Video: ಸ್ಟ್ರೀಟ್ ಫುಡ್ ಪ್ರಿಯೆ ಈ ವೃದ್ಧೆ; ಬಾಯಿ ಚಪ್ಪರಿಸಿಕೊಂಡು ಪಾನಿಪುರಿ ಸವಿದ ಅಜ್ಜಿ
ಪಾನಿಪುರಿ, ಸೇವ್ ಪುರಿ ಹಾಗೂ ಮಸಾಲಾ ಪುರಿ ಹೀಗೆ ಸ್ಟ್ರೀಟ್ ಫುಡ್ ಹೆಸರು ಕೇಳಿದ್ರೇನೆ ಬಾಯಲ್ಲಿ ನೀರೂರುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಫುಡ್‌ಗಳನ್ನು ಬಾಯಿ ಚಪ್ಪರಿಸಿಕೊಂಡು ಸವಿಯುವವರೇ. ಆದರೆ ಇದೀಗ ವೃದ್ಧೆಯೊಬ್ಬರು ರಸ್ತೆ ಬದಿಯಲ್ಲಿ ಪಾನಿಪುರಿ ತಿನ್ನುವ ಅಜ್ಜಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಭಾರತೀಯ ಬೀದಿ ಬದಿ ಆಹಾರಗಳಿಗೆ ಎಲ್ಲರೂ ಫಿದಾ ಆಗ್ತಾರೆ. ಸಂಜೆ ವೇಳೆ ಫ್ರೆಂಡ್ಸ್ ಜತೆಗೆ ಹೊರಗಡೆ ಹೋದಾಗ ಗೋಲ್ಗಪ್ಪಾ, ಪಾನಿಪುರಿ ತಿನ್ನದೇ ಹೋದ್ರೆ ಮನಸ್ಸಿಗೆ ಸಮಾಧಾನನೇ ಇರಲ್ಲ. ಆದರೆ ಇಲ್ಲೊಬ್ಬಳು ವೃದ್ಧೆಯೂ (old woman) ಬೀದಿ ಬದಿಯಲ್ಲಿ ಪಾನಿಪುರಿ ಸವಿದಿದ್ದಾರೆ. ಬಾಯಿಚಪ್ಪರಿಸಿಕೊಂಡು ಸ್ಟ್ರೀಟ್ ಫುಡ್ ಸವಿಯುವ ಅಜ್ಜಿಯ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಸ್ತೆ ಬದಿಯಲ್ಲಿ ಪಾನಿಪುರಿ ಸವಿದ ಅಜ್ಜಿ
ದೇವನಾರಾಯಣ್ ವಿಪಿಐ ಕೋಲ್ಡ್ ಪಾನಿಪುರಿ (Devanarayan vip cold panipuri) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವೃದ್ಧೆಯೊಬ್ಬರು ರಸ್ತೆ ಬದಿಯಲ್ಲಿ ನಿಂತು ಪಾನಿಪುರಿ ಸವಿಯುವುದನ್ನು ಕಾಣಬಹುದು. ಅಜ್ಜಿ ಸ್ಟ್ರೀಟ್ ಫುಡ್ ತಿನ್ನುವುದನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಇದು ವೃದ್ಧ ದಂಪತಿಯ ಶುದ್ಧ ಪ್ರೀತಿ; ಮಡದಿಯ ಚೋಟುದ್ದ ಜಡೆ ಹೆಣೆದು ಕಟ್ಟಿದ ವೃದ್ಧ
ಈ ವಿಡಿಯೋ ಇದುವೆರೆಗೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಓಲ್ಡ್ ಇಸ್ ಗೋಲ್ಡ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೆಣ್ಣು ಮಕ್ಕಳಿಗೆ ವಯಸ್ಸು ಆದ್ರೂ ಪಾನಿಪುರಿ ಮಾತ್ರ ಬಿಡಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ನಾವು ಕೂಡ ವಯಸ್ಸಾದಾಗ ಹೀಗೆಯೇ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




