AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಷಾರಿಲ್ಲವೆಂದು ಏರ್ ಇಂಡಿಯಾದ 300 ಉದ್ಯೋಗಿಗಳ ಮೊಬೈಲ್ ಸ್ವಿಚ್ ಆಫ್; ಗಗನಸಖಿಯರು ಸೇರಿ 30 ಮಂದಿ ಲೇ ಆಫ್

Air India Express Fires 30 Cabin Crew Members: ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ ಗಗನಸಖಿಯರು ಸೇರಿದಂತೆ 30 ಮಂದಿ ಕ್ಯಾಬಿನ್ ಸಿಬ್ಬಂದಿಯನ್ನು ಲೇ ಆಫ್ ಮಾಡಲಾಗಿದೆ. ವೇತನ ತಾರತಮ್ಯ ಸೇರಿದಂತೆ ಬೇರೆ ಬೇರೆ ಕಾರಣಕ್ಕೆ ಮ್ಯಾನೇಜ್ಮೆಂಟ್ ವಿರುದ್ಧ ನಡೆಯುತ್ತಿರುವ ಉದ್ಯೋಗಿಗಳ ಪ್ರತಿಭಟನೆ ಮೇ 8ರಂದು ಬೇರೊಂದು ಹಂತಕ್ಕೆ ಹೋಗಿತ್ತು. ಬುಧವಾರ ಏಕಾಏಕಿ 300 ಉದ್ಯೋಗಿಗಳು ಸಾಮೂಹಿಕವಾಗಿ ಸಿಕ್ ಲೀವ್ ಹಾಕಿ ತಮ್ಮ ಮೊಬೈಲ್ ಅನ್ನೂ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಈ ಘಟನೆಯಲ್ಲಿ ಭಾಗಿಯಾದವರು ಮತ್ತು ಕಾರಣರಾದವರ ಮೇಲೆ ಮ್ಯಾನೇಜ್ಮೆಂಟ್ ಕ್ರಮ ಕೈಗೊಳ್ಳುತ್ತಿದೆ.

ಹುಷಾರಿಲ್ಲವೆಂದು ಏರ್ ಇಂಡಿಯಾದ 300 ಉದ್ಯೋಗಿಗಳ ಮೊಬೈಲ್ ಸ್ವಿಚ್ ಆಫ್; ಗಗನಸಖಿಯರು ಸೇರಿ 30 ಮಂದಿ ಲೇ ಆಫ್
ಏರ್ ಇಂಡಿಯಾ ಎಕ್ಸ್​ಪ್ರೆಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 09, 2024 | 11:12 AM

Share

ನವದೆಹಲಿ, ಮೇ 9: ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ (Air India Express) ವಿವಿಧ ವಿಮಾನಗಳ ಗಗನಸಖಿಯರು ಸೇರಿದಂತೆ 30 ಮಂದಿ ಕ್ಯಾಬಿನ್ ಸಿಬ್ಬಂದಿಯನ್ನು (cabin crew) ಕೆಲಸದಿಂದ ತೆಗೆದುಹಾಕಲಾಗಿದೆ. ಇನ್ನೂ ಬಹಳಷ್ಟು ಜನರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ನಿನ್ನೆ ಬುಧವಾರ ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 300 ಉದ್ಯೋಗಿಗಳು ಸಾಮೂಹಿಕವಾಗಿ ಸಿಕ್ ಲೀವ್ ಪಡೆದಿದ್ದರು. ಅಲ್ಲದೇ ತಮ್ಮ ಮೊಬೈಲ್​ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು. ಇದರಿಂದ ನಿನ್ನೆ ಬರೋಬ್ಬರಿ 76 ವಿಮಾನಗಳು ರದ್ದಾಗಲು ಕಾರಣವಾಗಿತ್ತು. ಈ ಕಾರಣಕ್ಕೆ ರಜೆ ಹಾಕಿದವರ ವಿರುದ್ಧ ಕ್ರಮ ಜರುಗಿಸುತ್ತಿದೆ. ಸದ್ಯಕ್ಕೆ 30 ಮಂದಿಯನ್ನು ಲೇ ಆಫ್ ಮಾಡಲಾಗಿದೆ. ಈ ಸಾಮೂಹಿಕ ರಜೆ ಸಕಾರಣವಿಲ್ಲದೇ ಪೂರ್ವಯೋಜಿತವಾಗಿ ತೆಗೆದುಕೊಂಡಿದ್ದು ಎಂದು ಕಂಪನಿ ಕಾರಣ ನೀಡಿ ಅವರನ್ನು ಸೇವೆಯಿಂದ ವಜಾಗೊಳಿಸಿದೆ. ಸಾಮೂಹಿಕವಾಗಿ ರಜೆ ಹಾಕಿದ ಇತರ ಉದ್ಯೋಗಿಗಳಲ್ಲಿ ಹೆಚ್ಚಿನವರನ್ನು ಕೆಲಸದಿಂದ ತೆಗೆಯಬಹುದು.

ಉದ್ಯೋಗಿಗಳು ಸಾಮೂಹಿಕವಾಗಿ ರಜೆ ಹಾಕಲು ಏನು ಕಾರಣ?

ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಸಂಸ್ಥೆಯ ಹೊಸ ಉದ್ಯೋಗ ನಿಯಮಗಳ ಬಗ್ಗೆ ಅನೇಕ ಉದ್ಯೋಗಿಗಳಿಗೆ ಅಸಮಾಧಾನ ಇದೆ. ಜೊತೆಗೆ ಸಿಬ್ಬಂದಿಯೊಳಗೆ ತಾರತಮ್ಯತೆ ಇದೆ. ಹಿರಿಯ ಸ್ಥಾನಗಳಿಗೆಂದು ನಡೆದ ಸಂದರ್ಶನದಲ್ಲಿ ಆಯ್ಕೆಯಾಗಿರುವ ಉದ್ಯೋಗಿಗಳಿಗೆ ಕಿರು ಹುದ್ದೆಗಳನ್ನು ನೀಡಲಾಗುತ್ತಿದೆ. ಸಂಬಳದಲ್ಲೂ ಕೊಕ್ಕೆ ಹಾಕಲಾಗುತ್ತಿದೆ. ಇವೇ ಮುಂತಾದ ಕಾರಣಗಳಿಗೆ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಸಂಪತ್ತು ಮರುಹಂಚಿಕೆ: ಸ್ವೀಡನ್ ಉದಾಹರಣೆ, ಚೀನಾ ಪಿತೂರಿಯತ್ತ ಬೊಟ್ಟುಮಾಡಿದ ಆರ್ಥಿಕ ತಜ್ಞ ಗೌತಮ್ ಸೇನ್

ಭಾರತದ ಇಡೀ ವೈಮಾನಿಕ ಕ್ಷೇತ್ರದಲ್ಲಿ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಸಂಸ್ಥೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಒಂದೆಡೆಯಾದರೆ, ಪೈಲಟ್ ಹಾಗೂ ಇತರೆ ಸಿಬ್ಬಂದಿಯ ಮುಷ್ಕರಗಳು ಇನ್ನೊಂದೆಡೆ ಈ ಕ್ಷೇತ್ರವನ್ನು ಬಾಧಿಸುತ್ತಿದೆ. ಟಾಟಾ ಗ್ರೂಪ್​ಗೆ ಸೇರಿದ ಇನ್ನೊಂದು ವಿಮಾನ ಸಂಸ್ಥೆ ವಿಸ್ತಾರಾ ಏರ್ಲೈನ್ಸ್​ನ ಪೈಲಟ್​ಗಳ ಪ್ರತಿಭಟನೆಯಿಂದಾಗಿ ಕಳೆದ ವಾರ ವಿಮಾನ ಸೇವೆ ವ್ಯತ್ಯಯಗೊಂಡಿತ್ತು. ಅದರ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಮಸ್ಯೆ ಎದುರಿಸುತ್ತಿದೆ.

ಉದ್ಯೋಗಿಗಳ ಪರ ನಿಂತ ಪ್ರಾದೇಶಿಕ ಕಾರ್ಮಿಕ ಆಯುಕ್ತರು…

ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ ಮ್ಯಾನೇಜ್ಮೆಂಟ್ ತಮ್ಮ ಬದ್ಧತೆಯಿಂದ ಹಿಂದಕ್ಕೆ ಸರಿದಿದೆ. ಸಿಬ್ಬಂದಿಯನ್ನು ಸರಿಯಾಗಿ ನಡೆಸಿಕೊಳ್ಳಲಾಗುತ್ತಿಲ್ಲ ಎಂದು ಏರ್ ಇಂಡಿಯಾ ಎಕ್ಸ್​ಪ್ರೆಸ್ ಉದ್ಯೋಗಿಗಳ ಒಕ್ಕೂಟ ಹೇಳಿದೆ. ಆದರೆ, ಏರ್ ಇಂಡಿಯಾ ಸಂಸ್ಥೆ ಯಾವ ಉದ್ಯೋಗಿಗಳ ಸಂಘಟನೆಯನ್ನು ಮಾನ್ಯ ಮಾಡುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ನರೇಂದ್ರ ಮೋದಿ ಭಾರತ ಪುಟಿದೇಳುವಂತೆ ಮಾಡಿದ್ದಾರೆ: ಅಮೆರಿಕನ್ ಉದ್ಯಮಿ ಶ್ಲಾಘನೆ

ಅದರೆ, ರೀಜನಲ್ ಲೇಬಲ್ ಕಮಿಷನರ್ ಅವರು ಉದ್ಯೋಗಿಗಳ ಕರೆಗೆ ಸ್ಪಂದಿಸಿದ್ದಾರೆ. ಏರ್ ಇಂಡಿಯಾದ ಮ್ಯಾನೇಜ್ಮೆಂಟ್​ನಿಂದ ಕಾರ್ಮಿಕ ಕಾನೂನುಗಳ ಉಲ್ಲಂಘನೆ ಆಗಿದೆ ಎಂದು ಆಯುಕ್ತರಾದ ಅಶೋಕ್ ಪೆರುಮಾಳ್ಳ ಅವರು ಮೇ 3ರಂದು ಏರ್ ಇಂಡಿಯಾ ಛೇರ್ಮನ್ ಎನ್ ಚಂದ್ರಶೇಖರನ್​ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ