Viral Video: ನೀವು ವೈನ್ ಪ್ರಿಯರೇ, ನೂರು ವರ್ಷ ಹಳೆಯ ವೈನ್ ಎಂದಾದರೂ ಕಂಡಿದ್ದೀರಾ? ಇಲ್ಲಿದೆ ನೋಡಿ

ವೈನ್ ಎನ್ನುವುದು ಪುರುಷರು ಮಾತ್ರವಲ್ಲ ಮಹಿಳೆಯರಿಗೂ ಪ್ರಿಯವಾದ ಮದ್ಯ. ಈ ವೈನ್ ಹಳೆದಾದಷ್ಟು ದುಬಾರಿ ಹಾಗೂ ಬೇಡಿಕೆ ಹೆಚ್ಚು ಎನ್ನುವುದು ಎಲ್ಲರಿಗೂ ಕೂಡ ತಿಳಿದಿರುವ ವಿಚಾರ. ಇದೀಗ ನೂರು ವರ್ಷಗಳಷ್ಟು ಹಳೆಯ ವೈನ್ ಅನ್ನು ಓಪನ್ ಮಾಡುವ ದೃಶ್ಯ ವೈರಲ್‌ ಆಗುತ್ತಿದ್ದು, ಈ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆಯುತ್ತಿದೆ.

Viral Video: ನೀವು ವೈನ್ ಪ್ರಿಯರೇ, ನೂರು ವರ್ಷ ಹಳೆಯ ವೈನ್ ಎಂದಾದರೂ ಕಂಡಿದ್ದೀರಾ? ಇಲ್ಲಿದೆ ನೋಡಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 06, 2024 | 4:23 PM

ಮದ್ಯ ಪ್ರಿಯರಿಗಾಗಿ ಮಾರುಕಟ್ಟೆಯಲ್ಲಿ ಕೆಲವು ಬ್ರಾಂಡ್ ಗಳೊಂದಿಗೆ ಹಲವಾರು ರೀತಿಯ ಆಲ್ಕೋಹಾಲ್ ಯುಕ್ತ ಪಾನೀಯಗಳು ಲಭ್ಯವಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಬ್ರಾಂಡಿ, ವಿಸ್ಕಿ, ಸ್ಕಾಚ್, ವೋಡ್ಕಾ, ರಮ್, ಬಿಯರ್, ವೈನ್ ಗಳಲ್ಲಿ ಕೆಲವರು ಒಂದದಾದರೂ ಟೇಸ್ಟ್ ನೋಡಿರುತ್ತಾರೆ. ಆದರೆ ಬಹುತೇಕರು ಈ ವೈನ್ ಅನ್ನು ಇಷ್ಟ ಪಡುವುದೇ ಹೆಚ್ಚು. ಪುರುಷರಷ್ಟೇ ಅಲ್ಲದೇ ಮಹಿಳೆಯರು ಕೂಡ ಇಷ್ಟ ಪಟ್ಟು ಸೇವಿಸುವ ಈ ವೈನ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಹೀಗಾಗಿ ವೈನ್ ಪ್ರಿಯರಂತೂ ವರ್ಷಗಳಷ್ಟು ಹಳೆಯ ವೈನ್ ಸಿಕ್ಕರಂತೂ ಬಿಡುವುದೇ ಇಲ್ಲ, ಒಂದು ತೊಟ್ಟು ಸಿಕ್ಕರೆ ಸಾಕು ಎನ್ನುತ್ತಾರೆ. ಆದರೆ ಇದೀಗ ಶತಕದ ವೈನ್‌ ವೀಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದ್ದು ವೈನ್ ಪ್ರಿಯರ ಗಮನ ಸೆಳೆಯುತ್ತಿವೆ.

ಈ ವೈನ್‌ ಅನ್ನು ಮಡಿಕೆಯಲ್ಲಿ ಈ ವೈನ್ ಅನ್ನು ತಯಾರಿಸಲಾಗಿದ್ದು, ಹಳೆಯ ವಿಧಾನದಲ್ಲಿಯೇ ತಯಾರಿಸಲಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹೀಗಾಗಿ ಗಾಳಿಯಾಡದಂತೆ ಎಲೆಗಳಿಂದ ಆ ಮಡಿಕೆಯ ಬಾಯಿ ಮುಚ್ಚಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮೊದಲು ಬ್ಯಾರೆಲ್ ಕವರ್ ಅನ್ನು ಹರಿತವಾದ ಚಾಕುವಿನಂತಹ ಉಪಕರಣದಿಂದ ತೆಗೆಯುತ್ತಿದ್ದಾರೆ. ಎಲೆಗಳಿಂದ ಮುಚ್ಚಲಾದ ಈ ಮಡಿಕೆಯ ಬಾಯಿಯನ್ನು ತೆರೆಯಲಾಗಿದ್ದು, ಕೋಕ್ಲಿಯರ್ ಸಹಾಯದಿಂದ ವೈನ್ ಅನ್ನು ತೆಗೆದು ತೋರಿಸಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ:

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

‘indianfoodierocks’ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈಗಾಗಲೇ ಈ ವಿಡಿಯೋ 10.6 ಮಿಲಿಯನ್ ಕ್ಕೂ ಅಧಿಕ ವ್ಯೂಸ್ ಕಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆ ಗೈದಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡಿದ್ದು, ಬಳಕೆದಾರರೊಬ್ಬರು, “ಇದು 100 ವರ್ಷ ಹಳೆಯದು ಎಂದು ಅವನಿಗೆ ಹೇಗೆ ಗೊತ್ತು?” ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು.”ಒಳಗೆ ಶೂನ್ಯ ಗಾಳಿಯಿಂದ ಮುಚ್ಚಲಾಗಿದೆ ಎಂದರೆ 100 ವರ್ಷಗಳ ನಂತರವೂ ನೀವು ವೈನ್ ಕುಡಿಯಬಹುದು” ಎಂದಿದ್ದಾರೆ. ಇನ್ನೊಬ್ಬರು, “ಒಂದು ಗುಟುಕು ಸ್ವರ್ಗದ ರುಚಿ, ಇನ್ನೊಂದು ಗುಟುಕು ನಿಮ್ಮನ್ನು ಸ್ವರ್ಗಕ್ಕೆ ಕರೆದೊಯ್ಯುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:19 pm, Tue, 6 February 24

Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ