Anand Mahindra: ‘ನಾಟು ನಾಟು’ ಹಾಡಿಗೆ ಆನಂದ್ ಮಹಿಂದ್ರಾ ಸಖತ್ ಸ್ಟೆಪ್: ನೃತ್ಯ ಹೇಳಿಕೊಟ್ಟಿದ್ದು ಬೇರೆ ಯಾರು ಅಲ್ಲ…

ಈ ಕಿರು ಕ್ಲಿಪ್‌ನಲ್ಲಿ, ಆನಂದ್ ಮಹೀಂದ್ರಾ ಅವರು ರಾಮ್ ಚರಣ್ ಅವರಿಂದ ನಾಟು ನಾಟುವಿನ ಸ್ಟೆಪ್ ಅನ್ನು ಹೇಗೆ ಮಾಡಬೇಕೆಂಬುದನ್ನು ಕಲಿಯುತ್ತಿರುವುದನ್ನು ಕಾಣಬಹುದು. ಹೈದರಾಬಾದ್ ಇ-ಪ್ರಿಕ್ಸ್‌ನಲ್ಲಿ ಇಬ್ಬರೂ ಒಟ್ಟಿಗೆ ನೃತ್ಯ ಮಾಡಿ ನಂತರ ಪರಸ್ಪರ ಅಪ್ಪಿಕೊಂಡಿರುವುದು ಈ ವಿಡಿಯೋದಲ್ಲಿ ಕಾಣುತ್ತದೆ.

Anand Mahindra: ನಾಟು ನಾಟು ಹಾಡಿಗೆ ಆನಂದ್ ಮಹಿಂದ್ರಾ ಸಖತ್ ಸ್ಟೆಪ್: ನೃತ್ಯ ಹೇಳಿಕೊಟ್ಟಿದ್ದು ಬೇರೆ ಯಾರು ಅಲ್ಲ...
ಆನಂದ್ ಮಹಿಂದ್ರಾ ಜೊತೆ ನಟ ರಾಮ್ ಚರಣ್
Image Credit source: Twitter
Edited By:

Updated on: Feb 12, 2023 | 6:48 PM

ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ (RRR) ಚಿತ್ರದ `ನಾಟು ನಾಟು’ (Naatu Naatu) ಸಾಂಗ್ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ಬಾಯಲ್ಲೂ `ನಾಟು ನಾಟು ಸಾಂಗ್. ಇದೀಗ ಆನಂದ್ ಮಹಿಂದ್ರಾ (Anand Mahindra) ಅವರು ಸಹ ನಾಟು ನಾಟು ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ವಿಶೇಷ ಅಂದ್ರೆ ಸಾಂಗ್ ಸ್ಟೆಪ್ ರಾಮ್‌ ಚರಣ್ (Ram Charan) ಅವರೇ ಹೇಳಿಕೊಟ್ಟಿದ್ದಾರೆ. ಇದರ ವಿಡಿಯೋ ಸ್ವತಃ  ಆನಂದ್ ಮಹೇಂದ್ರಾ  ಅವರೇ ತಮ್ಮ ಅಧಿಕೃತ ಟ್ವಿಟ್ಟರ್​ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.  ವಿಶೇಷ ಅಂದ್ರೆ ಆನಂದ್ ಮಹಿಂದ್ರಾ ಅವರಿಗೆ ಚರಣ್  ಹೆಜ್ಜೆ ಹಾಕುವುದನ್ನು ಹೇಳಿಕೊಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ಸಣ್ಣ ವಿಡಿಯೋ ಕ್ಲಿಪ್‌ನಲ್ಲಿ, ಆನಂದ್ ಮಹೀಂದ್ರಾ ಅವರು ರಾಮ್ ಚರಣ್ ಅವರಿಂದ ನಾಟು ನಾಟುವಿನ ಸ್ಟೆಪ್ ಹೇಗೆ ಹಾಕಬೇಕೆಂದು ಕಲಿಯುತ್ತಿರುವುದನ್ನು ನೋಡಬಹುದು. ಹೈದರಾಬಾದ್ ಇ-ಪ್ರಿಕ್ಸ್‌ನಲ್ಲಿ ಇಬ್ಬರೂ ಒಟ್ಟಿಗೆ ನೃತ್ಯ ಮಾಡಿ ನಂತರ ಪರಸ್ಪರ ಅಪ್ಪಿಕೊಂಡಿರುವುದು ಈ ವಿಡಿಯೋದಲ್ಲಿದಲ್ಲಿದೆ.

ಇದನ್ನೂ ಓದಿ: ಪ್ರೀತಿಯ ಹುಡುಗಿಗೆ ಪ್ರೊಪೋಸ್ ಮಾಡಿದ ಹುಡುಗನಿಗೆ ಕಾದಿತ್ತು ಶಾಕ್! ಏನಾಯ್ತು ನೀವೇ ನೋಡಿ

ಹೈದರಾಬಾದ್ ಪ್ರಿಕ್ಸ್ ನಲ್ಲಿ ನಟ ರಾಮ್ ಚರಣ್  ಅವರಿಂದ `ನಾಟು ನಾಟು’ ಹಾಡಿನ ಬೇಸಿಕ್ ಸ್ಟೆಪ್ ಕಲಿತೆ. ಧನ್ಯವಾದಗಳು ಮತ್ತು ಆಸ್ಕರ್‌ಗೆ ಶುಭವಾಗಲಿ ನನ್ನ ಗೆಳೆಯ ಎಂದು ಟ್ವಿಟ್ಟರ್​ನಲ್ಲಿ ರಾಮ್ ಚರಣ್​ಗೆ ವಿಶ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ