ವರ್ಕ್​ ಫ್ರಂ ಹೋಂ ಮತ್ತು ವರ್ಕ್​ ಫ್ರಂ ಆಫೀಸ್​; ಪೈ ಚಾರ್ಟ್​ ಹಂಚಿಕೊಂಡ ಹರ್ಷ ಗೋಯೆಂಕಾ

WFH : ಉದ್ಯೋಗಿಯು ಕಚೇರಿಯಿಂದ ಕೆಲಸ ಮಾಡಿದಾಗ ಮತ್ತು ವರ್ಕ್​ ಫ್ರಂ ಹೋಂ ಮಾಡಿದಾಗ ಸಮಯದ ಹೂಡಿಕೆಯಲ್ಲಿ ಉಂಟಾಗುವ ವ್ಯತ್ಯಾಸವನ್ನು ಈ ಪೈ ಚಾರ್ಟ್​ಗಳು ಸೂಚಿಸುತ್ತವೆ.

ವರ್ಕ್​ ಫ್ರಂ ಹೋಂ ಮತ್ತು ವರ್ಕ್​ ಫ್ರಂ ಆಫೀಸ್​; ಪೈ ಚಾರ್ಟ್​ ಹಂಚಿಕೊಂಡ ಹರ್ಷ ಗೋಯೆಂಕಾ
ಉದ್ಯಮಿ ಹರ್ಷ ಗೋಯೆಂಕಾ
ಶ್ರೀದೇವಿ ಕಳಸದ | Shridevi Kalasad

|

Sep 30, 2022 | 4:34 PM

Trending : ಕೊವಿಡ್​ನಿಂದ ಅಸ್ತವ್ಯಸ್ತಗೊಂಡಿದ್ದ ಜನಜೀವನ ನಿಧಾನ ಸಮಸ್ಥಿತಿಗೆ ಹೊರಳುತ್ತಿದೆ. ವರ್ಕ್​ ಫ್ರಂ ಹೋಂ ಮಾಡುತ್ತಿದ್ದ ಜನರು ಕಚೇರಿಗಳಿಗೆ ತೆರಳಿ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಕಾರ್ಗತ್ತಲೆ ಕಳೆದು ಹಳೆಯ ದಿನಚರಿಗೆ ಬರುತ್ತಿದ್ದೇವೆ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೂ ಕೆಲ ಕಂಪೆನಿಗಳು ವರ್ಕ್​​ ಫ್ರಂ ಹೋಮ್​ಗೆ ಅವಕಾಶ ಕಲ್ಪಿಸಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡ ಉದ್ಯಮಿ ಹರ್ಷ್ ಗೋಯೆಂಕಾ, ಉದ್ಯಮಿ ಹರ್ಷ ಗೋಯೆಂಕಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಎರಡು ಪೈ ಚಾರ್ಟ್​ ಅನ್ನು ಹಂಚಿಕೊಂಡಿದ್ದು, ನೆಟ್ಟಿಗರು ಈ ವಿಷಯವಾಗಿ ಈ ಚುರುಕಿನಿಂದ ಚರ್ಚೆಯಲ್ಲಿ ತೊಡಗಿಕೊಂಡಿದ್ದಾರೆ. ಉದ್ಯೋಗಿಗಳು ಕಚೇರಿಯಲ್ಲಿ ಕೆಲಸ ಮಾಡುವುದು ಉತ್ತಮ ಎನ್ನುವುದು ಈ ಕಾರಣಕ್ಕೆ ಎಂದು ಮೊದಲ ಚಾರ್ಟ್​ ಹಂಚಿಕೊಂಡಿದ್ದಾರೆ.

ವರ್ಕ್​ ಫ್ರಂ ಹೋಮ್ ಮಾಡುವ ಉದ್ಯೋಗಿ ಮತ್ತು ಕಚೇರಿಗೆ ಹೋಗಿ ಕೆಲಸ ಮಾಡುವ ಉದ್ಯೋಗಿಯ ಮಧ್ಯೆ ಸಮಯಯ ಹೂಡಿಕೆಯಲ್ಲಿ ಉಂಟಾಗುವ ವ್ಯತ್ಯಾಸದ ಕುರಿತಾಗಿ ಈ ಪೈ ಚಾಟ್​ ನಿರೂಪಿಸಲ್ಪಟ್ಟಿದೆ. ​

ಮೊದಲ ಚಾರ್ಟ್‌ನಲ್ಲಿ ಕೆಲಸಕ್ಕೆ ಆದ್ಯತೆ ನೀಡಲಾಗಿದೆ. ಎರಡನೇ ಚಾರ್ಟ್‌ನಲ್ಲಿ ಪ್ರಯಾಣ ಮತ್ತು ಚಾಟಿಂಗ್‌ನಂತಹ ಇತರೇ ವಿಷಯಗಳು ಹೇಗೆ ಅನುತ್ಪಾದಕತೆಯನ್ನು ಸೂಚಿಸುತ್ತವೆ ಎನ್ನುವುದನ್ನು ತೋರಿಸಲಾಗಿದೆ.

ಈ ಪೋಸ್ಟ್​ ಅನ್ನು 4,4,000 ಜನರು ಇಷ್ಟಪಟ್ಟಿದ್ದಾರೆ. ಕೆಲವರು ಗೋಯೆಂಕಾ ಅವರ ಅಭಿಪ್ರಾಯವನ್ನು ಬೆಂಬಲಿಸಿದರೆ, ಅನೇಕರು ವರ್ಕ್​ ಫ್ರಂ ಹೋಮ್​ ಸೂಕ್ತವಲ್ಲ ಎಂದಿದ್ದಾರೆ. ವರ್ಕ್​ ಫ್ರಂ ಹೋಂ ಮಾಡುವಾಗ ಮನೆಗೆಲಸಗಳು ಸಮಯವನ್ನು ನುಂಗುತ್ತವೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಒಬ್ಬರು, ‘ಕಚೇರಿಯ ಓಡಾಟದ ಸಮಯ ತಪ್ಪುವುದರಿಂದ ನಾನು ಯೋಗ, ಧ್ಯಾನ, ಕ್ರಿಕೆಟ್​, ಓದು, ವಾಕಿಂಗ್​ನಂಥ ಚಟುವಟಿಕೆಗೆ ತೊಡಗಿಕೊಳ್ಳುತ್ತೇನೆ’ ಎಂದಿದ್ದಾರೆ.

ನಿಮಗೇನು ಅನ್ನಿಸುತ್ತೆ ಈ ವಿಷಯವಾಗಿ?

ಇದನ್ನೂ ಓದಿ

ಮತ್ತಷ್ಟು ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada