ಉದ್ಯಮಿ ಆಗಿರುವ ಆನಂದ ಮಹೀಂದ್ರಾ ಆಗಾಗ ಕುತೂಹಲ ಮೂಡಿಸುವ ಕೆಲವು ಪೋಸ್ಟ್ಗಳನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ಅಚ್ಚರಿಯ ಸಂದೇಶಗಳನ್ನು ಹೇಳುತ್ತಾ ತಮ್ಮ ಟ್ವಿಟರ್ ಹಿಂಬಾಲಕರ ಗಮನ ಸೆಳೆಯುತ್ತಿರುತ್ತಾರೆ. ನ್ಯೂಯಾರ್ಕ್ನಲ್ಲಿ ಮಹಿಳೆಯೊಬ್ಬಳು ಸ್ಟೀಲ್ ಡಬ್ಬ ಹಿಡಿದು ಆಫೀಸ್ಗೆ ತೆರಳುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ಫುಲ್ ವೈರಲ್ ಆಗಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ತಮ್ಮ ಬಾಲ್ಯದ ನೆನಪುಗಳಿವು ಎಂದು ಪ್ರತಿಕ್ರಿಯಿಸಿದ್ದಾರೆ.
ಸ್ಟೀಲ್ ಡಬ್ಬಾಗಳು ( ಬಾಕ್ಸ್) ಅಥವಾ ಟಿಫಿನ್ ಬಾಕ್ಸ್ಗಳು ಭಾರತೀಯರ ಜೀವನೋಪಾಯದ ಒಂದು ಭಾಗವಾಗಿದೆ. ಆದರೆ ನ್ಯೂಯಾರ್ಕ್ನಲ್ಲಿ ಮಹಿಳೆಯು ಸ್ಟೀಲ್ ಟಿಫಿನ್ ಬಾಕ್ಸ್ ಹಿಡಿದು ಆಫೀಸ್ಗೆ ತೆರಳುತ್ತಿರುವ ದೃಶ್ಯವನ್ನು ಎಂದಾದರೂ ನೋಡಿದ್ದೀರಾ? ಇಂತಹ ಒಂದು ಅಪರೂಪದ ದೃಶ್ಯವನ್ನು ಆನಂದ ಮಹೀಂದ್ರ ಹಂಚಿಕೊಂಡಿದ್ದಾರೆ.
New York, Central Park. Dabba walli pic.twitter.com/vMZmToLbOH
— anand mahindra (@anandmahindra) August 19, 2021
ಆನಂದ್ ಮಹೀಂದ್ರ ಫೋಟೊವನ್ನು ಆಗಸ್ಟ್ 20ರಂದು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಆಗಿನಿಂದ 16,000 ಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದಿದೆ. ಜನರು ಪೋಸ್ಟ್ ನೋಡಿ ವಿಬಿಧ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಇದೇ ರೀತಿಯ ಇನ್ನಷ್ಟು ಚಿತ್ರಗಳನ್ನೂ ಸಹ ಹಂಚಿಕೊಂಡಿದ್ದಾರೆ.
ಟಿಫಿನ್ ಡಬ್ಬಗಳ ಮೇಲಿನ ಪ್ರೀತಿ ಶಾಶ್ವತವಾದದ್ದು ಎಂದು ಓರ್ವರು ಪ್ರತಿಕ್ರಿಯೆ ನೀಡಿದ್ದಾರೆ. ಟಿಫಿನ್ ಬಾಕ್ಸ್ನ ಒಳಗೆ ಏನಿದೆ ಎಂಬುದು ತುಂಬಾ ಕುತೂಹಲ ಹುಟ್ಟಿಸುತ್ತಿದೆ, ದಾಲ್.. ರೋಟಿ, ಬರ್ಗರ್ ಅಥವಾ ಸ್ಯಾಂಡ್ವಿಚ್? ಎಂದು ಮತ್ತೋರ್ವರು ಪ್ರತಿಕ್ರಿಯಿಸಿದ್ದಾರೆ. ವಿದೇಶದಲ್ಲಿ ಭಾರತದ ಜನರು ವಾಸಿಸುತ್ತಿದ್ದರೂ ಸಂಸ್ಕೃತಿ ಎಂದಿಗೂ ಬದಲಾಗುವುದಿಲ್ಲ ಎಂದು ಇನ್ನೋರ್ವರು ಅಭಿಪ್ರಾಯಪಟ್ಟಿದ್ದಾರೆ.
New York, Central Park. Dabba walli pic.twitter.com/vMZmToLbOH
— anand mahindra (@anandmahindra) August 19, 2021
ಇದನ್ನೂ ಓದಿ:
ರೋಬೋಟ್ಗಿಂತ ವೇಗವಾಗಿ ದೋಸೆ ಮಾಡ್ತಾನೆ ಈತ! ಆನಂದ್ ಮಹೀಂದ್ರ ಹಂಚಿಕೊಂಡ ವಿಡಿಯೋ ವೈರಲ್
ಮುಂಬೈ ತಾಜ್ ಹೋಟೆಲ್ನಲ್ಲಿ ಒಂದು ರಾತ್ರಿ ತಂಗಲು 6 ರೂಪಾಯಿ; ಆನಂದ್ ಮಹೀಂದ್ರಾ ಟ್ವೀಟ್ ನೋಡಿದರಾ?
(Anand Mahindra post in social media women carrying steel dabba in new york)
Published On - 3:33 pm, Sun, 22 August 21