ನ್ಯೂ ಯಾರ್ಕ್ ಯೂನಿವೆರ್ಸಿಟಿಯಲ್ಲಿ ಭಾರತೀಯ ಸೇನಾಧಿಕಾರಿ ಮಗನಿಂದ ತ್ರಿವರ್ಣ ಧ್ವಜಕ್ಕೆ ಗೌರವ; ಟ್ವಿಟ್ಟರ್​ನಲ್ಲಿ ಸಂಭ್ರಮಿಸಿದ ನೆಟ್ಟಿಗರು!

|

Updated on: May 27, 2023 | 3:15 PM

ಪದವಿ ಪ್ರದಾನ ಸಮಾರಂಭದಲ್ಲಿ ಸೋಹಿ ಅವರ ಮಗ ತನ್ನ ಸ್ಟೋಲ್ ಮೇಲೆ ಹೆಮ್ಮೆಯಿಂದ ಭಾರತದ ರಾಷ್ಟ್ರಧ್ವಜವನ್ನು ಧರಿಸಿ ನೆರೆದಿದ್ದವರ ಗಮನ ಮತ್ತು ಮೆಚ್ಚುಗೆಗೆ ಪಾತ್ರರಾದರು.

ನ್ಯೂ ಯಾರ್ಕ್ ಯೂನಿವೆರ್ಸಿಟಿಯಲ್ಲಿ ಭಾರತೀಯ ಸೇನಾಧಿಕಾರಿ ಮಗನಿಂದ ತ್ರಿವರ್ಣ ಧ್ವಜಕ್ಕೆ ಗೌರವ; ಟ್ವಿಟ್ಟರ್​ನಲ್ಲಿ ಸಂಭ್ರಮಿಸಿದ ನೆಟ್ಟಿಗರು!
ಬ್ರಿಗೇಡಿಯರ್ ಹರ್ದೀಪ್ ಸಿಂಗ್ ಸೋಹಿ ಅವರ ಮಗ
Follow us on

ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ (NYU) ನಡೆದ ಪದವಿ ಪ್ರದಾನ (Graduation Ceremony) ಸಮಾರಂಭವು ಸೇನಾಧಿಕಾರಿ (ಬ್ರಿಗೇಡಿಯರ್) ಹರ್ದೀಪ್ ಸಿಂಗ್ ಸೋಹಿಗೆ (Brigadier Hardeep Singh Sohi) ಅಪಾರ ಹೆಮ್ಮೆಯ ಕ್ಷಣವಾಯಿತು, ಏಕೆಂದರೆ ಅವರ ಮಗ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಲ್ಲದೆ ದೇಶಭಕ್ತಿಯ ಸ್ಪೂರ್ತಿದಾಯಕ ಕಾರ್ಯವನ್ನು ಪ್ರದರ್ಶಿಸಿದರು. ಪದವಿ ಪ್ರದಾನ ಸಮಾರಂಭದಲ್ಲಿ ಸೋಹಿ ಅವರ ಮಗ ತನ್ನ ಸ್ಟೋಲ್ ಮೇಲೆ ಹೆಮ್ಮೆಯಿಂದ ಭಾರತದ ರಾಷ್ಟ್ರಧ್ವಜವನ್ನು ಧರಿಸಿ ನೆರೆದಿದ್ದವರ ಗಮನ ಮತ್ತು ಮೆಚ್ಚುಗೆಗೆ ಪಾತ್ರರಾದರು.

ಬ್ರಿಗೇಡಿಯರ್ ಸೋಹಿ ಅವರು ಟ್ವಿಟರ್‌ನಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡು, ತಮ್ಮ ಮಗನ ಸರಣಿ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮಗಾಢ ಸಂತೋಷ ಹಾಗು ಹೆಮ್ಮೆಯನ್ನು ಪ್ರದರ್ಶಿಸಿದರು. “ನನ್ನ ಮಗ ತನ್ನ ಪದವಿ ಪ್ರದಾನ ಸಮಾರಂಭದಲ್ಲಿ ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಗೌರವಿಸಿದ್ದಾನೆ” ಎಂದು ಬ್ರಿಗೇಡಿಯರ್ ಸೋಹಿ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದರು. ಬಳಕೆದಾರರು ಕಾಮೆಂಟ್‌ಗಳ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿ ಸಂಭ್ರಮಿಸಿದರು. ಯುವಕನ ದೇಶಪ್ರೇಮದ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿ, ಆತನಲ್ಲಿ ಇಂತಹ ಮೌಲ್ಯಗಳನ್ನು ತುಂಬಿದ ತಂದೆ ತಾಯಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ನಡೆ ಹೆಮ್ಮೆಯ ಸಂಕೇತವಾಗಿದೆ ಮತ್ತು ಮುಂದಿನ ಪೀಳಿಗೆಗೆ ರಾಷ್ಟ್ರದ ಮೇಲಿನ ಪ್ರೀತಿ, ಗೌರವದ ಮನೋಭಾವವನ್ನು ಮುಂದಕ್ಕೆ ಕೊಂಡೊಯ್ಯುವ ಸಾಕ್ಷಿಯಾಗಿದೆ ಎಂದು ಪ್ರಶಂಸಿಸಲಾಯಿತು.

ಇದನ್ನೂ ಓದಿ: ವಯಸ್ಸಾದ ತಾಯಿಯನ್ನು ಅವರ ತವರಿಗೆ ಕರೆದುಕೊಂಡು ಹೋದ ಮಗ; ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ!

ಭೌಗೋಳಿಕ ಗಡಿಗಳನ್ನು ಲೆಕ್ಕಿಸದೆ ತನ್ನ ತಾಯ್ನಾಡಿನ ನಡುವಿನ ನಿರಂತರ ಬಾಂಧವ್ಯದ ಜ್ಞಾಪನೆಯಾಗಿ ಸೇನಾಧಿಕಾರಿಯ ಮಗನ ದೇಶಭಕ್ತಿಯ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಯಿತು. ಈ ಪೋಸ್ಟ್ ವ್ಯಾಪಕ ಗಮನ ಮತ್ತು ಮೆಚ್ಚುಗೆಯನ್ನು ಗಳಿಸಿತು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದೇಶಭಕ್ತಿ ಮತ್ತು ದೇಶಕ್ಕಾಗಿ ಪ್ರೀತಿಯ ಸಂದೇಶವನ್ನು ಹರಡಿತು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ