AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಲಾ, ಊಬರ್​ಗೆ ಸೆಡ್ಡು ಹೊಡೆಯಲು ಪೇಟಿಎಂ ಎಂಟ್ರಿ; ಸಿಗಲಿದೆ ಆಟೊರಿಕ್ಷಾ ಬುಕಿಂಗ್ ಸೇವೆ

Paytm auto: ಪೇಟಿಎಂನಲ್ಲಿ ಒಎನ್​ಡಿಸಿ ಪ್ಲಾಟ್​ಫಾರ್ಮ್ ಬಳಸಿ ಫೂಡ್ ಆರ್ಡರ್, ಮೂವಿ ಟಿಕೆಟ್, ಫ್ಲೈಟ್ ಟಿಕೆಟ್, ಬಸ್ ಟಿಕೆಟ್, ಟ್ರೈನ್ ಟಿಕೆಟ್ ಬುಕಿಂಗ್ ಇತ್ಯಾದಿ ಸೇವೆ ಲಭ್ಯ ಇದೆ. ಈಗ ಆಟೊರಿಕ್ಷಾ ರೈಡ್ ಬುಕಿಂಗ್ ಸೇವೆಯೂ ಸೇರ್ಪಡೆಯಾಗಿದೆ. ಪೇಟಿಎಂ ಆ್ಯಪ್​ನಲ್ಲಿ ನೀವು ಆಟೊ ಬುಕ್ ಮಾಡಬಹುದು. ನಮ್ಮ ಯಾತ್ರಿ ಜೊತೆ ಪೇಟಿಎಂ ಟೈಅಪ್ ಮಾಡಿಕೊಂಡಿದೆ. ಪೇಟಿಎಂನಲ್ಲಿ ನೀವು ಆಟೊ ರೇಡ್ ಬುಕ್ ಮಾಡಿದರೆ ನಮ್ಮ ಯಾತ್ರಿ ಆ್ಯಪ್​ನಲ್ಲಿರುವ ಡ್ರೈವರ್​ಗಳು ಸೇವೆ ನೀಡುತ್ತಾರೆ. ಸದ್ಯ ಇದು ಇನ್ನೂ ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ಎಲ್ಲಾ ಪೇಟಿಎಂ ಬಳಕೆದಾರರಿಗೆ ಲಭ್ಯ ಇರಲಿದೆ.

ಊಲಾ, ಊಬರ್​ಗೆ ಸೆಡ್ಡು ಹೊಡೆಯಲು ಪೇಟಿಎಂ ಎಂಟ್ರಿ; ಸಿಗಲಿದೆ ಆಟೊರಿಕ್ಷಾ ಬುಕಿಂಗ್ ಸೇವೆ
ಪೇಟಿಎಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 09, 2024 | 3:46 PM

Share

ನವದೆಹಲಿ, ಮೇ 9: ಯುಪಿಐ ಪೇಮೆಂಟ್​ನಿಂದ ಆರಂಭವಾಗಿ ಈಗ ವಿವಿಧ ಸೇವೆಗಳನ್ನು ಒದಗಿಸುವ ಪ್ಲಾಟ್​ಫಾರ್ಮ್ ಆಗಿ ವಿಸ್ತಾರಗೊಂಡಿರುವ ಪೇಟಿಎಂ ಈಗ ಓಲಾ, ಊಬರ್, ನಮ್ಮ ಯಾತ್ರಿ ರೀತಿಯಲ್ಲಿ ರಿಕ್ಷಾ ಸೇವೆ (rickshaw service) ಕೊಡಲಿದೆ. ಮನಿ ಕಂಟ್ರೋಲ್​ನಲ್ಲಿ ಬಂದಿರುವ ವರದಿ ಪ್ರಕಾರ ನಮ್ಮ ಯಾತ್ರಿ ರೀತಿಯಲ್ಲಿ ಒಎನ್​ಡಿಸಿ ಪ್ಲಾಟ್​ಫಾರ್ಮ್ ಬಳಸಿ ಆಟೊರಿಕ್ಷಾ ರೇಡ್ ಬುಕಿಂಗ್ ಸರ್ವಿಸ್ ಆರಂಭಿಸಲಿದೆ. ಸದ್ಯಕ್ಕೆ ಆರಂಭದಲ್ಲಿ ಬೆಂಗಳೂರು, ಚೆನ್ನೈ ಮತ್ತು ದೆಹಲಿ ಮೊದಲಾದ ನಗರಗಳಲ್ಲಿ ಪೇಟಿಎಂ ಈ ಸೇವೆ ಶುರು ಮಾಡಲಿದೆ. ಪೇಟಿಎಂ ಈಗಾಗಲೇ ಒಎನ್​ಡಿಸಿ ನೆಟ್ವರ್ಕ್ ಅನ್ನು ಬಳಸಿಕೊಂಡು ಸಿನಿಮಾ ಟಿಕೆಟ್, ಊಟದ ಆರ್ಡರ್ ಸೆವೆ ಒದಗಿಸುತ್ತಿದೆ. ಹಾಗೆಯೇ, ದಿನಸಿ ಸರಬರಾಜು ಇತ್ಯಾದಿ ಇಕಾಮರ್ಸ್ ಕೂಡ ಒಎನ್​ಡಿಸಿ ಮೂಲಕ ನೀಡುತ್ತಿದೆ. ಈಗ ಆಟೊ ಸೇವೆ ಹೊಸ ಸೇರ್ಪಡೆಯಾಗಿದೆ.

ಕೆಲ ಪೇಟಿಎಂ ಬಳಕೆದಾರರಿಗೆ ಈಗಾಗಲೇ ಈ ಫೀಚರ್ ಕಾಣಿಸುತ್ತಿರಬಹುದು. ಆದರೆ ಇದಿನ್ನೂ ಪ್ರಾಯೋಗಿಕ ಹಂತದಲ್ಲಿದ್ದು, ಶೀಘ್ರದಲ್ಲೇ ಎಲ್ಲಾ ಪೇಟಿಎಂ ಬಳಕೆದಾರರಿಗೂ ಲಭ್ಯ ಇರಲಿದೆ. ಇಲ್ಲಿ ನಮ್ಮ ಯಾತ್ರಿ ಜೊತೆ ಪೇಟಿಎಂ ಸಹಭಾಗಿತ್ವ ಹೊಂದಿದೆ.

ಇದನ್ನೂ ಓದಿ: ಬಿಜೆಪಿಗೆ ಹೆಚ್ಚು ಸ್ಥಾನ ಬರೊಲ್ಲವೆಂದು ನಲುಗುತ್ತಿದೆಯಾ ಷೇರುಪೇಟೆ? ಸತತ ಕುಸಿತಕ್ಕೆ ಇಲ್ಲಿವೆ ಐದು ಕಾರಣಗಳು

ಒಎನ್​ಡಿಸಿ ಎಂಬುದು ಸರ್ಕಾರೀ ಸಂಸ್ಥೆ ರೂಪಿಸಿರುವ ಮುಕ್ತ ನೆಟ್ವರ್ಕ್ ವ್ಯವಸ್ಥೆ. ತಮ್ಮದೇ ಪ್ರತ್ಯೇಕ ಇಕಾಮರ್ಸ್ ಸೈಟ್ ಹೊಂದಲು ಸಾಧ್ಯವಾಗದವರು ಒಎನ್​ಡಿಸಿಯನ್ನು ಬಳಸಬಹುದು. ಊಬರ್, ಓಲಾ, ಸ್ವಿಗ್ಗಿ, ಜೊಮಾಟೊ ಮೊದಲಾದ ಸಂಸ್ಥೆಗಳು ತಮ್ಮವೇ ಪ್ರತ್ಯೇಕ ಪ್ಲಾಟ್​ಫಾರ್ಮ್ ರೂಪಿಸಿವೆ. ಆದರೆ ಒಎನ್​ಡಿಸಿ ಬೇರೆ ಸಂಸ್ಥೆಗಳಿಗೂ ಒಂದು ವೇದಿಕೆ ಸೃಷ್ಟಿ ಮಾಡಿಕೊಡುತ್ತದೆ.

ಒಎನ್​ಡಿಸಿ ಪ್ಲಾಟ್​ಫಾರ್ಮ್​ನಲ್ಲಿ ಮಾರಾಟ ಮಾಡುವವರ ವಿಭಾಗ ಇರುತ್ತದೆ. ಖರೀದಿದಾರರ ವಿಭಾಗ ಇರುತ್ತದೆ. ನಮ್ಮ ಯಾತ್ರಿ ಎಂಬುದು ಮಾರಾಟ ಮಾಡುವ ಆ್ಯಪ್ ಎನ್ನಬಹುದು. ಪೇಟಿಎಂ ಇಲ್ಲಿ ಖರೀದಿದಾರರಿಗೆ ಪ್ಲಾಟ್​ಫಾರ್ಮ್ ಆಗಿರುತ್ತದೆ. ಅಂದರೆ ಗ್ರಾಹಕರಿಗೆ ಪ್ಲಾಟ್​ಫಾರ್ಮ್ ಆಗಿರುತ್ತದೆ.

ಬೆಂಗಳೂರಿನಲ್ಲಿ ಆರಂಭವಾದ ನಮ್ಮ ಯಾತ್ರಿ ಆ್ಯಪ್ ಅದ್ವಿತೀಯವಾಗಿ ಬೆಳೆಯುತ್ತಿದ್ದು ಏಳು ನಗರಗಳಲ್ಲಿ ರೇಡಿಂಗ್ ಲಭ್ಯ ಇದೆ. ಕಳೆದ ಎರಡು ವರ್ಷದಲ್ಲಿ 4 ಕೋಟಿ ಸಮೀಪದಷ್ಟು ರೇಡ್​ಗಳನ್ನು ನಮ್ಮ ಯಾತ್ರಿ ಪೂರ್ಣಗೊಳಿಸಿದೆ. ಆಟೊರಿಕ್ಷಾ ಮಾತ್ರವಲ್ಲದೇ ಕ್ಯಾಬ್ ಬುಕಿಂಗ್ ಸೇವೆ ಕೂಡ ಆರಂಭವಾಗಿದೆ. ಒಎನ್​ಡಿಸಿ ಬೆಳೆಯುತ್ತಿದ್ದರೂ ಸ್ವಿಗ್ಗಿ, ಒಲಾ, ಊಬರ್ ಇತ್ಯಾದಿ ಸ್ವತಂತ್ರ ವ್ಯವಸ್ಥೆಯ ಸಂಸ್ಥೆಗಳ ಅಸ್ತಿತ್ವಕ್ಕೆ ಸಂಚಕಾರ ಬಂದಿಲ್ಲ ಎನ್ನುವುದ ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ: ಇಂದು ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 85 ವಿಮಾನ ಹಾರಾಟ ರದ್ದು; ನಿಮ್ಮ ಫ್ಲೈಟ್ ರದ್ದಾಗಿದ್ದರೆ ಸಿಗುತ್ತೆ ರೀಫಂಡ್

ಕ್ಯಾಬ್ ಅಗ್ರಿಗೇಟರ್ಸ್ ಆಗಿರುವ ಓಲಾ ಮತ್ತು ಊಬರ್ ಸಂಸ್ಥೆಗಳು ಚಾಲಕರಿಂದ ಪ್ರತೀ ರೇಡ್​ಗೆ ಕಮಿಷನ್ ಪಡೆಯುತ್ತವೆ. ಅತಿಯಾದ ಕಮಿಷನ್ ಕೊಡಬೇಕಾಗುತ್ತದೆ ಎಂದು ಓಲಾ, ಊಬರ್ ಡ್ರೈವರ್​ಗಳು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಈ ಕಾರಣಕ್ಕೆ ನಮ್ಮ ಯಾತ್ರಿ ಪರ್ಯಾಯ ವ್ಯವಸ್ಥೆಯಾಗಿ ರೂಪುಗೊಂಡು ಈಗ ಹಿಟ್ ಆಗಿದೆ. ನಮ್ಮ ಯಾತ್ರಿ ಆ್ಯಪ್ ಆಟೊಚಾಲಕರಿಂದ ರೇಡ್​ಗೆ ಕಮಿಷನ್ ಪಡೆಯುವುದಿಲ್ಲ. ಆದರೆ, ಆ್ಯಪ್​ಗೆ ನಿರ್ದಿಷ್ಟ ಅವಧಿಗೆ ಶುಲ್ಕ ನೀಡಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ