20 ಸೆಕೆಂಡಿನಲ್ಲಿ ಈ ಕಟ್ಟಡದಲ್ಲಿ ಅಡಗಿಕೊಂಡಿರುವ 2 ಪಕ್ಷಿಗಳನ್ನು ಕಂಡುಹಿಡಿಯುವಿರಾ?
Optical Illusion : ಅಮೆರಿಕದ ಈ ಕೆಂಪು ಕಟ್ಟಡದಲ್ಲಿ ಎರಡು ಪಕ್ಷಿಗಳು ಅಡಗಿವೆ. ಬಹುಶಃ ನಿಮಗೆ ಹೆಚ್ಚು ಸಮಯ ಬೇಕಾಗಬಹುದೇನೋ ಆ ಪಕ್ಷಿಗಳನ್ನು ಗುರುತಿಸಲು.
Viral Optical Illusion : ಇಂಥ ಬ್ರೇನ್ ಟೀಸರ್ಗಳನ್ನು ತಲೆ ಕೆಡಿಸಿಕೊಂಡಾದರೂ ಸರಿ, ಉತ್ತರ ಹುಡುಕಿಯೇ ಸೈ ಎಂಬಂತೆ ಅತ್ಯಾಸಕ್ತಿಯಿಂದ ಭಾಗವಹಿಸುತ್ತಿದ್ಧಾರೆ ನೆಟ್ಟಿಗರು. ಪ್ರಶ್ನೆ ಯಾವತ್ತೂ ಜಟಿಲವೇ. ಸಾವಧಾನವಾಗಿ ಯೋಚಿಸಿ, ಚಿತ್ತೈಸಿದರೆ ಅಂತಿಮಹಂತದಲ್ಲಿ ಸಿಗುವ ಸಿಹಿಫಲ ಕೊಡುವ ಖುಷಿ ಮಾತ್ರ ಅಗಾಧ. ಆ ಸಣ್ಣ ಖುಷಿಗಾಗಿ ಕಷ್ಟಪಡಲೇಬೇಕಲ್ಲವೆ? ಈಗ ಇಲ್ಲೊಂದು ಬ್ರೇನ್ ಟೀಸರ್ ಇದೆ. ಅಮೆರಿಕದ ನ್ಯೂಯಾರ್ಕ್ನಲ್ಲಿರುವ ಈ ದೊಡ್ಡ ಕಟ್ಟಡದಲ್ಲಿ ಎರಡು ಪಕ್ಷಿಗಳು ಅಡಗಿ ಕುಳಿತಿವೆ. ಅವುಗಳನ್ನು ಗುರುತಿಸಲು ನೆಟ್ಟಿಗರು ಬಹಳ ಶ್ರಮವಹಿಸುತ್ತಿದ್ದಾರೆ. ನಿಮಗೇನಾದರೂ ಪಕ್ಷಿಗಳನ್ನು 20 ಸೆಕೆಂಡುಗಳಲ್ಲಿ ಗುರುತಿಸಲು ಸಾಧ್ಯವೇ? ಪ್ರಯತ್ನಿಸಿ.
ಕ್ಲಿಷ್ಟಕರವಾದ ಈ ಬ್ರೇನ್ ಟೀಸರ್ ಅನ್ನು ಶೇ.1 ರಷ್ಟು ಜನ ಮಾತ್ರ ಗುರುತಿಸಬಹುದು ಎಂದು ಅಂದಾಜಿಸಲಾಗಿದೆ. ಈ ಚಿತ್ರದಲ್ಲಿ ಮರ, ಟ್ರಾಫಿಕ್ ಸಿಗ್ನಲ್, ಕೆಂಪು ಇಟ್ಟಿಗೆಯ ಕಟ್ಟಡ ಇದೆ. ಹಾಗಿದ್ದರೆ ಆ ಎರಡು ಪುಟ್ಟ ಹಕ್ಕಿಗಳು ಎಲ್ಲಿ ಅಡಗಿ ಕುಳಿತಿರಲು ಸಾಧ್ಯ? ಮತ್ತೆ ಕಾಲಾವಕಾಶ ತೆಗೆದುಕೊಂಡು ಹುಡುಕಲು ಪ್ರಯತ್ನಿಸಿ.
ಎಷ್ಟೇ ಕಣ್ಣಿಟ್ಟು ನೋಡಿದರೂ ಹಕ್ಕಗಳು ಮಾತ್ರ ಸಿಗುತ್ತಿಲ್ಲ ಅಲ್ಲವೆ? ಸ್ವಲ್ಪ ಹತ್ತಿರ ಬಂದು ನೋಡಿ. ಆದರೂ ಸಿಗುತ್ತಿಲ್ಲವಲ್ಲ ಪಕ್ಷಿಗಳು?
ಸರಿ ಹಾಗಿದ್ದರೆ ಒಂದು ಸಣ್ಣ ಸುಳಿವು : ಕಟ್ಟಡದ ಮೇಲೆ ಕಟ್ಟಡದ ಹೆಸರನ್ನು ಬರೆದ ಕಟ್ಟೆಯ ಬಲಮಧ್ಯ ಭಾಗ ಗಮನಿಸಿ. ಕಂಡವಾ?
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:02 pm, Fri, 30 September 22