AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಜೀವನಕ್ಕಾಗಿ ಲಾರಿ ಓಡಿಸುವ ಕಾಯಕ; ಬದುಕಿಗೆ ಸ್ಫೂರ್ತಿ ಗೋವಿಂದಣ್ಣನ ಮಾತು

ಇಳಿ ವಯಸ್ಸಿನಲ್ಲಿ ಮೈ ದಂಡಿಸಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುವ ಹಿರಿಜೀವಗಳನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇದಕ್ಕೆ ಉದಾಹರಣೆಯಂತಿದ್ದಾರೆ ಈ ವೃದ್ಧ ವ್ಯಕ್ತಿ. ಮಕ್ಕಳನ್ನು ಅವಲಂಬಿಸಿ ಜೀವನ ನಡೆಸಬೇಕಾದ ಇಳಿವಯಸ್ಸಿನಲ್ಲಿ ಲಾರಿ ಓಡಿಸುವ ಈ ಗೋವಿಂದಣ್ಣ ಎಲ್ಲರಿಗೂ ಸ್ಫೂರ್ತಿ. ಈ ವ್ಯಕ್ತಿಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಜೀವನಕ್ಕಾಗಿ ಲಾರಿ ಓಡಿಸುವ ಕಾಯಕ; ಬದುಕಿಗೆ ಸ್ಫೂರ್ತಿ ಗೋವಿಂದಣ್ಣನ ಮಾತು
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Nov 27, 2025 | 11:09 AM

Share

ಇಳಿ ವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹ. ಮಾತಿನಲ್ಲಿ ತೂಕ ಹಾಗೂ ಜೀವನದ ಅನುಭವವನ್ನು ಹೇಳುತ್ತ ತಮ್ಮ ದುಡಿಮೆಯಲ್ಲಿ ಖುಷಿ ಕಾಣುತ್ತಿರುವ ಹಿರಿ ಜೀವವಿದು (Old man). 72ರ ಇಳಿ ವಯಸ್ಸಿನಲ್ಲಿ ಲಾರಿ ಚಾಲಕರಾಗಿ (lorry driver) ಕೆಲಸ ಮಾಡುತ್ತಿರುವ ಇದು ಗೋವಿಂದಣ್ಣನ ಬದುಕಿನ ಕಥೆ. ಇವರ ಕಾಯಕ ಮಾತ್ರವಲ್ಲ, ಇವರ ಪ್ರತಿಯೊಂದು ಮಾತು ಕೂಡ ಎಲ್ಲರಿಗೂ ಸ್ಫೂರ್ತಿ ನೀಡುವಂತಿದೆ. ಶ್ರಮಜೀವಿಯ ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಇದನ್ನು ಮೆಚ್ಚಿಕೊಂಡಿದ್ದಾರೆ.

Uppukari786 ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಲಾರಿ ಓಡಿಸುತ್ತಾ ತಮ್ಮ ಬದುಕಿನ ಕೆಲ ವಿಚಾರಗಳನ್ನು ಹೇಳುವುದನ್ನು ನೋಡಬಹುದು. ಜಾತಿ ಭೇದ ಮಾಡಬಾರದು, ನನಗೆ ಎಲ್ಲರೂ ಬೇಕು ಎನ್ನುತ್ತಾ, ತಮ್ಮ ಬದುಕಿನ ಒಂದೊಂದೇ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಎರಡು ವರ್ಷ ಬಾಡಿಗೆ ಮನೆಯಲ್ಲಿದ್ರೂ ಬಾಡಿಗೆ ಕೊಡಲಿಲ್ಲ, ದಿನಸಿ ಸಾಲ ತರ್ತಿದ್ದೆ. ಆದರೂ ಹಣ ಕೊಡು ಅಂತ ಯಾರು ಕೇಳಿಲ್ಲ. ನಾನು ಸುಮ್ಮನೆ ಕೂರುವುದಿಲ್ಲ. ಲಾರಿ ಓಡಿಸುವುದಲ್ಲದೇ, ಗದ್ದೆ ಉಳುಮೆ, ಭತ್ತ ಕಟಾವು ಹೀಗೆ ಕೃಷಿ ಕೆಲಸವು ಗೊತ್ತಿದೆ ಎನ್ನುತ್ತಾ ತಮ್ಮ ಅನುಭವದ ಮಾತುಗಳನ್ನಾಡುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

View this post on Instagram

A post shared by Uppukari (@uppukari786)

ಇದನ್ನೂ ಓದಿ: ಮೊಮ್ಮಗಳ ಕೈ ತುತ್ತು ಸವಿದ ಅಜ್ಜಿ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಇದುವರೆಗೆ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಸಿಗರೇಟ್ ಸೇದುವುದನ್ನು ಬಿಡಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ. ಇನ್ನೊಬ್ಬರು ನೂರು ಕಾಲ ಹೀಗೆಯೇ ಬಾಳಿ, ಭೇದ ಭಾವ ಮಾಡಬಾರದು ಎನ್ನುವ ಮಾತು ಕೇಳಿ ಖುಷಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಜೀವನದಲ್ಲಿ ಡಿಗ್ರಿ ಅಲ್ಲ, ಬೇರೇನೂ ಕಲಿತರೂ ನಿಮ್ಮಷ್ಟು ಕಲಿತವರು ಯಾರು ಸಿಗಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ