ಇಂದು ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 85 ವಿಮಾನ ಹಾರಾಟ ರದ್ದು; ನಿಮ್ಮ ಫ್ಲೈಟ್ ರದ್ದಾಗಿದ್ದರೆ ಸಿಗುತ್ತೆ ರೀಫಂಡ್

85 flights of Air India Express canceled: ಉದ್ಯೋಗಿಗಳ ಮುಷ್ಕರದ ಪರಿಣಾಮ ಸತತ ಎರಡನೇ ದಿನ ಏರ್ ಇಂಡಿಯಾ ಎಕ್ಸ್​ಪ್ರೆಸ್​ನ ವಿಮಾನ ಸೇವೆಯಲ್ಲಿ ವ್ಯತ್ಯಯವಾಗಿದೆ. ನಿನ್ನೆ ಮೇ 8ರಂದು ನೂರು ಫ್ಲೈಟ್​ಗಳು ರದ್ದಾಗಿದ್ದವು. ಇಂದು ಮೇ 9ರಂದು 85 ಫ್ಲೈಟ್​​ಗಳನ್ನು ನಿಲ್ಲಿಸಲಾಗಿದೆ. ಈ ಪರಿಸ್ಥಿತಿ ಇನ್ನಷ್ಟು ದಿನ ಮುಂದುವರಿಯುವ ನಿರೀಕ್ಷೆ ಇದೆ. 20 ಮಾರ್ಗಗಳಲ್ಲಿ ಏರ್ ಇಂಡಿಯಾದ ನೆರವು ಪಡೆಯಲಾಗುತ್ತಿದೆ ಎಂದು ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆ ತಿಳಿಸಿದೆ. ಪ್ರಯಾಣಿಕರು ಬುಕ್ ಮಾಡಿದ ಫ್ಲೈಟ್ ರದ್ದಾಗಿದ್ದರೆ ಟಿಕೆಟ್ ಹಣವನ್ನು ಯಾವುದೇ ಶುಲ್ಕವಿಲ್ಲದೇ ಪೂರ್ಣವಾಗಿ ರೀಫಂಡ್ ಮಾಡಲಾಗುತ್ತದೆ.

ಇಂದು ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 85 ವಿಮಾನ ಹಾರಾಟ ರದ್ದು; ನಿಮ್ಮ ಫ್ಲೈಟ್ ರದ್ದಾಗಿದ್ದರೆ ಸಿಗುತ್ತೆ ರೀಫಂಡ್
ಏರ್ ಇಂಡಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 09, 2024 | 2:47 PM

ನವದೆಹಲಿ, ಮೇ 9: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ (Air India Express) ಮ್ಯಾನೇಜ್ಮೆಂಟ್ ವರ್ಸಸ್ ಸಿಬ್ಬಂದಿ ಸಂಘರ್ಷದಲ್ಲಿ ಎರಡನೇ ದಿನವೂ ಹಲವು ಫ್ಲೈಟ್​ಗಳು ರದ್ದಾಗಿವೆ. ಏರ್ಲೈನ್ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ ಮೇ 9, ಇಂದು 85 ಫ್ಲೈಟ್​ಗಳು ರದ್ದಾಗಿವೆ. ನಿನ್ನೆ ಬುಧವಾರದಂದು ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 300 ಮಂದಿ ಉದ್ಯೋಗಿಗಳು ಹೇಳದೇ ಕೇಳದೇ ರಜೆ ಹಾಕಿ ಫೋನ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಅದರ ಪರಿಣಾಮವಾಗಿ ನಿನ್ನೆ ನೂರು ಫ್ಲೈಟ್ ರದ್ದಾಗಿದ್ದವು. ಇಂದೂ ಕೂಡ ಪರಿಸ್ಥಿತಿ ಮುಂದುವರಿದಿದೆ.

ರೀಫಂಡ್ ಸಿಗುತ್ತೆ ಭಯ ಪಡದಿರಿ ಎಂದ ಏರ್ಲೈನ್

ಒಂದು ವೇಳೆ ಫ್ಲೈಟ್ ರದ್ದಾಗಿದ್ದರೆ, ಅಥವಾ ಮೂರು ಗಂಟೆ ವಿಳಂಬವಾದರೆ ನಿಮ್ಮ ಟಿಕೆಟ್ ಹಣವನ್ನು ಸಂಪೂರ್ಣವಾಗಿ ರೀಫಂಡ್ ಮಾಡಬಹುದು. ಅಥವಾ ಬೇರೆ ದಿನಾಂಕಕ್ಕೆ ರೀಸ್ಕೆಡ್ಯೂಲ್ ಮಾಡಬಹುದು. ಇದಕ್ಕೆ ಯಾವ ಶುಲ್ಕ ಪಡೆಯಲಾಗುವುದಿಲ್ಲ. ಈ ಸೇವೆಗೆ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಾಟ್ಸಾಪ್ ಸಂಖ್ಯೆ (+91 6360012345) ನೀಡಿದೆ.

ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಫ್ಲೈಟ್ ರದ್ದಾಗಿದೆಯಾ ಇಲ್ಲವಾ ಎಂಬುದನ್ನು ಪರಿಶೀಲಿಸಿ. ಅಲ್ಲಿಗೆ ಹೋಗಿ ಫ್ಲೈಟ್ ರದ್ದಾಗಿದ್ದರೆ ಸುಮ್ಮನೆ ಸಮಯ ವ್ಯಯವಾದಂತಾಗುತ್ತದೆ. ಫ್ಲೈಟ್ ರದ್ದಾಗಿದ್ದರೆ ಮೆಸೇಜ್ ಬರಬಹುದು. ಮೂರು ಗಂಟೆಗೂ ಹೆಚ್ಚು ಕಾಲ ಫ್ಲೈಟ್ ವಿಳಂಬವಾಗಿದ್ದಲ್ಲಿ ನಿಮಗೆ ಬೇಕೆಂದರೆ ಫ್ಲೈಟ್ ರದ್ದು ಮಾಡಿ ಪೂರ್ಣ ಹಣವನ್ನು ರೀಫಂಡ್ ಪಡೆಯಲು ಅವಕಾಶ ಇರುತ್ತದೆ.

ಇದನ್ನೂ ಓದಿ: ಹುಷಾರಿಲ್ಲವೆಂದು ಏರ್ ಇಂಡಿಯಾದ 300 ಉದ್ಯೋಗಿಗಳ ಮೊಬೈಲ್ ಸ್ವಿಚ್ ಆಫ್; ಗಗನಸಖಿಯರು ಸೇರಿ 30 ಮಂದಿ ಲೇ ಆಫ್

ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆ ಸದ್ಯ 292 ಫ್ಲೈಟ್​ಗಳನ್ನು ಆಪರೇಟ್ ಮಾಡುತ್ತಿದೆ. ಅದರ ಮಾಲಕ ಸಂಸ್ಥೆಯಾದ ಏರ್ ಇಂಡಿಯಾ 20 ಮಾರ್ಗಗಳಲ್ಲಿ ಫ್ಲೈಟ್ ಸರ್ವಿಸ್ ಕೊಡಲಿದೆ.

ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್​ಪ್ರೆಸ್ ಎರಡೂ ಕೂಡ ಟಾಟಾ ಗ್ರೂಪ್ ಒಡೆತನದಲ್ಲಿವೆ. ಏರ್ ಇಂಡಿಯಾದ ಉಪಸಂಸ್ಥೆಯಾಗಿರುವ ಏರ್ ಇಂಡಿಯಾ ಎಕ್ಸ್​ಪ್ರೆಸ್ ಅಗ್ಗದ ದರದಲ್ಲಿ ವಿಮಾನ ಪ್ರಯಾಣ ಸೇವೆ ನೀಡುತ್ತದೆ. ಕೇರಳದಿಂದ ಇದರ ಸೇವೆ ಹೆಚ್ಚಿದೆ. ತಮಿಳುನಾಡು ಮತ್ತು ಕರ್ನಾಟಕದಿಂದಲೂ ಇದು ಫ್ಲೈಟ್ ಆಪರೇಟ್ ಮಾಡುತ್ತದೆ.

ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಅನ್ಯಾಯ ಆಗುತ್ತಿದೆ. ಸಿಬ್ಬಂದಿ ಮಧ್ಯೆ ತಾರತಮ್ಯತೆ ನಡೆಯುತ್ತಿದೆ. ಇವೇ ಮುಂತಾದ ಆರೋಪಗಳನ್ನು ಉದ್ಯೋಗಿಗಳು ಮಾಡುತ್ತಿದ್ದಾರೆ. ಈ ಕಾರಣಕ್ಕೆ ಪ್ರತಿಭಟನೆಯ ಕುರುಹಾಗಿ ಸುಮಾರು 300 ಮಂದಿ ಉದ್ಯೋಗಿಗಳು ಸಾಮೂಹಿಕವಾಗಿ ಸಿಕ್ ಲೀವ್ ಹಾಕಿದ್ದರು. ದಿಢೀರನೇ ಆದ ಈ ಬೆಳವಣಿಗೆ ಬಳಿಕ ಹಲವಾರು ಫ್ಲೈಟ್​ಗಳನ್ನು ರದ್ದುಗೊಳಿಸಬೇಕಾಯಿತು.

ಇದನ್ನೂ ಓದಿ: ಬಿಜೆಪಿಗೆ ಹೆಚ್ಚು ಸ್ಥಾನ ಬರೊಲ್ಲವೆಂದು ನಲುಗುತ್ತಿದೆಯಾ ಷೇರುಪೇಟೆ? ಸತತ ಕುಸಿತಕ್ಕೆ ಇಲ್ಲಿವೆ ಐದು ಕಾರಣಗಳು

ರಜೆ ಹಾಕಿದ ಉದ್ಯೋಗಿಗಳ ವಿರುದ್ದ ಮ್ಯಾನೇಜ್ಮೆಂಟ್ ಕ್ರಮ ತೆಗೆದುಕೊಳ್ಳುತ್ತಿದೆ. ಮೊದಲ ಹಂತವಾಗಿ 30 ಮಂದಿ ವಿಮಾನ ಕ್ಯಾಬಿನ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ