ಉತ್ತರಾಖಂಡದ ಈ ಜೈಲ್ಲಿನಲ್ಲಿ ಒಂದು ರಾತ್ರಿ ಕಳೆದರೆ ನಿಮ್ಮ ಕಷ್ಟಗಳು ದೂರವಾಗುತ್ತವೆ

| Updated By: ವಿವೇಕ ಬಿರಾದಾರ

Updated on: Oct 01, 2022 | 7:30 AM

ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ಜೈಲ್ಲಿನಲ್ಲಿ ಒಂದು ರಾತ್ರಿ ಕಳೆದರೆ ನಿಮ್ಮ ಕಷ್ಟಗಳು ದೂರವಾಗುತ್ತವೆ

ಉತ್ತರಾಖಂಡದ ಈ ಜೈಲ್ಲಿನಲ್ಲಿ ಒಂದು ರಾತ್ರಿ ಕಳೆದರೆ ನಿಮ್ಮ ಕಷ್ಟಗಳು ದೂರವಾಗುತ್ತವೆ
ಉತ್ತರಾಖಂಡದ ಜೈಲು
Follow us on

ನಿಮಗೆ ಕಷ್ಟಗಳು ಎದುರಾದರೆ ಪರಿಹಾರ ಕಂಡುಕೊಳ್ಳಲು ಕಾಶಿ, ರಾಮೇಶ್ವರ ಅಥವಾ ಇತ್ಯಾದಿ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಹಾರ ಆಗುತ್ತದೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ಒಬ್ಬ ಜ್ಯೋತಿಷಿಯು ನಿಮ್ಮ ಕಷ್ಟಗಳು ದೂರವಾಗಬೇಕಾದರೇ ಅಥವಾ ಭವಿಷ್ಯದ ದಿನಗಳಲ್ಲಿ ನೀವು ಜೈಲಿಗೆ ಹೋಗುವ ಸನ್ನೀವೇಶ ಎದುರಾಗಲಿದ್ದರೆ ಅದನ್ನು ತಡೆಗಟ್ಟಲು ಈಗಲೇ ಜೈಲಿಗೆ ಹೋಗಿ ಎಂದು ಹೇಳುತ್ತಾರೆ. ಹೌದು ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ಜೈಲ್ಲಿನಲ್ಲಿ ಒಂದು ರಾತ್ರಿ ಕಳೆದರೆ ನಿಮ್ಮ ಕಷ್ಟಗಳು ದೂರವಾಗುತ್ತವೆ ಮತ್ತು ಭವಿಷ್ಯದ ದಿನಗಳಲ್ಲಿ ನೀವು ಜೈಲಿಗೆ ಹೋಗುವ ಪ್ರಸಂಗ ಇದ್ದರೆ ಅದನ್ನು ತಡೆಯುತ್ತದೆ.

ನಿಮ್ಮ ಕಷ್ಟ ದೂರವಗಲು ಈ ಜೈಲಿನಲ್ಲಿ ಒಂದು ರಾತ್ರಿ ಕಳೆಯಲು 500ರೂ ನೀಡಬೇಕಾಗುತ್ತದೆ. ಈ ಜೈಲನ್ನು 1903 ರಲ್ಲಿ ನಿರ್ಮಿಸಲಾಗಿದೆ. ಈಗ ಈ ಜೈಲಿನಲ್ಲಿ ಕೈದಿಗಳನ್ನು ಹಾಕುತ್ತಿಲ್ಲ ಬದಲಾಗಿ ಕಷ್ಟ ಎಂದು ಬರುವ ಅತಿಥಿಗಳನ್ನು ಇರಿಸಲಾಗುತ್ತಿದೆ. ಈ ಜೈಲಿನಲ್ಲಿ ಕೆಲವು ಗಂಟೆಗಳಕಾಲ ಇರಿಸಲು ವ್ಯಕ್ತಿಗಳ ಹೆಸರನ್ನು ಮೇಲಿನ ಅಧಿಕಾರಿಗಳು ಶಿಪಾರಸ್ಸು ಮಾಡುತ್ತಾರೆ. ಅವರ ಶಿಪಾರಸ್ಸಿನ ಮೇರೆಗೆ ಅತಿಥಿ ಕೈದಿಗಳಿಗೆ ಜೈಲಿನ ಸಮವಸ್ತ್ರ ಮತ್ತು ಜೈಲಿನ ಅಡುಗೆಮನೆಯಲ್ಲಿ ಮಾಡಿದ ಆಹಾರವನ್ನು ನೀಡಲಾಗುತ್ತದೆ ಎಂದು ಕಾರಾಗೃಹದ ಉಪ ಜೈಲು ಅಧೀಕ್ಷಕ ಸತೀಶ್ ಸುಖಿಜಾ ಅವರು ಖಾಸಿಗಿ ಸುದ್ದಿ ಸಂಸ್ಥೆ TOI ಗೆ ಹೇಳಿದ್ದಾರೆ ಎಂದು ಇಂಡಿಯಾ ಡಾಟ್​ ಕಾಮ್​ ವರದಿ ಮಾಡಿದೆ.

ಕಾರಾಗೃಹದ ಅನುಭವವನ್ನು ಪಡೆಯಬೇಕು ಎಂದು ಬಯಸುವ ವ್ಯಕ್ತಿಗಳಿಗೆ ಈ ಜೈಲ್ಲಿನಲ್ಲಿ ಇರಲು ಅವಕಾಶ ಮಾಡಿಕೊಡಲಾಗುತ್ತದೆ. ಮತ್ತು ಜಾತಕದಲ್ಲಿ ಭವಿಷ್ಯದ ದಿನಗಳಲ್ಲಿ ಜೈಲಿಗೆ ಹೋಗುವ ಪ್ರಸಂಗ ಬರುವಂತಿದ್ದರೆ ಅದನ್ನು ತಡೆಯಲು ಈ ಜೈಲಿನಲ್ಲಿ ಸಮಯ ಕಳೆಯಲು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.