ಬೆಂಗಳೂರಲ್ಲಿ 10 ವರ್ಷದಲ್ಲಿ ಡಬಲ್ ಆಗಿದ್ದಾರೆ ಶ್ರೀಮಂತರು; ನ್ಯೂಯಾರ್ಕ್ ವಿಶ್ವದಲ್ಲೇ ಶ್ರೀಮಂತ
Number of Millionaires in Bengaluru double in 10 years: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಬರೋಬ್ಬರಿ ಮೂರೂವರೆ ಲಕ್ಷ ಮಿಲಿಯನೇರ್ಗಳು, ಅರವತ್ತು ಬಿಲಿಯನೇರ್ಗಳಿದ್ದಾರೆ. ಈ ನಗರದ ಸಂಪತ್ತು ಬರೋಬ್ಬರಿ 3 ಟ್ರಿಲಿಯನ್ ಡಾಲರ್ ಇದೆ. ಪ್ರತೀ 24 ಜನರಲ್ಲಿ ಒಬ್ಬರು ಮಿಲಿಯನೇರ್ಸ್ ಇಲ್ಲಿದ್ದಾರೆ. ಬೆಂಗಳೂರಿನಲ್ಲಿ 13,200 ಮಿಲಿಯನೇರ್ಗಳಿದ್ದಾರೆ. ಕಳೆದ 10 ವರ್ಷದಲ್ಲಿ ಸಿಲಿಕಾನ್ ಸಿಟಿಯಲ್ಲಿ ಮಿಲಿಯನೇರ್ಸ್ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ.
ಬೆಂಗಳೂರು, ಮೇ 9: ಹಲವು ಐಟಿ ಕಂಪನಿಗಳನ್ನು ಹೊಂದಿ ಭಾರತದ ಸಿಲಿಕಾನ್ ಸಿಟಿ ಎಂದು ಖ್ಯಾತವಾಗಿರುವ ಬೆಂಗಳೂರಿನಲ್ಲಿ ಸ್ಟಾರ್ಟಪ್ಗಳ ಸಂಖ್ಯೆಯೂ ಹೆಚ್ಚು. ಅಂತೆಯೇ ಶ್ರೀಮಂತರ ಸಂಖ್ಯೆಯೂ ಹೆಚ್ಚಿರುವ ನಗರಿ ಇದು. ಕಳೆದ 10 ವರ್ಷದಲ್ಲಿ ಬೆಂಗಳೂರಿನಲ್ಲಿ ಮಿಲಿಯನೇರ್ಸ್ ಅಥವಾ ಕೋಟ್ಯಾಧಿಪತಿಗಳ (Millionaires) ಸಂಖ್ಯೆ ದ್ವಿಗುಣಗೊಂಡಿದೆ. ಎಮಿಗ್ರೇಶನ್ ಕನ್ಸಲ್ಟೆನ್ಸಿಯಾದ ಹೆನ್ಲೀ ಅಂಡ್ ಪಾರ್ಟ್ನರ್ಸ್ ಸಂಸ್ಥೆ (Henley and Partners) ಪ್ರಕಾರ ಬೆಂಗಳೂರಿನಲ್ಲಿ ಶ್ರೀಮಂತರ ಸಂಖ್ಯೆ 13,200 ಇದೆಯಂತೆ. ವಿಶ್ವದಲ್ಲೇ ಅತಿವೇಗವಾಗಿ ಶ್ರೀಮಂತರು ಹೆಚ್ಚುತ್ತಿರುವ ನಗರಗಳ ಪೈಕಿ ಬೆಂಗಳೂರು ಇದೆ.
ಬೆಂಗಳೂರು ಮಾತ್ರವಲ್ಲದೆ ವಿಯೆಟ್ನಾಂನ ಹೋ ಚಿ ಮಿನ್ ಸಿಟಿ, ಅಮೆರಿಕದ ಆರಿಜೋನಾದ ಸ್ಕಾಟ್ಸ್ಡೇಲ್ ಮೊದಲಾದ ಕೆಲ ನಗರಗಳಲ್ಲಿ 10 ವರ್ಷದಲ್ಲಿ ಮಿಲಿಯನೇರ್ಗಳ ಸಂಖ್ಯೆ ಡಬಲ್ ಆಗಿದೆ. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಬೆಂಗಳೂರಿಗಿಂತ ಮೂವತ್ತು ಪಟ್ಟು ಹೆಚ್ಚು ಮಿಲಿಯನೇರ್ಸ್ ಇದ್ದಾರೆ. ಇಲ್ಲಿ ಬರೋಬ್ಬರಿ 3,50,000 ಮಿಲಿಯನೇರ್ಸ್ ನೆಲಸಿದ್ದಾರೆ. ವಿಶ್ವದ ಯಾವುದೇ ನಗರದಲ್ಲೂ ಇಷ್ಟೊಂದು ಸಂಖ್ಯೆಯಲ್ಲಿ ಶ್ರೀಮಂತರಿಲ್ಲ.
ಇದನ್ನೂ ಓದಿ: ಸಂಪತ್ತು ಮರುಹಂಚಿಕೆ: ಸ್ವೀಡನ್ ಉದಾಹರಣೆ, ಚೀನಾ ಪಿತೂರಿಯತ್ತ ಬೊಟ್ಟುಮಾಡಿದ ಆರ್ಥಿಕ ತಜ್ಞ ಗೌತಮ್ ಸೇನ್
ಸೋಜಿಗ ಎಂದರೆ ಇದು… ನ್ಯೂಯಾರ್ಕ್ ನಗರದಲ್ಲಿ ಇರುವ ಜನಸಂಖ್ಯೆ 82 ಲಕ್ಷ ಮಾತ್ರ. ಇವರಲ್ಲಿ ಮೂರೂವರೆ ಲಕ್ಷ ಜನರು ಕೋಟ್ಯಾಧಿಪತಿಗಳಿದ್ದಾರೆ. ಅಂದರೆ ಪ್ರತೀ 24 ಜನರಲ್ಲಿ ಒಬ್ಬರು ಮಿಲಿಯನೇರ್ಗಳು ನ್ಯೂಯಾರ್ಕ್ನಲ್ಲಿದ್ದಾರೆ. ಈ ಅಮೆರಿಕನ್ ಮಹಾನಗರಿಯಲ್ಲಿ ಬಿಲಿಯನೇರ್ಗಳ ಸಂಖ್ಯೆಯೇ ಬರೋಬ್ಬರಿ 60 ಇದೆ.
ಈ ನ್ಯೂಯಾರ್ಕ್ ನಗರದ ಒಟ್ಟಾರೆ ಸಂಪತ್ತು 3 ಟ್ರಿಲಿಯನ್ ಡಾಲರ್ ಇದೆ ಇದೆ. ಅಂದರೆ ಭಾರತದ ಒಟ್ಟಾರೆ ಜಿಡಿಪಿಗೆ ಹತ್ತಿರದಷ್ಟು ಸಂಪತ್ತು ಈ ಒಂದು ನಗರದಲ್ಲೇ ಇದೆ ಎನ್ನುವುದು ಮತ್ತೊಂದು ಸೋಜಿಗ.
ಇದನ್ನೂ ಓದಿ: ನರೇಂದ್ರ ಮೋದಿ ಭಾರತ ಪುಟಿದೇಳುವಂತೆ ಮಾಡಿದ್ದಾರೆ: ಅಮೆರಿಕನ್ ಉದ್ಯಮಿ ಶ್ಲಾಘನೆ
ಬಡವರನ್ನೂ ಶ್ರೀಮಂತರನ್ನಾಗಿ ಮಾಡುತ್ತಾ ಈ ನ್ಯೂಯಾರ್ಕ್?
ಮತ್ತೊಂದು ಅಚ್ಚರಿ ಎಂದರೆ ಅಮೆರಿಕವು ವಲಸಿಗರನ್ನು ಕೈಬೀಸಿ ಕರೆಯುತ್ತದೆ. ಜಾಗತಿಕವಾಗಿ ವಲಸೆ ಹೋಗುವವರಲ್ಲಿ ಹೆಚ್ಚಿನವರು ಅಮೆರಿಕಕ್ಕೆ ಹೋಗುತ್ತಾರೆ. ಅದರಲ್ಲೂ ನ್ಯೂಯಾರ್ಕ್ ನಗರದಲ್ಲಿ ಹೋಗಿ ಬದುಕು ಕಟ್ಟಿಕೊಳ್ಳುವವರ ಸಂಖ್ಯೆ ಹೆಚ್ಚು. ಇಲ್ಲಿ ಬದುಕು ದುಬಾರಿ. ಬಾಡಿಗೆ, ಆಹಾರ ಇತ್ಯಾದಿ ಸೌಕರ್ಯಕ್ಕೆ ವೆಚ್ಚ ಅಧಿಕ. ಆದರೂ ಕೂಡ ನಗರದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ