Video: ಕುಂದದ ಜೀವನೋತ್ಸಾಹ; 76 ರ ಹರೆಯದಲ್ಲೂ ವಾಚ್ ರಿಪೇರಿ ಮಾಡಿ ನೆಮ್ಮದಿ ಜೀವನ ಸಾಗಿಸುತ್ತಿರುವ ವ್ಯಕ್ತಿ

ಮಾಡುವ ಕೆಲಸದಲ್ಲಿ ಶ್ರದ್ಧೆಯಿದ್ದರೆ ಬದುಕು ನಮ್ಮನ್ನು ಎಲ್ಲಿಗೋ ಕೊಂಡ್ಯೊಯುತ್ತದೆ. ಇದಕ್ಕೆ ಈ ಹಿರಿಜೀವವೇ ಉದಾಹರಣೆ. ವಾಚ್ ರಿಪೇರಿ ಮಾಡಿ ಬದುಕು ಕಟ್ಟಿಕೊಂಡಿರುವ ಈ ವ್ಯಕ್ತಿಯೂ ಎಲ್ಲರಿಗೂ ಸ್ಫೂರ್ತಿ. ತಮ್ಮ ಇಳಿ ವಯಸ್ಸಿನಲ್ಲೂ ಬದುಕಿಗೆ ಆಸರೆಯಾಗಿರುವ ಈ ಕಾಯಕವನ್ನು ಮಾಡುತ್ತಾ ಖುಷಿ ಕಾಣುವ ಈ ವೃದ್ಧ ವ್ಯಕ್ತಿಯ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

Video: ಕುಂದದ ಜೀವನೋತ್ಸಾಹ; 76 ರ ಹರೆಯದಲ್ಲೂ ವಾಚ್ ರಿಪೇರಿ ಮಾಡಿ ನೆಮ್ಮದಿ ಜೀವನ ಸಾಗಿಸುತ್ತಿರುವ ವ್ಯಕ್ತಿ
ವೈರಲ್ ವಿಡಿಯೋ
Image Credit source: Instagram

Updated on: Dec 02, 2025 | 6:27 PM

ಬದುಕೇ (life) ಹಾಗೇ, ಇದ್ದರಲ್ಲೇ ಖುಷಿ ಕಾಣಬೇಕು. ಕೆಲಸ ಯಾವುದೇ ಇರಲಿ,ಪ್ರಾಮಾಣಿಕತೆಯಿಂದ ಮಾಡಿದ್ರೆ ಫಲ ಖಂಡಿತ ಸಿಗುತ್ತದೆ. ವೃದ್ಧ ವ್ಯಕ್ತಿಯೊಬ್ಬರು ಕಳೆದ 50 ವರ್ಷಗಳಿಂದ ವಾಚ್ ರಿಪೇರಿ (watch repair) ಮಾಡುವ ಕಾಯಕವನ್ನೇ ನೆಚ್ಚಿಕೊಂಡಿದ್ದಾರೆ. ಈ ಕೆಲಸವು ಇವರನ್ನು ಕೈ ಹಿಡಿದು ಮುನ್ನಡೆಸಿದೆ. 76ರ ಹರೆಯದಲ್ಲೂ ವ್ಯಕ್ತಿಯೊಬ್ಬರು ವಾಚ್ ರಿಪೇರಿ ಮಾಡುತ್ತಿರುವ ವಿಡಿಯೋ ಇದಾಗಿದೆ. ವೃದ್ಧ ವ್ಯಕ್ತಿಯ ಜೀವನೋತ್ಸಾಹವನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ashirth_m_shivashankar ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋಗೆ 76 ವರ್ಷದ ಗಡಿಯಾರ ತಿದ್ದುಗಾರರು (ವಾಚ್ ರಿಪೇರಿ) ಕಳೆದ 50 ವರ್ಷಗಳಿಂದ ಅದೇ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದಾರೆ. ಅವರು ಜೀವನವನ್ನು ಸಂತೋಷದಿಂದ ನಡೆಸುತ್ತಿದ್ದಾರೆ. ಅವರ ಶ್ರಮ ಮತ್ತು ನಿಷ್ಠೆಯಿಂದ ಅವರು ಬೆಂಗಳೂರಿನ ಸಂಜಯ್ ನಗರದಲ್ಲಿ ಒಂದು ಸೈಟ್ ಖರೀದಿಸಿ, ತಮ್ಮದೇ ಮನೆ ಕಟ್ಟಿಕೊಂಡಿದ್ದಾರೆ. ಇಂತಹವರು ನಿಜವಾದ ಪ್ರೇರಣೆ – ಶ್ರಮ ಮತ್ತು ಆತ್ಮನಿಷ್ಠೆಯಿಂದ ಯಶಸ್ಸು ಸಾಧಿಸಿದ ಒಬ್ಬ ಮಾದರಿ ವ್ಯಕ್ತಿ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ವೃದ್ಧ ವ್ಯಕ್ತಿಯೊಬ್ಬರು ವಾಚ್ ರಿಪೇರಿ ಕೆಲಸದಲ್ಲಿ ತಲ್ಲೀನರಾಗಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಹಸಿವು ನೀಗಿಸಿ, ಬಟ್ಟೆ ಕೊಡಿಸಿ ವೃದ್ಧೆಯ ಪಾಲಿಗೆ ದೇವರಾದ ಯುವಕ

ಈ ವಿಡಿಯೋ ಇದುವರೆಗೆ ಐವತ್ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಿಜ ಸರ್ ನಿಮ್ಮ ಮಾತು. ನಾವು ಅಂತಹವರಿಂದ ಕಲಿಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ನಮ್ಮ ಶಿವಮೊಗ್ಗದವರು ಎಂದರೆ ಮತ್ತೆ ಕೆಲವರು ಹಾರ್ಟ್ ಸಿಂಬಲ್ ಕಳುಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ