ಲಂಡನ್‌ನ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ಆಟೋ ಚಾಲಕಿ
ಉತ್ತರ ಪ್ರದೇಶದ ಹಳ್ಳಿಯೊಂದರ 18 ವರ್ಷದ ರಿಕ್ಷಾ ಚಾಲಕಿ ಆರತಿ ಬ್ರಿಟನ್ನ ಪ್ರತಿಷ್ಠಿತ ರಾಯಲ್ ಅವಾರ್ಡ್‌ಗೆ ಭಾಜನರಾಗಿದ್ದಾರೆ. ಸರ್ಕಾರದ ಪಿಂಕ್ ಇ-ರಿಕ್ಷಾ ಚಾಲನೆ ಮಾಡುವ ಮೂಲಕ ಇತರ ಯುವತಿಯರಿಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಆರತಿ ಅವರನ್ನು ಗೌರವಿಸಲಾಗಿದೆ.
ಲಂಡನ್: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಹಳ್ಳಿಯೊಂದರ 18 ವರ್ಷದ ರಿಕ್ಷಾ ಚಾಲಕಿ ಆರತಿ ಬ್ರಿಟನ್ನ ಪ್ರತಿಷ್ಠಿತ ಮಹಿಳಾ ಸಬಲೀಕರಣ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರಿನ್ಸ್ ಟ್ರಸ್ಟ್ ಅವಾರ್ಡ್ಸ್‌ನಲ್ಲಿ ವಿಶ್ವಪ್ರಸಿದ್ಧ ಮಾನವ ಹಕ್ಕುಗಳ ನ್ಯಾಯವಾದಿಯ ಹೆಸರಿನಲ್ಲಿ ಹೆಸರಿಸಲಾದ ಅಮಲ್ ಕ್ಲೂನಿ ಮಹಿಳಾ ಸಬಲೀಕರಣ ಪ್ರಶಸ್ತಿಯನ್ನು ಪಡೆದು ಆರತಿ ಬ್ರಿಟನ್ ರಾಜ ಕುಟುಂಬದ ಅರಮನೆ ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾಗಿದರು. ಸರ್ಕಾರದ ಪಿಂಕ್ ಇ-ರಿಕ್ಷಾ ಚಾಲನೆ ಮಾಡುವ ಮೂಲಕ ಇತರ ಯುವತಿಯರಿಗೆ ಮಾದರಿ ಮತ್ತು ಮಹಿಳಾ ಸಬಲೀಕರಣಕ್ಕೆ ಸ್ಪೂರ್ತಿಯಾದ ಆರತಿಗೆ ಬ್ರಿಟನ್ನ ಪ್ರತಿಷ್ಠಿತ ಪ್ರಶಸ್ತಿ ನೀಡಲಾಯಿತು.
“ಇದೇ ರೀತಿಯ ಸವಾಲುಗಳನ್ನು ಎದುರಿಸುವ ಇತರ ಹುಡುಗಿಯರನ್ನು ಪ್ರೇರೇಪಿಸಲು ನಾನು ಹೆಮ್ಮೆಪಡುತ್ತೇನೆ. ಸರ್ಕಾರ ಈ ಪಿಂಕ್ ರಿಕ್ಷಾ ಯೋಜನೆ ಜಗತ್ತನ್ನು ವಿಭಿನ್ನ ಬೆಳಕಿನಲ್ಲಿ ನೋಡಲು ನನಗೆ ಸಹಾಯ ಮಾಡಿದೆ. ಈಗ ನಾನು ನನ್ನ ಸ್ವಂತ ಕನಸುಗಳನ್ನು ಮಾತ್ರವಲ್ಲದೆ ನನ್ನ ಮಗಳ ಕನಸುಗಳನ್ನೂ ಈಡೇರಿಸಬಲ್ಲೆ” ಎಂದು ಸುದ್ದಿ ಏಜೆನ್ಸಿ ಪಿಟಿಐ ಆರತಿ ಹೇಳಿರುವುದಾಗಿ ಉಲ್ಲೇಖಿಸಿದೆ.
ಇದನ್ನೂ ಓದಿ: ಮದುವೆ ದಿನ ತೂಕ ಇಳಿಸಿಕೊಂಡು ಸುಂದರವಾಗಿ ಕಾಣಲು ‘ಗ್ಯಾಸ್ಟ್ರಿಕ್ ಬಲೂನ್’ ಸರ್ಜರಿ ಮಾಡಿಸಿದ ಯುವತಿ ಸಾವು; ಏನಿದು ಸರ್ಜರಿ?
ಪ್ರಿನ್ಸ್ ಆಫ್ ವೇಲ್ಸ್ ಎಂದು ಕಿಂಗ್ ಚಾರ್ಲ್ಸ್ ಸ್ಥಾಪಿಸಿದ ಪ್ರಿನ್ಸ್ ಟ್ರಸ್ಟ್ ಇಂಟರ್ನ್ಯಾಷನಲ್ ಅನ್ನು ಈಗ ಕಿಂಗ್ಸ್ ಟ್ರಸ್ಟ್ ಇಂಟರ್ನ್ಯಾಷನಲ್ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಉದ್ಯೋಗ, ಶಿಕ್ಷಣ ಮತ್ತು ಉದ್ಯಮ ಕಾರ್ಯಕ್ರಮಗಳ ಮೂಲಕ 20 ದೇಶಗಳಲ್ಲಿನ ಯುವಜನರಿಗೆ ಬೆಂಬಲ ನೀಡುತ್ತಿದೆ. ಪ್ರಿನ್ಸ್ ಟ್ರಸ್ಟ್ ಮಹಿಳಾ ಸಬಲೀಕರಣ ಪ್ರಶಸ್ತಿಯು ಸ್ವಾಭಿಮಾನಿ ಮಹಿಳೆಯರು ಮತ್ತು ಅವರ ಸಾಧನೆಗಳನ್ನು ಗುರುತಿಸಿ ಗೌರವಿಸುವ ಪ್ರಶಸ್ತಿಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ