯಿಂದ ತಲೆ ಒಣಗಿ ಕುಳಿತಿರುವ ವ್ಯಕ್ತಿ ಮಾತ್ರ ಎಂದು ಹೇಳಿದ್ದಾರೆ. ಈ ವ್ಯಕ್ತಿ ಪ್ರಭಾವಶಾಲಿ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಭಾರತದಲ್ಲಿ ಮಾತ್ರ ಇಂತಹ ದೃಶ್ಯಗಳು ಕಾಣಲು ಸಾಧ್ಯ ಎಂದು ಅನೇಕರು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Thu, 31 July 25