ಬಿಜೆಪಿಗೆ ಹೆಚ್ಚು ಸ್ಥಾನ ಬರೊಲ್ಲವೆಂದು ನಲುಗುತ್ತಿದೆಯಾ ಷೇರುಪೇಟೆ? ಸತತ ಕುಸಿತಕ್ಕೆ ಇಲ್ಲಿವೆ ಐದು ಕಾರಣಗಳು

India Stock Market fall: ಭಾರತದ ಷೇರು ಮಾರುಕಟ್ಟೆ ಕಳೆದ ಐದಾರು ಸೆಷನ್​ಗಳಿಂದ ನಿರಂತರವಾಗಿ ಕುಸಿಯುತ್ತಿದೆ. ಕಳೆದ ಎರಡು ವಾರಗಳಿಂದ ಇಂಡಿಯಾ ವಿಐಎಕ್ಸ್ ಇಂಡೆಕ್ಸ್ ಹೆಚ್ಚುತ್ತಿದೆ. ಫಿಯರ್ ಇಂಡೆಕ್ಸ್ ಎಂದು ಪರಿಗಣಿಸಲಾಗಿರುವ ಈ ಸೂಚ್ಯಂಕದ ಏರಿಕೆಗೂ ಲೋಕಸಭಾ ಚುನಾವಣೆಗೂ ಸಂಬಂಧ ಇರಬಹುದು ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 290-300 ಸ್ಥಾನ ಗಳಿಸಬಹುದು ಎಂಬ ವದಂತಿ ಹಬ್ಬಿರುವುದರಿಂದ ಷೇರು ಮಾರುಕಟ್ಟೆಯಲ್ಲಿ ಭಯಭೀತ ವಾತಾವರಣ ತಂದಿರಬಹುದು ಎನ್ನಲಾಗುತ್ತಿದೆ.

ಬಿಜೆಪಿಗೆ ಹೆಚ್ಚು ಸ್ಥಾನ ಬರೊಲ್ಲವೆಂದು ನಲುಗುತ್ತಿದೆಯಾ ಷೇರುಪೇಟೆ? ಸತತ ಕುಸಿತಕ್ಕೆ ಇಲ್ಲಿವೆ ಐದು ಕಾರಣಗಳು
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 09, 2024 | 12:50 PM

ನವದೆಹಲಿ, ಮೇ 9: ಕಳೆದ ಐದಾರು ದಿನಗಳಿಂದ ಭಾರತದ ಷೇರು ಮಾರುಕಟ್ಟೆ (Stock Market) ಅಸ್ವಾಭಾವಿಕ ರೀತಿಯಲ್ಲಿ ಕುಸಿತ ಕಾಣುತ್ತಿದೆ. ಕಳೆದ ಶುಕ್ರವಾರದಿಂದ ಆರಂಭವಾದ ಅಲುಗಾಟ ಇವತ್ತು ಗುರುವಾರವೂ ನಡೆದಿದೆ. ಈ ಪರಿ ಕುಸಿತವು ರೀಟೇಲ್ ಹೂಡಿಕೆದಾರರನ್ನು ಗಲಿಬಿಲಿಗೊಳಿಸುತ್ತಿದೆ. ಬಿಎಸ್​ಇ ಸೆನ್ಸೆಕ್ಸ್, ಎನ್​ಎಸ್​ಇ ನಿಫ್ಟಿ ಸೂಚ್ಯಂಕಗಳು ಬಹಳಷ್ಟು ಇಳಿಕೆ ಕಾಣುತ್ತಿವೆ. ತಜ್ಞರು ಈ ಷೇರುಪೇಟೆ ಅಲುಗಾಟಕ್ಕೆ ಕೆಲ ಪ್ರಮುಖ ಕಾರಣಗಳನ್ನು ಗ್ರಹಿಸಿದ್ದಾರೆ. ವಿದೇಶೀ ಸಾಂಸ್ಥಿಕ ಹೂಡಿಕೆದಾರರಿಂದ (FII- Foreign Institutional Investors) ಬಂಡವಾಳ ಹಿಂತೆಗೆತ, ವೊಲಟಾಲಿಟಿ ಇಂಡೆಕ್ಸ್ (India VIX index) ಹೆಚ್ಚಳ, ಅಮೆರಿಕದ ಡಾಲರ್ ದರ, ಅಮೆರಿಕದ ಟ್ರೆಷರಿ ಮೌಲ್ಯ ಹೆಚ್ಚಳ, ಭಾರತೀಯ ಕಾರ್ಪೊರೇಟ್ ವಲಯದ ನಿರಾಶಾದಾಯಕ ತ್ರೈಮಾಸಿಕ ವರದಿ ಮೊದಲಾದ ಪ್ರಮುಖ ಕಾರಣಗಳಿವೆ. ಈ ಪೈಕಿ ವಿಐಎಕ್ಸ್ ಅಥವಾ ವೊಲಾಟಿಲಿಟಿ ಇಂಡೆಕ್ಸ್ ವಿಚಾರ ಸೋಜಿಗ ಮೂಡಿಸುವಂತಿದೆ. ಲೋಕಸಭಾ ಚುನಾವಣೆಯ ನಿರೀಕ್ಷೆಗೆ ಸಂಬಂಧಿಸಿದಂತೆ ಇದು ತೋರುತ್ತಿದೆ.

ಬಿಜೆಪಿಯ 400 ಪಾರ್ ಸ್ಲೋಗನ್ ಫ್ಲಾಪ್ ಆಗುತ್ತಾ?

ಭಾರತದಲ್ಲಿ ವಿಐಎಕ್ಸ್ ಇಂಡೆಕ್ಸ್, ಅಥವಾ ವೊಲಟಾಲಿಟಿ ಇಂಡೆಕ್ಸ್ ಗಣನೀಯವಾಗಿ ಹೆಚ್ಚುತ್ತಿದೆ. ಇದು ಷೇರು ಮಾರುಕಟ್ಟೆಯಲ್ಲಿ ಭಯದ ವಾತಾವರಣ ಗ್ರಹಿಸುವ ಸೂಚಿ ಎನ್ನಲಡ್ಡಿ ಇಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಈ ಇಂಡೆಕ್ಸ್ ಹೆಚ್ಚುತ್ತದೆ. ಈ ಬಾರಿಯೂ ಇದು ಹೆಚ್ಚಳವಾಗುತ್ತಿರುವುದು ಅಸಹಜವೇನಲ್ಲ.

ಇದನ್ನೂ ಓದಿ: ಬೆಂಗಳೂರಲ್ಲಿ 10 ವರ್ಷದಲ್ಲಿ ಡಬಲ್ ಆಗಿದ್ದಾರೆ ಶ್ರೀಮಂತರು; ನ್ಯೂಯಾರ್ಕ್ ವಿಶ್ವದಲ್ಲೇ ಶ್ರೀಮಂತ

ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ. ಈಗಾಗಲೇ ಮೂರು ಹಂತದ ಚುನಾವಣೆಗಳಾಗಿವೆ. ಎನ್​ಡಿಎ ಮೈತ್ರಿಕೂಟ 400 ಸ್ಥಾನ ಗಳಿಸುವುದಿರಲಿ, ಕಳೆದ ಬಾರಿಗಿಂತಲೂ ಕಡಿಮೆ ಗಳಿಸಬಹುದು ಎನ್ನುವಂತಹ ಮಾತು ದಟ್ಟವಾಗಿ ಕೇಳಿ ಬರುತ್ತಿದೆ. 290ರಿಂದ 300 ಸ್ಥಾನಗಳು ಮಾತ್ರ ಬಿಜೆಪಿ ಗೆಲ್ಲಬಹುದು ಎನ್ನಲಾಗುತ್ತಿದೆ. ಈ ಕಾರಣಕ್ಕೆ ವಿಐಎಕ್ಸ್ ಇಂಡೆಕ್ಸ್, ಅಥವಾ ಆತಂಕದ ಸ್ಥಿತಿ ಹೆಚ್ಚಳವಾಗುತ್ತಿರಬಹುದು ಎಂದು ಕೆಲ ವಿಶ್ಲೇಷಕರು ಹೇಳಿದ್ದಾರೆ.

ಷೇರು ಪೇಟೆ ಕುಸಿತಕ್ಕೆ ಇತರ ಕಾರಣಗಳೇನಿರಬಹುದು?

ಫಾರೀನ್ ಇನ್ಸ್​ಟಿಟ್ಯೂಶನಲ್ ಇನ್ವೆಸ್ಟರ್ಸ್ ಅಥವಾ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಈ ತಿಂಗಳು ಸಾಕಷ್ಟು ಷೇರುಗಳ ಮಾರಾಟಕ್ಕೆ ನಿಂತಿವೆ. ಕ್ಯಾಶ್ ಸೆಗ್ಮೆಂಟ್​ನಲ್ಲಿ ಮೇ ತಿಂಗಳಲ್ಲಿ 15 ಸಾವಿರ ಕೋಟಿ ರೂಗೂ ಹೆಚ್ಚು ಮೌಲ್ಯದ ಭಾರತೀಯ ಷೇರುಗಳನ್ನು ಎಫ್​ಐಐಗಳು ಬಿಕರಿ ಮಾಡಿವೆ.

ಇದನ್ನೂ ಓದಿ: ಈ ಷೇರುಗಳು ಶೇ. 90ರಷ್ಟು ಬೀಳುತ್ತವೆ, ಹುಷಾರ್: ಹೂಡಿಕೆದಾರ ಶಂಕರ್ ಶರ್ಮಾ ಎಚ್ಚರಿಸಿದ ಸ್ಟಾಕ್ಸ್ ಯಾವುವು?

ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ವಿಚಾರದಲ್ಲಿ ಕಠಿಣ ನಿಲುವುಗಳನ್ನು ತೆಗೆದುಕೊಳ್ಳುವ ಸೂಚನೆ ಕೊಟ್ಟಿದ್ದು, ಇದರಿಂದ ಡಾಲರ್ ಮತ್ತಷ್ಟು ಗಟ್ಟಿಗೊಂಡಿದೆ. ಅದರ ಬಾಂಡ್ ಯೀಲ್ಡ್ ಹೆಚ್ಚಾಗುತ್ತಿದೆ. ಇದು ಹೂಡಿಕೆದಾರರನ್ನು ಅತ್ತ ಆಕರ್ಷಿಸುವಂತೆ ಮಾಡಿದೆ.

ಮತ್ತೊಂದು ಕಾರಣವೆಂದರೆ, ಅದು ಭಾರತೀ ಕಂಪನಿಗಳ ನಿರಾಶಾದಾಯಕ ತ್ರೈಮಾಸಿಕ ವರದಿ. ಹೆಚ್ಚಿನ ಕಂಪನಿಗಳು ನಿರೀಕ್ಷೆಯ ಮಟ್ಟದಲ್ಲಿ ಆದಾಯ ಮತ್ತು ಲಾಭ ಕಂಡಿಲ್ಲ. ಹೀಗಾಗಿ, ಮಾರುಕಟ್ಟೆ ಆಕರ್ಷಣೆ ಕಳೆದುಕೊಂಡಿರಬಹುದು ಎಂಬ ಅಭಿಪ್ರಾಯ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್