ಹೃದಯಸ್ಪರ್ಶಿ ದೃಶ್ಯಕ್ಕೆ ಸ್ಕ್ರಿಪ್ಟೆಡ್‌ ಎಂದು ಕಾಮೆಂಟ್‌ ಮಾಡಿದವನಿಗೆ ಕೌಂಟರ್‌ ಕೊಟ್ಟ ಆನಂದ್‌ ಮಹೀಂದ್ರಾ

ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿರುವ ಉದ್ಯಮಿ ಆನಂದ್ ಮಹೀಂದ್ರಾ ಕುತೂಹಲಕಾರಿ ವಿಡಿಯೋಗಳನ್ನು ಶೇರ್‌ ಮಾಡುತ್ತಿರುತ್ತಾರೆ. ಅದೇ ರೀತಿ ಇತ್ತೀಚಿಗೆ ಕಂಟೆಂಟ್‌ ಕ್ರಿಯೇಟರ್‌ ವಿಶೇಷ ಚೇತನ ವ್ಯಕ್ತಿಯನ್ನು ತನ್ನ ಪೋರ್ಷೆ ಕಾರಿನಲ್ಲಿ ಸವಾರಿ ಕರೆದೊಯ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ದೃಶ್ಯವನ್ನು ವ್ಯಕ್ತಿಯೊಬ್ಬ ಸ್ಕ್ರಿಪ್ಟೆಡ್‌ ಎಂದು ಹೇಳಿದ್ದು, ಈ ಮಾತಿಗೆ ʼನಾನು ಒಳ್ಳೆಯ ಸಂದೇಶದ ಮೇಲೆ ಫೋಕಸ್‌ ಮಾಡ್ತೇನೆ, ಅವರ ಉದ್ದೇಶ ಏನೇ ಇರಲಿʼ ಅವರು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಪೋಸ್ಟ್‌ ಇದೀಗ ವೈರಲ್‌ ಆಗುತ್ತಿದೆ.

ಹೃದಯಸ್ಪರ್ಶಿ ದೃಶ್ಯಕ್ಕೆ ಸ್ಕ್ರಿಪ್ಟೆಡ್‌ ಎಂದು ಕಾಮೆಂಟ್‌ ಮಾಡಿದವನಿಗೆ ಕೌಂಟರ್‌ ಕೊಟ್ಟ ಆನಂದ್‌ ಮಹೀಂದ್ರಾ
ವೈರಲ್​​ ವಿಡಿಯೋ
Edited By:

Updated on: Mar 24, 2025 | 9:25 AM

ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಹಾಗೂ ದೇಶದ ಶ್ರೀಮಂತ ಉದ್ಯಮಿ ಆನಂದ್‌ ಮಹೀಂದ್ರಾ (Anand Mahindra) ಸೋಷಿಯಲ್‌ ಮೀಡಿಯಾದಲ್ಲಿ (Social Media) ಸಾಕಷ್ಟು ಸಕ್ರಿಯರಾಗಿದ್ದಾರೆ. ಇವರು ಒಂದಲ್ಲಾ ಒಂದು ಹಾಸ್ಯಮಯ, ಹೃದಯಸ್ಪರ್ಶಿ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಟ್ವೀಟ್‌, ವಿಡಿಯೋಗಳನ್ನು ಶೇರ್‌ ಮಾಡುವ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಇತ್ತೀಚಿಗೆ ಇವರು ಕಂಟೆಂಟ್‌ ಕ್ರಿಯೆಟರ್‌ ಸೀನು ಮಲಿಕ್‌ ತನ್ನ ಪೋರ್ಷೆ ಕಾರಿನ ಜೊತೆ ನಿಂತು ಸೆಲ್ಫಿ ತೆಗೆಯಲು ಬಂದ ವಿಶೇಷ ಚೇತನ ವ್ಯಕ್ತಿಯನ್ನು ಅದೇ ಕಾರಿನಲ್ಲಿ ಸವಾರಿ ಮಾಡಿಸಿದಂತಹ ಹಳೆಯ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ದೃಶ್ಯವನ್ನು ವ್ಯಕ್ತಿಯೊಬ್ಬ ಸ್ಕ್ರಿಪ್ಟೆಡ್‌ (scripted) ಎಂದು ಹೇಳಿದ್ದು, ಈ ಮಾತಿಗೆ ʼನಾನು ಒಳ್ಳೆಯ ಸಂದೇಶದ ಮೇಲೆ ಫೋಕಸ್‌ ಮಾಡ್ತೇನೆ, ಅವರ ಉದ್ದೇಶ ಏನೇ ಇರಲಿʼ ಎಂದು ಆನಂದ್‌ ಮಹೀಂದ್ರಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಪೋಸ್ಟ್‌ ಇದೀಗ ವೈರಲ್‌ ಆಗುತ್ತಿದೆ.

ಈ ವಿಡಿಯೋ ಒಂದು ವರ್ಷಕ್ಕಿಂತ ಹಳೆಯದು, ಇತ್ತೀಚಿಗಷ್ಟೇ ನಾನು ಈ ದೃಶ್ಯವನ್ನು ನೋಡಿದೆ. ಉದಾರ ಮನೋಭಾವ ಮತ್ತು ಸಹಾನುಭೂತಿಗೆ ಕಾರಿನ ಮಾಲೀಕನಿಗೆ ಧನ್ಯವಾದಗಳು ಎಂಬ ಶೀರ್ಷಿಕೆ ಬರೆದು, ಕಂಟೆಂಟ್‌ ಕ್ರಿಯೆಟರ್‌ ವಿಶೇಷ ಚೇತನ ವ್ಯಕ್ತಿಯನ್ನು ತನ್ನ ಪೋರ್ಷೆ ಕಾರಿನಲ್ಲಿ ಸವಾರಿ ಮಾಡಿಸಿದಂತಹ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ದೃಶ್ಯ ಸಾಕಷ್ಟು ವೈರಲ್‌ ಆಗಿತ್ತು ಮಾತ್ರವಲ್ಲದೆ ಹಲವಾರು ಜನ ಇದಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದರು.

ಇದನ್ನೂ ಓದಿ
ಇದು ಕ್ಯಾಬ್ ಓಯೋ ಅಲ್ಲ; ವೈರಲ್‌ ಆಯ್ತು ಕ್ಯಾಬ್‌ನ ವಾರ್ನಿಂಗ್‌ ಬೋರ್ಡ್‌
ಈ ಹಳ್ಳಿಯಲ್ಲಿ ಮದುವೆಯಾಗಿ 7 ದಿನಗಳವರೆಗೆ ಬೆತ್ತಲಾಗಿರಬೇಕಂತೆ ಮಹಿಳೆಯರು
ಮಗಳ ವಯಸ್ಸಿನ ಹುಡುಗಿ ಜತೆ ರಸ್ತೆಯಲ್ಲಿ ವ್ಯಕ್ತಿಯ ರೊಮ್ಯಾನ್ಸ್
ರಸ್ತೆಯಲ್ಲಿ ಹೋಗುತ್ತಿರುವಾಗ ಕುಸಿದು ಪ್ರಾಣಬಿಟ್ಟ ಯುವಕ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:


ಆದರೆ ಈ ವಿಡಿಯೋಗೆ ವ್ಯಕ್ತಿಯೊಬ್ಬ ಸರ್‌ ಇದು ಸ್ಕ್ರಿಪ್ಟೆಡ್‌ ಎಂದು ಕಾಮೆಂಟ್‌ ಮಾಡಿದ್ದು, ಇದಕ್ಕೆ ಉತ್ತರಿಸಿದ ಆನಂದ್‌ ಮಹೀಂದ್ರಾ, “ಬಹುಶಃ ಆಗಿರಬಹುದು, ಆದರೆ ನಾನು ಅದರಲ್ಲಿರುವ ಉತ್ತಮ ಸಂದೇಶದ ಮೇಲೆ ಫೋಕಸ್‌ ಮಾಡ್ತೇನೆ, ಅವರ ಉದ್ದೇಶವನ್ನಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಿಯಕರನೊಂದಿಗೆ ಓಡಿ ಹೋಗಲು ಮುಂದಾದ ಮಗಳ ಕಾಲಿಗೆ ಬಿದ್ದು ಗೋಗರೆದ ತಂದೆ

ಮಾರ್ಚ್‌ 21 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ʼನಿಜ ಸರ್‌ ಉದ್ದೇಶಕ್ಕಿಂತ, ಅದರಲ್ಲಿರುವ ಸಂದೇಶ ಹೆಚ್ಚು ಪರಿಣಾಮಕಾರಿಯಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಯಾವಾಗಲೂ ಗಮನವನ್ನು ಸಂದೇಶದ ಮೇಲೆ ಕೇಂದ್ರೀಕರಿಸುವುದು ಯೋಗ್ಯವಾಗಿದೆʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸ್ಕ್ರಿಪ್ಟ್‌ ಆಗಿದ್ರೆ ಏನಂತೆ, ಅದರಲ್ಲಿ ಉತ್ತಮ ಸಂದೇಶವಿದೆಯಲ್ಲ ಅಷ್ಟು ಸಾಕುʼ ಎಂದು ಆನಂದ್‌ ಮಹೀಂದ್ರಾ ಮಾತಿಗೆ ಬೆಂಬಲ ಸೂಚಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 9:23 am, Mon, 24 March 25