Viral Photo: ಹಸಿರು ತುಂಬಿದ ತಮಿಳುನಾಡಿನ ರಸ್ತೆಯ ಫೋಟೋವನ್ನು ರೀ ಟ್ವೀಟ್​ ಮಾಡಿದ ಆನಂದ್​ ಮಹೀಂದ್ರಾ

ಟ್ವೀಟ್​ ಅನ್ನು ರೀಟ್ವಿಟ್​ ಮಾಡಿದ ಮಹಿಂದ್ರಾ ಕಂಪನಿಯ ಚೇರ್​ಮನ್​ ಆನಂದ್​ ಮಹೀಂದ್ರಾ ಎರಿಕ್, ನನ್ನ ಸ್ವಂತ ದೇಶದ ಬಗ್ಗೆ ನನಗೆ ಎಷ್ಟು ಕಡಿಮೆ ತಿಳಿದಿದೆ ಎಂದು ತೋರಿಸಿದ್ದೀರಿ. ಇದು ಅದ್ಭುತವಾಗಿದೆ. ಈ ರಸ್ತೆಯನ್ನು ಯಾರು ನಿರ್ಮಿಸಿದ್ದಾರೆಂದು ನಾನು ಕಂಡುಹಿಡಿಯಬೇಕು ಎಂದು ಬರೆದುಕೊಂಡಿದ್ದಾರೆ.

Viral Photo: ಹಸಿರು ತುಂಬಿದ ತಮಿಳುನಾಡಿನ ರಸ್ತೆಯ ಫೋಟೋವನ್ನು ರೀ ಟ್ವೀಟ್​ ಮಾಡಿದ ಆನಂದ್​ ಮಹೀಂದ್ರಾ
ಕೊಲ್ಲಿ ಹಿಲ್ಸ್ ರಸ್ತೆ
Edited By:

Updated on: Jan 10, 2022 | 11:13 AM

ಸುತ್ತಲೂ ಹರಡಿರುವ ಹಸಿರು ಮರಗಳ ನಡುವೆ ಸೀಳಿಕೊಂಡು ಸಾಗುವ ದಾರಿಯಲ್ಲಿ ಪ್ರಯಾಣಿಸುವುದೇ ಒಂದು ಅದ್ಭುತ ಅನುಭವ.  ವಿದೇಶಗಳಲ್ಲಿ ಪ್ರಯಾಣಿಸುವಾಗ ಸುತ್ತಲೂ ಕಾಣುವ ಹಸಿರು ಪರಿಸರವನ್ನು ಸಾಮಾನ್ಯವಾಗಿ ನೋಡುತ್ತೇವೆ. ಆದರೆ ಅದಕ್ಕಿಂತಲೂ ಅದ್ಭುತ ವಾದ ಪ್ರಯಾಣದ ಹಾದಿ ಭಾರತದಲ್ಲಿಯೇ ಸಾಕಷ್ಟಿದೆ. ಹಚ್ಚ ಹಸಿರ ಹೊದಿಕೆಯಿಂದ ಸಮೃದ್ಧವಾಗಿ ಆವರಿಸಿಕೊಂಡ ಪ್ರದೇಶದಲ್ಲಿ ಕಣ್ಣು ಹಾಯಿಸಿದಷ್ಟೂ ತಿರುವುಗಳನ್ನು ಕಾಣಬಹುದು ಅಂತಹ ಮಾರ್ಗವನ್ನು ಹೊಂದಿರುವ ಸುಂದರ ರಸ್ತೆಯನ್ನು ತಮಿಳುನಾಡಿನಲ್ಲಿ ಕಾಣಬಹುದು. ಸುಂದರ ಪ್ರಕೃತಿಯ ನಡುವೆ 70 ತಿರುವುಗಳನ್ನು ಹೊಂದಿರುವ ಅದ್ಭುತ ರಸ್ತೆ ಮಾರ್ಗದ ಫೋಟೊವೊಂದನ್ನು ಆನಂದ್​ ಮಹೀಂದ್ರಾ ರೀಟ್ವೀಟ್​ ಮಾಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ಫೊಟೋವನ್ನು ನಾರ್ವೇಜಿಯನ್​​ ರಾಜತಾಂತ್ರಿಕ ಮತ್ತು ಮಾಜಿ ರಾಜಕಾರಣಿ ಎರಿಕ್ ಸೋಲ್ಹೈಮ್ ಎನ್ನುವವರು ಹಂಚಿಕೊಂಡಿದ್ದರು. ಈ ಫೋಟೋಗೆ ಎರಿಕ್​ ಅದ್ಭುತ ಭಾರತ!, ಅತ್ಯಂತ ಭಯಾನಕ ಹಾಗೂ ಅದ್ಭುತವಾದ 70 ತಿರುವುಗಳನ್ನು ಹೊಂದಿರುವ ತಮಿಳುನಾಡಿನ ನಾಮಕ್ಕಲ್​ನ ಕೊಲ್ಲಿ ಹಿಲ್ಸ್ ರಸ್ತೆಯ ನೋಟ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್​ ಅನ್ನು ರೀಟ್ವಿಟ್​ ಮಾಡಿದ ಮಹಿಂದ್ರಾ ಕಂಪನಿಯ ಚೇರ್​ಮನ್​ ಆನಂದ್​ ಮಹೀಂದ್ರಾ ಎರಿಕ್, ನನ್ನ ಸ್ವಂತ ದೇಶದ ಬಗ್ಗೆ ನನಗೆ ಎಷ್ಟು ಕಡಿಮೆ ತಿಳಿದಿದೆ ಎಂದು ತೋರಿಸಿದ್ದೀರಿ. ಇದು ಅದ್ಭುತವಾಗಿದೆ. ಈ ರಸ್ತೆಯನ್ನು ಯಾರು ನಿರ್ಮಿಸಿದ್ದಾರೆಂದು ನಾನು ಕಂಡುಹಿಡಿಯಬೇಕು ಎಂದು ಬರೆದುಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಸಿರು ತುಂಬಿದ ರಸ್ತೆಯ ಫೋಟೋ ವೈರಲ್​ ಆಗಿದೆ.  ಪೋಟೋ ನೋಡಿದ ನೆಟ್ಟಿಗರು ಭಾರತದ ಸೌಂದರ್ಯವನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಜನವರಿ 9 ರಂದು ಆನಂದ್​ ಮಹೀಂದ್ರಾ ಹಂಚಿಕೊಂಡ ಪೋಟೋ 12 ಸಾವಿರಕ್ಕೂ ಹೆಚ್ಚು ಲೈಕ್ಸ್​ ಗಳಿಸಿದ್ದು ಹಲವಾರು ಮಂದಿ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಪೊಲೀಸ್​ ಅವತಾರದ ಮೂಲಕ ಭಕ್ತರಿಗೆ ದರ್ಶನ ನೀಡಿದ ಕಾಶಿಯ ಕೊತ್ವಾಲ’ಬಾಬಾ ಕಾಲಭೈರವ’

Published On - 11:11 am, Mon, 10 January 22