Andhra Pradesh: ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಅರ್ಚಕರ ಜೀವ ಉಳಿಸಿದ ಟ್ರಾಫಿಕ್ ಪೊಲೀಸ್; ವಿಡಿಯೊ ವೈರಲ್

| Updated By: shruti hegde

Updated on: Nov 23, 2021 | 12:01 PM

Viral video: ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಅರ್ಚಕರ ಪ್ರಾಣ ರಕ್ಷಿಸಿದ ಟ್ರಾಫಿಕ್​ ಪೊಲೀಸ್​. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​.

Andhra Pradesh: ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಅರ್ಚಕರ ಜೀವ ಉಳಿಸಿದ ಟ್ರಾಫಿಕ್ ಪೊಲೀಸ್; ವಿಡಿಯೊ ವೈರಲ್
ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಅರ್ಚಕರ ಪ್ರಾಣ ರಕ್ಷಿಸಿದ ಟ್ರಾಫಿಕ್​ ಪೊಲೀಸ್
Follow us on

ಆಂಧ್ರ ಪ್ರದೇಶದಲ್ಲಿ (Andhra Pradesh) ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಅರ್ಚಕನನ್ನು ಟ್ರಾಫಿಕ್ ಪೊಲೀಸ್ ರಕ್ಷಿಸಿ ಮಾನವೀಯತೆ ಮೆರೆದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ಫುಲ್ ವೈರಲ್ ಆಗಿದೆ. ಟ್ರಾಫಿಕ್ ಪೊಲೀಸ್ (Traffic police) ನಾಯಕ್ ಅವರು ತಮ್ಮ ಜೀವವನ್ನೇ ಪಣಕ್ಕಿಟ್ಟು ನೆಲ್ಲೂರಿನ ಕೊಡವಲೂರು ಶಿವ ದೇವಸ್ಥಾನದಲ್ಲಿನ ಅರ್ಚಕರ ಜೀವ ಉಳಿಸಿದ್ದಾರೆ. ಅರ್ಚಕರು ವೆಕಟೇಶ್ವರಪುರಂ ಸೇತುವೆಯ ಮೂಲಕ ಬೈಕ್​ನಲ್ಲಿ ಸಾಗುತ್ತಿದ್ದರು. ಆ ಸಮಯದಲ್ಲಿ ಪ್ರವಾಹಕ್ಕೆ (Flood) ಸಿಲುಕಿ ಜೀವ ಉಳಿಸಿಕೊಳ್ಳಲು ಕಿರುಚಾಡುತ್ತಿದ್ದರು. ಅದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ನಾಯಕ್ ಅವರು ಅರ್ಚಕರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ವಿಡಿಯೊವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ನೆಲ್ಲೂರು ಜಿಲ್ಲೆಯ ಕೊಡವಲೂರು ಶಿವ ದೇವಾಲಯದಲ್ಲಿನ ಅರ್ಚಕರು ವೆಂಕಟೇಶ್ವರಪುರಂ ಸೇತುವೆಯಲ್ಲಿ ಹೋಗುತ್ತಿರುವಾಗ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಸಹಾಯ ಮಾಡಿ ಎಂದು ಕೂಗುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸ್ ನಾಯಕ್ ಅವರು ಅರ್ಚಕರ ಪ್ರಾಣ ರಕ್ಷಿಸಿದ್ದಾರೆ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಪೋಸ್ಟ್ ಮಾಡಲಾಗಿದೆ.

ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲವರು ಟ್ರಾಫಿಕ್ ಪೊಲೀಸ್ ನಾಯಕ್ ಅವರ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ಧನ್ಯವಾದ ತಿಳಿಸಿದ್ದಾರೆ. ಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಪಾರ ನಷ್ಟ ಉಂಟಾಗಿದೆ. ಅಪಾರ ಪ್ರಮಾಣದ ಜೀವ ಹಾನಿ, ಆಸ್ತಿ-ಪಾಸ್ತಿ ನಷ್ಟಕ್ಕೆ ಕಾರಣವಾಗಿದೆ. ಆಂಧ್ರಪ್ರದೇಶದ ಭಾರೀ ಮಳೆಯ ಪರಿಣಾಮ ಒಟ್ಟು 34 ಮಂದಿ ಸಾವಿಗೀಡಾಗಿದ್ದು, 10 ಮಂದು ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ:

Bengaluru Rain: ಮುಂದುವರೆದ ಮಳೆ ಅಬ್ಬರ, ಕೇಂದ್ರಿಯ ವಿಹಾರ ಅಪಾರ್ಟ್​​ಮೆಂಟ್​​ನಲ್ಲಿ ಪವರ್ ಕಟ್

Andhra Pradesh Rains: ಭಾರಿ ಮಳೆಗೆ ದಕ್ಷಿಣದ ರಾಜ್ಯಗಳು ತತ್ತರ; ಆಂಧ್ರದಲ್ಲಿ 34 ಸಾವು, 10 ಮಂದಿ ನಾಪತ್ತೆ

Published On - 11:57 am, Tue, 23 November 21