AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೋಟ್ ಏರಿ ಬಂದ ಮೀನು ಮಾಡಿದ್ದೇನು ನೋಡಿ? ಇಲ್ಲಿದೆ ವೀಡಿಯೊ

ಸೀಲ್ ಮೀನು ದುರಾಸೆಯಿಂದ ಮಾಡಿದ್ದೇನು ಗೊತ್ತಾ? ಈ ವೀಡಿಯೊವನ್ನು ನೀವೇ ನೋಡಿದ್ರೆ ದಂಗಾಗಿ ಬಿಡ್ತಿರಾ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಸೀಲ್ ಮೀನು ದುರಾಸೆಯಿಂದ ಚಲಿಸುವ ದೋಣಿಯ ಮೇಲೆ ಜಿಗಿದು ಏನು ಮಾಡುತ್ತದೆ? ನೀವೇ ನೋಡಿ.

Viral Video: ಬೋಟ್ ಏರಿ ಬಂದ ಮೀನು ಮಾಡಿದ್ದೇನು ನೋಡಿ? ಇಲ್ಲಿದೆ ವೀಡಿಯೊ
ವೈರಲ್​ ವೀಡಿಯೊ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: May 27, 2023 | 3:52 PM

Share

ಪ್ರಾಣಿಗಳು ತಮಾಷೆ ಮಾಡಿಕೊಂಡು ಅವುಗಳ ಪ್ರತಿಭೆ ಪ್ರದರ್ಶಿಸುವ ಹಲವಾರು ವೀಡಿಯೋಗಳನ್ನು ನೀವು ನೋಡಿರಬಹುದು. ಆ ರೀತಿಯ ವೀಡಿಯೋಗಳು ಆಗಾಗ ನಮ್ಮ ಗಮನ ಸೆಳೆಯುತ್ತಲೇ ಇರುತ್ತವೆ. ಎಷ್ಟೇ ದುಃಖದಲ್ಲಿದ್ದರೂ ನಮ್ಮನ್ನು ನಗುವಂತೆ ಮಾಡುತ್ತದೆ. ಇದೀಗ ಅಂತಹ ಒಂದು ವಿಡಿಯೋ ವೈರಲ್ ಆಗಿದ್ದು, ಸಿಲ್ ಮೀನೊಂದು ದುರಾಸೆಯಿಂದ ಹೇಗೆ ತನ್ನ ಆಹಾರ ಪಡೆದುಕೊಳ್ಳುತ್ತಿದೆ ಎಂಬುದನ್ನು ಸಣ್ಣ ವೀಡಿಯೋದಲ್ಲಿ ತೋರಿಸಲಾಗಿದ್ದು, ಆ ಮೀನಿನ ಚಾಣಕ್ಯತೆ ನೋಡಿ ಎಲ್ಲರೂ ಬೆರಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ ಸೀಲ್ ಮೀನಿನ ಬಗ್ಗೆ ಅನೇಕರು ಕಮೆಂಟ್​​ ಮಾಡಿದ್ದಾರೆ.

ರೆಡ್ಡಿಟ್ ಬಳಕೆದಾರ ಬಾಬ್ಬರ್ಲಿ (@BobBobberly) ಹಂಚಿಕೊಂಡಿರುವ ವೀಡಿಯೋದಲ್ಲಿ, ನಿಮಗೆ ಮೊದಲು ಬೋಟ್ ಸಾಗುತ್ತಿರುವ ದೃಶ್ಯ ಕಂಡುಬರುತ್ತದೆ. ಅದರ ಮೇಲೆ ನಿಂತಿರುವ ವ್ಯಕ್ತಿಯೊಬ್ಬನ ತಲೆಯ ಮೇಲೆ ಕೆಲವು ಪಕ್ಷಿಗಳು ಹಾರುತ್ತಿವೆ, ಅವನು ಆ ಪ್ರತಿ ಹಕ್ಕಿಗಳಿಗೆ ಮೀನನ್ನು ನೀಡುತ್ತಿರುವುದನ್ನು ನೀವು ಕಾಣಬಹುದು. ಅವನು ಹಾಗೆ ಮಾಡುತ್ತಿರುವಾಗ, ನೀರಿನಿಂದ ಇದ್ದಕ್ಕಿದ್ದಂತೆ ಒಂದು ಸಿಲ್ ಮೀನು ಕಾಣಿಸಿಕೊಳ್ಳುತ್ತದೆ ಬಳಿಕ ಬೋಟ್ ಮೇಲೆ ಜಿಗಿದು ನಂತರ ದೋಣಿಯ ಒಳಗಿನಿಂದ ಎಲ್ಲಾ ಮೀನುಗಳನ್ನು ತಿನ್ನಲು ಪ್ರಯತ್ನಿಸುತ್ತದೆ. ಬಳಿಕ ಸಾಕಷ್ಟು ಮೀನುಗಳು ಹೊಟ್ಟೆ ಸೇರಿದ ಮೇಲೆ ಬಳಿಕ ಜಿಗಿದು ಮಾಯವಾಗುತ್ತದೆ.

This Man was feeding birds before this happened… by u/BobBobberly in AnimalsBeingGeniuses

ಇದನ್ನೂ ಓದಿ:Viral Video: ಬೆಂಗಳೂರಿನ ಟ್ರಾಫಿಕ್​​ನಲ್ಲಿ ಆಟೋ ಚಾಲಕನ ಮಡಿಲಲ್ಲಿ ಪುಟ್ಟ ಕಂದಮ್ಮನಂತೆ ಕುಳಿತು ಪ್ರಯಾಣಿಸಿದ ಶ್ವಾನ

ಈ ವೀಡಿಯೊವನ್ನು ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ, ಇದನ್ನು 8,400 ಕ್ಕೂ ಹೆಚ್ಚು ಲೈಕ್ ಮಾಡಲಾಗಿದೆ. ಅನೇಕರು ಈ ಬಗ್ಗೆ ಕಾಮೆಂಟ್​​​ಗಳನ್ನು ಸಹ ಹಂಚಿಕೊಂಡಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ ಆ ಊಟದ ಮೇಲಿನ ಒಪ್ಪಂದವನ್ನು ಸಿಲ್ ತೆಗೆದುಕೊಂಡಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು “ನಿಸ್ಸಂದೇಹವಾಗಿ ಈ ಸಿಲ್ ಮೀನು ಇಂತಹ ಕೆಲಸವನ್ನೂ ಹಿಂದೆಯೂ ಮಾಡಿದೆ” ಎಂದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ “ಈ ಹಡಗಿನಲ್ಲಿ ಬಹುಶಃ ಮೀನಿನ ಸಂಗ್ರಹವಿದೆ ಎಂದು ಅವನಿಗೆ ಚೆನ್ನಾಗಿ ತಿಳಿದಿತ್ತು.” ಎಂದು ಬರೆದುಕೊಂಡಿದ್ದಾರೆ. ಇನ್ನೋರ್ವ ವ್ಯಕ್ತಿ “ಆ ಪ್ರಾಣಿ ಅಷ್ಟು ಸುಲಭವಾಗಿ ದೋಣಿಗೆ ಏರಲು, ಎಷ್ಟು ವೇಗವಾಗಿ ಬಂದಿದೆ ಎಂಬುದರ ಬಗ್ಗೆ ನಾನು ನಿಜವಾಗಿಯೂ ಮನಸೋತಿದ್ದೇನೆ ” ಎಂದು ತಮ್ಮ ಅನಿಸಿಕೆಯನ್ನು ಪೋಸ್ಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ