ಇದು ಫೇಸ್ ಬುಕ್, ಇನ್ಸ್ಟಾಗ್ರಾಮ್ ಯುಗ. ಈ ಸಾಮಾಜಿಕ ಮಾಧ್ಯಮದಲ್ಲಿ ಬಹುತೇಕ ಎಲ್ಲರೂ ಆಕ್ಟಿವ್ ಆಗಿದ್ದು, ಒಂದಲ್ಲಾ ಒಂದು ವಿಚಾರಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಿನಿ ತಾರೆಯರೂ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದು, ಸ್ಟಾರ್ ನಟ ನಟಿಯರು, ತಾವು ಎಲ್ಲಾದರೂ ಪ್ರಯಾಣಿಸುವಾಗ ಇಂಟರೆಸ್ಟಿಂಗ್ ವಿಚಾರಗಳನ್ನು ಕಂಡರೆ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಬಾಲಿವುಡ್ ನಟ ಅನುಪಮ್ ಖೇರ್ ಕೂಡಾ ಸುಂದರ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಬಾಚಣಿಗೆ ಮಾರುವ ವ್ಯಕ್ತಿಯೊಂದಿಗಿನ ಇವರ ಸಂಭಾಷಣೆಯನ್ನು ಕಂಡು ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ.
ಹಾಸ್ಯಮಯ ಸಂಭಾಷಣೆಯ ಈ ವಿಡಿಯೋದಲ್ಲಿ ಬಾಚಣಿಗೆ ಮಾರಿ ಜೀವನ ನಡೆಸುವಂತಹ ಮುಗ್ಧ ವ್ಯಕ್ತಿಯೊಬ್ಬರು ಬೋಳು ತಲೆಯ ಅನುಪಮ್ ಖೇರ್ ಅವರಿಗೆ ಬಾಚಣಿಗೆಯನ್ನು ಮಾರಾಟ ಮಾಡಿದ್ದಾರೆ. ತನಗೆ ಬಾಚಣಿಗೆಯ ಅವಶ್ಯಕತೆಯಿಲ್ಲದಿದ್ದರೂ ಅನುಪಮ್ ಖೇರ್ ಆ ವ್ಯಕ್ತಿಯಿಂದ ಎರಡು ಬಾಚಣಿಕೆಯನ್ನು ಖರೀದಿಸಿದ್ದಾರೆ.
ಇವರಿಬ್ಬರ ನಡುವಿನ ಹಾಸ್ಯಮಯ ಸಂಭಾಷನೆಯ ವಿಡಿಯೋವನ್ನು ಅನುಪಮ್ ಖೇರ್ (@AnupamPKher) ತಮ್ಮ X ಖಾತೆಯಲ್ಲಿ ಹಂಚಿಕೊಡಿದ್ದು, ಮುಂಬೈನಲ್ಲಿ ಫನ್ನಿ ಎನ್ಕೌಂಟರ್: ಮುಂಬೈನ ಬೀದಿಗಳಲ್ಲಿ ಬಾಚಣಿಗೆ ಮಾರುತ್ತಿದ್ದ ರಾಜು! ಬಾಚಣಿಗೆ ಖರೀದಿಸುವ ಯಾವ ಅವಶ್ಯಕತೆಯೂ ನನಗಿರಲಿಲ್ಲ, ಆದರೆ ಅಂದು ರಾಜುವಿನ ಹುಟ್ಟುಹಬ್ಬವಾಗಿದ್ದ ಕಾರಣ ನಾನು ಆ ದಿನ ಬಾಚಣಿಗೆಯನ್ನು ಖರೀದಿಸಿದರೆ ಅದು ಆತನಿಗೆ ಉತ್ತಮ ಆರಂಭ ಎಂದು ಆತ ಭಾವಿಸಿದ್ದ. ಅದಕ್ಕಾಗಿ ಬಾಚಣಿಗೆ ಖರೀದಿಸಿದೆ. ನೀವು ಎಂದಾದರೂ ಅವನನ್ನು ನೋಡಿದರೆ ದಯವಿಟ್ಟು ಅತನ ಬಳಿ ಬಾಚಣಿಗೆ ಖರೀದಿಸಿ. ನಿಮಗೆ ಕೂದಲು ಇದೆಯೋ ಇಲ್ಲವೋ ಮುಖ್ಯವಲ್ಲ! ಅವನು ತನ್ನ ಸರಳ ವ್ಯಕ್ತಿತ್ವದಿಂದ ಖಂಡಿತವಾಗಿಯೂ ನಿಮ್ಮ ದಿನವನ್ನು ಬೆಳಗಿಸುತ್ತಾನೆ” ಎಂಬ ಸುದೀರ್ಘ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
BALD AND BEAUTIFUL!!
Funny Encounter in Mumbai: Raju sells combs (कंघी) on the streets of Mumbai! I will never have a reason to buy a comb. But it was his birthday. And he felt if I buy one it will be a good beginning for him. I was sure he had seen better days in life. His… pic.twitter.com/VcXX5uWMhG— Anupam Kher (@AnupamPKher) February 15, 2024
ವೈರಲ್ ವಿಡಿಯೋದಲ್ಲಿ ಬಾಚಣಿಗೆ ಮಾರುವಂತಹ ರಾಜು ಮತ್ತು ಅನುಪಮ್ ಖೇರ್ ಅವರ ನಡುವಿನ ಮುದ್ದಾದ ಸಂಭಾಷಣೆಯನ್ನು ಕಾಣಬಹುದು. ಮುಂಬೈ ರಸ್ತೆ ಬದಿಯಲ್ಲಿ ಅನುಪಮ್ ಖೇರ್ ಕಾರ್ ನಿಲ್ಲಿಸಿದಾಗ, ಅವರ ಬಳಿ ಬಂದಂತಹ ರಾಜು, ಬಾಚಣಿಕೆಯನ್ನು ಖರೀದಿಸುವಂತೆ ಕೇಳಿಕೊಳ್ಳುತ್ತಾನೆ. ಆದರೆ ಖೇರ್ ಅವರಿಗೆ ಬಾಚಣಿಗೆ ಖರೀದಿಸುವ ಯಾವ ಅವಶ್ಯಕತೆಯೂ ಇರಲಿಲ್ಲ. ಅದಕ್ಕಾಗಿ ಅನುಪಮ್ ಖೇರ್ 200 ರೂಪಾಯಿ ಕೊಟ್ಟು ಬಾಚಣಿಗೆ ಬೇಡವೆಂದು ಹೇಳುತ್ತಾರೆ. ಆ ಸಂದರ್ಭದಲ್ಲಿ ರಾಜು ಇಲ್ಲ ಇಲ್ಲ ನೀವು ಬಾಚಣಿಗೆ ಖರೀದಿಸಲೇಬೇಕು. ಇಂದು ನನ್ನ ಹುಟ್ಟುಹಬ್ಬ ಈ ದಿನ ನೀವು ಒಂದು ಬಾಚಣಿಕೆ ಖರೀದಿಸಿದರೆ, ನನ್ನ ಎಲ್ಲಾ ಬಾಚಣಿಕೆಯೂ ಸೇಲ್ ಆಗುತ್ತವೆ ಎಂದು ಹೇಳುತ್ತಾನೆ. ಹೀಗೆ ರಾಜುವಿನ ನಿಷ್ಕಲ್ಮಶ ಮನಸ್ಸಿಗೆ ಮನಸೋತ ಅನುಪಮ್ ಖೇರ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪೊಲೀಸರಿಗೆ ಇಲ್ಲವಾಯ್ತಾ ರಕ್ಷಣೆ; ಠಾಣೆಗೆ ನುಗ್ಗಿ ಆರಕ್ಷಕರ ಮೇಲೆ ಅಮಾನುಷವಾಗಿ ಹಲ್ಲೆ
ಫೆಬ್ರವರಿ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನೀವು ಬಾಚಣಿಗೆಯನ್ನು ಖರೀದಿಸುವ ಮೂಲಕ ಮಾತ್ರವಲ್ಲದೆ ಅವರಿಗೆ ಹಾರೈಸುವ ಮೂಲಕ ಔದಾರ್ಯದ ಕಾರ್ಯವನ್ನು ಮಾಡಿದ್ದೀರಿ. ಈ ಇಳಿ ವಯಸ್ಸಿನಲ್ಲೂ ಅವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುತ್ತಿದ್ದಾರೆʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸರ್ ನೀವು ರಾಜುವಿನ ಹುಟ್ಟು ಹಬ್ಬವನ್ನು ತುಂಬಾ ಪ್ರಕಾಶಮಾನವಾಗಿಸಿದ್ದೀರಿʼ ಎಂದು ಕಮೆಂಟ್ ಮಾಡಿದ್ದಾರೆ. ಹಾಗೂ ಹಲವರು ಈ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:04 am, Fri, 16 February 24