Viral Video: ಮೊದಲು ಎತ್ತಿಕೊಂಡವರಿಗೇ ಈ ನೋಟುಗಳು; ಮನಸೋತ ನೆಟ್ಟಿಗರು

|

Updated on: Aug 03, 2023 | 6:30 PM

Realistic Art : ಆರ್​​ಬಿಐ ಈ ಕಲಾವಿದರನ್ನು ತಕ್ಷಣವೇ ಸಂಪರ್ಕಿಸಲು ಬಯಸುತ್ತಿದೆ. ಎಫ್​ಬಿಐ ಇವರ ಈ ರೀಲನ್ನು ಗಮನಿಸುತ್ತಿದೆ! ಎನ್ನುತ್ತಿದ್ದಾರೆ ನೆಟ್ಟಿಗರು. ಯಾಕೆ ಇವರೆಲ್ಲ ಹೀಗೆ ಹೇಳಿದ್ದಾರೆ ಎನ್ನುವ ಅಂದಾಜು ನಿಮಗಾಯಿತೇ?

Viral Video: ಮೊದಲು ಎತ್ತಿಕೊಂಡವರಿಗೇ ಈ ನೋಟುಗಳು; ಮನಸೋತ ನೆಟ್ಟಿಗರು
ನೋಟು ಚಿತ್ರಿಸುತ್ತಿರುವ ಕಲಾವಿದ ರಾಹಿಲ್ ಜಿಂದ್ರನ್
Follow us on

Art : ರಸ್ತೆಯಲ್ಲಿಯೇ ಆಗಲಿ, ಮನೆಯೊಳಗೇ ಆಗಲಿ, ಇನ್ನೆಲ್ಲಿಯೂ ಆಗಲಿ ನೋಟು ಅಥವಾ ರೂಪಾಯಿ (Indian Rupee)​ ಕಣ್ಣಿಗೆ ಬಿದ್ದೊಡನೆ ಒಂದು ಕ್ಷಣ ನಿಲ್ಲುತ್ತೀರಿ ಅಥವಾ ಬಾಗುತ್ತೀರಿ. ಏಕೆಂದರೆ ಹಣ ಎನ್ನುವುದು ಬದುಕಿಗೆ ಅನಿವಾರ್ಯ. ಹಾಗಾಗಿ ಸಂಬಂಧಿಸಿದವರಿಗೆ ಅದನ್ನು ತಲುಪಿಸಬೇಕು ಎಂದು ಹವಣಿಸುತ್ತೀರಿ. ಇದೀಗ ಅಂತರ್ಜಾಲಿಗರ ಕಣ್ಣಿಗೆ ಒಂದೆರಡು ನೋಟುಗಳು ಕಣ್ಣಿಗೆ ಬಿದ್ದಿವೆ. ಅವುಗಳನ್ನು ಆ ಜಾಗದಿಂದ ಹೆಕ್ಕಿಕೊಳ್ಳಲು ಸತತವಾಗಿ ಪ್ರಯತ್ನ ಪಡುತ್ತಲೇ ಇದ್ದಾರೆ. ಆದರೆ ಸಾಧ್ಯವಾಗುತ್ತಿಲ್ಲ. ನೀವೇನಾದರೂ ಸಹಾಯ ಮಾಡುವಿರೇ?

ಈ ನೋಟುಗಳನ್ನು ರಾಹಿಲ್ ಜಿಂದ್ರನ್ (Rahil Jindran)​ ಎಂಬ ಕಲಾವಿದರು ಅತ್ಯಂತ ನೈಜವಾಗಿ ಚಿತ್ರಿಸಿದ್ದಾರೆ. ಈ ನೈಜಕಲೆಯ ಹಿಂದೆ ಅವರ ಅಪಾರ ಶ್ರಮ, ತಾಳ್ಮೆ, ಅಭ್ಯಾಸ ಎಲ್ಲವೂ ಮೇಳೈಸಿದೆ. ಈತನಕ ಈ ವಿಡಿಯೋ ಅನ್ನು 1.7 ಮಿಲಿಯನ್​ ಜನರು ಲೈಕ್ ಮಾಡಿದ್ದಾರೆ. 10 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಲಕ್ಷಾಂತರ ಜನರು ಈ ಕಲಾವಿದರ ಪ್ರತಿಭೆಗೆ ಮೆಚ್ಚುಗೆ ಸ್ವೀಕರಿಸಿದ್ದಾರೆ.

ಇದನ್ನೂ ಓದಿ : Viral Video: ಕರ್ನಾಟಕ ಸಂಗೀತ ಶೈಲಿಯಲ್ಲಿ ಅರಳಿದ ಬಾರ್ಬಿ​; ಅಪ್ಪಿಕೊಂಡ ನೆಟ್ಟಿಗರು

ನಿಜಕ್ಕೂ ಇದು ಚಿತ್ರಿಸಿದ ನೋಟು ಎಂದು ಅನ್ನಿಸಲು ಸಾಧ್ಯವೇ ಇಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಅನೇಕ ನೆಟ್ಟಿಗರು. ಅದ್ಭುತವಾದ ಕಲೆಗಾರಿಕೆ ನಿಮ್ಮದು, ನಿಮ್ಮ ಇನ್ನಷ್ಟು ಚಿತ್ರಗಳಿಗಾಗಿ ಕಾಯುತ್ತೇವೆ ಎಂದಿದ್ದಾರೆ ಹಲವಾರು ಜನ. ಆರ್​ಬಿಐ ನೀವಿರುವ ಸ್ಥಳವನ್ನು ಪತ್ತೆ ಮಾಡಲು ಬಯಸಿದೆ ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಎಫ್​ಬಿ ಏಜೆಂಟ್​ ಈ ರೀಲ್​ ಅನ್ನು ನೋಡುತ್ತಿದ್ದಾರೆ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ : Viral: ರೆಸ್ಟ್​ ಲೈಕ್​ ಬಾರ್ಬಿ; ಇದೀಗ ಶವಪೆಟ್ಟಿಗೆಗಳಿಗೂ ಹರಡಿದ ಗುಲಾಬಿ ಜ್ವರ! ನೋಡಿ ಈ ವಿಡಿಯೋ

ಈ ಕಲಾವಿದರು ರಚಿಸಿರುವ ಅನೇಕ ನೈಜ ಕಲಾಕೃತಿಗಳನ್ನು ಇವರ ಇನ್ಸ್ಟಾ ಖಾತೆಯಲ್ಲಿ ನೋಡಬಹುದಾಗಿದೆ. ಈ ಮೊದಲು ಇವರು ಎಮ್ಮಾ ಟವರ್ಸ್-ಇವಾನ್ಸ್ ಕಲಾಕೃತಿ ರಚಿಸಿದಾಗ 83 ಮಿಲಿಯನ್ ಜನರು ಇದನ್ನು ನೋಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ