ಪ್ರಿಯಕರನೊಂದಿಗೆ ಓಡಿ ಹೋಗಲು ಮುಂದಾದ ಯುವತಿ; ಮಗಳ ಕಾಲಿಗೆ ಬಿದ್ದು ಕಣ್ಣೀರಿಟ್ಟ ತಂದೆ
ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ದೃಶ್ಯಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ನಮ್ಮ ಕಣ್ಣಂಚಲ್ಲಿ ನೀರು ತರಿಸುತ್ತವೆ. ಅಂತಹದೊಂದು ಮನಕಲಕುವ ದೃಶ್ಯ ಇದೀಗ ವೈರಲ್ ಆಗಿದ್ದು, ಪ್ರಿಯಕರನೊಂದಿಗೆ ಓಡಿ ಹೋಗಲು ಮುಂದಾದ ಮಗಳ ಕಾಲಿಗೆ ಬಿದ್ದು, ನಮ್ಮನ್ನ ಬಿಟ್ ಹೋಗ್ಬೇಡ ಮಗಳೇ ಎಂದು ಗೋಗರೆದಿದ್ದಾರೆ. ಅಷ್ಟಕ್ಕೂ ಇದು ನೈಜ ಘಟನೆಯೇ ಅಥವಾ ಸ್ಕ್ರಿಪ್ಟೆಡ್ ವಿಡಿಯೋನಾ? ಈ ಕುರಿತ ಮಾಹಿತಿ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಪ್ರೇಮ ವಿವಾಹವಾಗಲು (Love marriage) ಇಷ್ಟಪಡುತ್ತಾರೆ. ಕೆಲವರು ತಂದೆ, ತಾಯಿ, ಕುಟುಂಬದವರನ್ನು ಒಪ್ಪಿಸಿ ಅದ್ದೂರಿಯಾಗಿ ಮದುವೆಯಾದರೆ, ಇನ್ನೂ ಕೆಲವರು ತಂದೆ-ತಾಯಿ ಒಪ್ಪಿಲ್ಲ ಎಂದು ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗುತ್ತಾರೆ. ಅದೇ ರೀತಿ ತಮಿಳುನಾಡಿನಲ್ಲೊಂದು (Tamil Nadu) ಘಟನೆ ನಡೆದಿದ್ದು, ಯುವತಿಯೊಬ್ಬಳು ನಡು ರಾತ್ರಿಯಲ್ಲಿ ಪ್ರಿಯಕರನೊಂದಿಗೆ ಓಡಿ ಹೋಗಲು ಯತ್ನಿಸಿದ್ದಾಳೆ. ಆ ಸಂದರ್ಭದಲ್ಲಿ ಅಸಹಾಯಕ ತಂದೆ ಮಗಳ ಕಾಲಿಗೆ ಬಿದ್ದು, ದಯವಿಟ್ಟು ನಮ್ಮನ್ನು ಬಿಟ್ ಹೋಗ್ಬೇಡ ಮಗಳೇ ಎಂದು ಗೋಗರೆದಿದ್ದಾರೆ. ಇಲ್ಲಿ ಅಪ್ಪ ತನಗೆ ಮಗಳು ಬೇಕೆಂದು ಬಯಸಿದರೆ, ಮಗಳು ಮಾತ್ರ ಹೆತ್ತು-ಹೊತ್ತು ಸಾಕಿ ತಂದೆ ತಾಯಿಯನ್ನೇ ಬಿಟ್ಟು ನೆನ್ನೆ ಮೊನ್ನೆ ಪರಿಚಯವಾದ ಯುವಕನೊಂದಿಗೆ ಓಡಿ ಹೋಗಲು ಮುಂದಾಗಿದ್ದಾಳೆ. ಈ ನಾಟಕೀಯ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಗಳು ತನ್ನ ಗೆಳೆಯನೊಂದಿಗೆ ನಡು ರಾತ್ರಿ ಓಡಿ ಹೋಗಲು ಯತ್ನಿಸಿದಾಗ, ಕಣ್ಣೀರಿಡುತ್ತಾ ಆಕೆಯ ಹಿಂದೆಯೇ ಬಂದ ತಂದೆ ಮಗಳ ಕಾಲಿಗೆ ಬಿದ್ದು ನಮ್ಮನ್ನು ಬಿಟ್ ಹೋಗ್ಬೇಡ ಮಗಳೇ ಎಂದು ಬೇಡಿಕೊಂಡಿದ್ದಾರೆ. ಈ ಮನಕಲಕುವ ದೃಶ್ಯವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ. ತಮಿಳುನಾಡಿನಲ್ಲಿ ನಡೆದ ಘಟನೆಯ ಈ ವಿಡಿಯೋವನ್ನು ಪರಿಶೀಲಿಸಿದಾಗ ಇದು ನೈಜ ಘಟನೆಯಲ್ಲ ಬದಲಿಗೆ ಇದೊಂದು ಶಾರ್ಟ್ ಫಿಲ್ಮ್ ಎಂಬುದು ತಿಳಿದು ಬಂದಿದೆ.
పరుగు సినిమాలో దృశ్యం.. తమిళనాడు లో ప్రత్యక్షం!
కన్న కూతురు ప్రేమించిన యువకుడితో వెళ్లిపోతుంటే వెళ్ళొదని ప్రద్యేయ పడుతున్న తండ్రి.. విడియో వైరల్#TamilNadu #Daughters #UANow #Parents pic.twitter.com/fzv51crOnO
— ఉత్తరాంధ్ర నౌ! (@UttarandhraNow) March 22, 2025
ಈ ಕುರಿತ ವಿಡಿಯೋವನ್ನು UttarandhraNow ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಡು ರಾತ್ರಿಯಲ್ಲಿ ಯುವತಿಯೊಬ್ಬಳು ತನ್ನ ತಂದೆಯ ಮಾತನ್ನು ದಿಕ್ಕರಿಸಿ ಪ್ರಿಯಕರನೊಂದಿಗೆ ಓಡಿ ಹೋಗಲು ಯತ್ನಿಸುತ್ತಿರುವ ದೃಶ್ಯವನ್ನು ಕಾಣಹುದು. ಯುವತಿಯ ಹಿಂದೆಯೇ ಹೋದ ತಂದೆ ಆಕೆಯ ಕಾಲಿಗೆ ಬಿದ್ದು, ದಯವಿಟ್ಟು ನಮ್ಮನ್ನು ಬಿಟ್ ಹೋಗ್ಬೇಡ ಮಗಳೇ ಎಂದು ಗೋಗರೆಯುತ್ತಿರುವ ಹೃದಯ ವಿದ್ರಾವಕ ದೃಶ್ಯವನ್ನು ಕಾಣಬಹುದು.
ಮತ್ತಷ್ಟು ಓದಿ: Viral: ತಾಯಿ ಮಗನ ಈ ಹಾಡಿನ ಮೋಡಿಗೆ ಫಿದಾ ಆಗದವರೇ ಇಲ್ಲ
ಮಾರ್ಚ್ 22 ರಂದು ಶೇರ್ ಮಾಡಲಾದ ಈ ವಿಡಿಯೋ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನಿಜವಲ್ಲ, ಕಿರು ಚಿತ್ರವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದೆ. ಇನ್ನೊಬ್ಬ ಬಳಕೆದಾರರು ʼಸಾಕಿ ಸಲುಹಿದ ತಂದೆ-ತಾಯಿಯೇ ಬೇಡವಾದರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಸ್ಕ್ರಿಪ್ಟೆಡ್ ವಿಡಿಯೋʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Sun, 23 March 25